ಪಾಲಿಕೆ: ಪೌರಕಾರ್ಮಿಕರ ವಾರ್ಡ್ ಬದಲಾವಣೆ

ತುಮಕೂರು
               ತುಮಕೂರು ನಗರದಲ್ಲಿ ಈಗಿರುವ ಸ್ವಚ್ಛತಾ ಕಾರ್ಯದಲ್ಲಿ ಮತ್ತಷ್ಟು ಸುಧಾರಣೆ ತರುವ ಸಲುವಾಗಿ ತುಮಕೂರು ಮಹಾನಗರ ಪಾಲಿಕೆಯ ಆಡಳಿತವು ಪೌರಕಾರ್ಮಿಕರನ್ನು ಅವರು ಹಾಲಿ ಕಾರ್ಯನಿರ್ವಹಿಸುತ್ತಿರುವ ವಾರ್ಡ್‌ಗಳಿಂದ ಮತ್ತೊಂದು ವಾರ್ಡ್‌ಗೆ ಬದಲಾವಣೆ ಮಾಡಿದೆ.
               ‘‘ಪಾಲಿಕೆಯಲ್ಲಿ ಹಾಲಿ 507 ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಬಹಳಷ್ಟು ಜನರು ಒಂದೇ ವಾರ್ಡ್‌ನಲ್ಲಿ ಹಲವು ವರ್ಷಗಳಿಂದ ಕೆಲಸ ನಿರ್ವಹಿಸುವವರಾಗಿದ್ದಾರೆ. ಇವರ ಕೆಲಸದಲ್ಲಿ ಮತ್ತಷ್ಟು ಸುಧಾರಣೆ ಹಾಗೂ ಚುರುಕುತನ ತರುವ ಸಲುವಾಗಿ ಇವರನ್ನು ಮತ್ತೊಂದು ವಾರ್ಡ್‌ಗೆ ಬದಲಾಯಿಸುವ ತೀರ್ಮಾನಕ್ಕೆ ಬಂದು, ಇವರೆಲ್ಲರನ್ನೂ ರ‌್ಯಾಂಡಂ ಆಗಿ ಒಂದು ವಾರ್ಡ್‌ನಿಂದ ಮತ್ತೊಂದು ವಾರ್ಡ್‌ಗೆ ಅದಲು ಬದಲು ಮಾಡಲಾಗಿದೆ’’ ಎಂದು ಪಾಲಿಕೆಯ ಮೂಲಗಳಿಂದ ತಿಳಿದುಬಂದಿದೆ.
          ‘‘ಈ ರೀತಿ ಬದಲಾವಣೆ ಮಾಡುವ ಮುನ್ನ ಪ್ರತಿ ಪೌರಕಾರ್ಮಿಕರ ವಯಸ್ಸನ್ನು ಸಹ ಪರಿಗಣಿಸಲಾಗಿದೆ. ಮಹಿಳೆಯರಿದ್ದರೆ ಅದನ್ನೂ ವಿಶೇಷವಾಗಿ ಪರಿಗಣಿಸಲಾಗಿದೆ. ಯಾವುದೇ ತಾರತಮ್ಯ ಇಲ್ಲದಂತೆ ಗಮನಿಸಲಾಗಿದೆ’’ ಎಂದು ಹೇಳಲಾಗಿದೆ.
           ‘‘2019 ರ ಜನವರಿಯಲ್ಲಿ ರಾಷ್ಟ್ರಾದ್ಯಂತ ‘ಸ್ವಚ್ಛ ಸರ್ವೇಕ್ಷಣ’ ಸಮೀಕ್ಷೆ ಆರಂ‘ವಾಗಲಿದೆ. ಅದಕ್ಕೆ ಮೊದಲು ತುಮಕೂರು ನಗರವನ್ನು ‘ಕಸ ಮುಕ್ತ ನಗರ’ ಎಂಬ ಅರ್ಹತೆಗೆ ಅಣಿಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಒಟ್ಟು 7 ನಕ್ಷತ್ರ (ಸ್ಟಾರ್) ಗಳ ಸ್ಥಾನಗಳಿದ್ದು, ತುಮಕೂರು ನಗರವು ಕನಿಷ್ಟ 5 ನಕ್ಷತ್ರ (ಸ್ಟಾರ್) ದ ಸ್ಥಾನದಲ್ಲಾದರೂ ನಿಲ್ಲಲೇಬೇಕು. ಇಂತಹ ದೂರದೃಷ್ಟಿಯನ್ನಿಟ್ಟುಕೊಂಡು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುವ ಸಲುವಾಗಿ ಪೌರಕಾರ್ಮಿಕರ ವಾರ್ಡ್‌ಗಳನ್ನು ಅದಲು ಬದಲು ಮಾಡಲಾಗಿದೆ’’ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಹಳಬರು-ಹೊಸಬರಿಂದ ಒತ್ತಡ
               ಪಾಲಿಕೆಯ ಆಡಳಿತವು ಸ್ವಚ್ಛತಾ ಕಾರ್ಯದಲ್ಲಿ ಸು‘ಾರಣೆ ತರುವ ಸಲುವಾಗಿ ಪೌರಕಾರ್ಮಿಕರನ್ನು ಒಂದು ವಾರ್ಡ್‌ನಿಂದ ಮತ್ತೊಂದು ವಾರ್ಡ್‌ಗೆ ಬದಲಾವಣೆ ಮಾಡುತ್ತಿದ್ದಂತೆಯೇ, ಇತ್ತ ಕೆಲ ಪೌರಕಾರ್ಮಿಕರು ‘‘ತಮ್ಮನ್ನು ಬದಲಾವಣೆ ಮಾಡದೆ ಅದೇ ವಾರ್ಡ್‌ನಲ್ಲಿ ಉಳಿಸಬೇಕೆಂದು’’ ಪಾಲಿಕೆಯ ಹಳೆಯ ಸದಸ್ಯರು ಮತ್ತು ಇದೀಗ ಆಯ್ಕೆಯಾಗಿರುವ ಹೊಸ ಸದಸ್ಯರ ಮೂಲಕ ಪಾಲಿಕೆಯ ಅಧಿಕಾರಿಗಳ ಮೇಲೆ ಒತ್ತಡ ಹಾಕಿಸುತ್ತಿರುವ ಸಂಗತಿಯೂ ಬೆಳಕಿಗೆ ಬರುತ್ತಿದೆ. ಈ ರೀತಿ ಒತ್ತಡ ಹಾಕುವ ತಂತ್ರ ಸ್ವತಃ ತುಮಕೂರು ನಗರದ ಶಾಸಕರೂ ಅಧಿಕಾರಿಗಳಿಗೆ ೆನ್ ಮಾಡುವವರೆಗೂ ಹೋಗಿದೆ. ಅಷ್ಟರ ಮಟ್ಟಿಗೆ ಕೆಲವು ಪೌರಕಾರ್ಮಿಕರು ಲಾಬಿ ಮಾಡುತ್ತಿದ್ದಾರೆಂದು ಪಾಲಿಕೆಯಲ್ಲಿ ಹೇಳಲಾಗುತ್ತಿದೆ.
               ಆದರೆ ಪಾಲಿಕೆಯ ಅಧಿಕಾರಿಗಳು ಹಳೆಯ ಸದಸ್ಯರು, ಹೊಸ ಸದಸ್ಯರು ಮತ್ತು ಶಾಸಕರಿಗೆ ವಾಸ್ತವ ಸಂಗತಿ ತಿಳಿಸುತ್ತ, ‘‘ಸ್ವಚ್ಛತಾ ಕಾರ್ಯದ ಸುಧಾರಣೆಗಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆಯಷ್ಟೇ. ಅದೂ ಸಹ ಇವರನ್ನು ಅಕ್ಕಪಕ್ಕದ ವಾರ್ಡ್‌ಗಷ್ಟೇ ಬದಲಿಸಲಾಗಿದೆ. ಮಿಗಿಲಾಗಿ ಇವರು ಯಾವ ವಾರ್ಡ್‌ಗೆ ಹೋದರೂ ಸ್ವಚ್ಛತಾ ಕಾರ್ಯವನ್ನೇ ಮಾಡಬೇಕಲ್ಲವೇ?’’ ಎಂಬಿತ್ಯಾದಿಯಾಗಿ ಸಮಜಾಯಿಷಿ ನೀಡಿ ಸಮಾಧಾನಪಡಿಸಿದ್ದಾರೆಂದು ತಿಳಿದುಬಂದಿದೆ.

Recent Articles

spot_img

Related Stories

Share via
Copy link