ಗುರುವೇನು ಮಹಾ ಎನ್ನುವ ಸಮಾಜಕ್ಕೆ ಬೆಳವಣಿಗೆಯಿಲ್ಲ. ಪ್ರೊ. ಆರಾಧ್ಯ ಎಸ್.ಆರ್

ತುಮಕೂರು

              ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಯೋಜಿಸಲಾಗಿದ್ದ ಶಿಕ್ಷಕ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಪ್ರೊ.ಆರಾಧ್ಯ ಎಸ್ ಆರ್ ರವರು ವಿದ್ಯಾರ್ಥಿಗಳಾದವರು ಗುರುಗಳಿಗೆ ಗೌರವ ಕೊಡುತ್ತಿದ್ದ ಕಾಲಘಟ್ಟ ನಾಶವಾಗಿದೆಯೆಂದರೆ ಸಮಾಜಘಾತುಕ ಶಕ್ತಿಗಳ ನಿರ್ಮಾಣವಾಗುತ್ತಿದೆ ಎಂಬ ಮುನ್ಸೂಚನೆ ಎಂದರು. ವಿದ್ಯಾರ್ಥಿಗಳು ಗುರುಗಳನ್ನು ಗೌರವಿಸುವುದು. ಬದುಕಿನ ಮೌಲ್ಯಗಳನ್ನು ಕಟ್ಟಿಕೊಡುತ್ತಿರುವ ಗುರಿ ನೀಡಿ ಪ್ರೋತ್ಸಾಹಿಸುತ್ತಿರುವ ಗುರಗಳಿಗೆ ಮಾತ್ರ, ಅವರು ಮಾತ್ರ ನಿಜ ಸಮಾಜ ನಿರ್ಮಾತೃಗಳು ಎಂದು ಅಭಿಪ್ರಾಯಪಟ್ಟರು. ದೀಪ ಹಚ್ಚು ಶಿಕ್ಷಕರಾಗಬೇಕೆ ಹೊರತು ಬೆಂಕಿ ಇಡುವವರು, ಕಿಡಿ ಹೊತ್ತಿಸುವವರಾಗಬಾರದು ಎಂದು ಯುವ ಶಿಕ್ಷಕರಿಗೆ ಸಂದೇಶ ನೀಡಿದರು.
              ರಾಸೇಯೋ ವಿದ್ಯಾರ್ಥಿನಿ ರೇಖಾ ಮಾತನಾಡಿ ಗುರುವಿನ ಗುಲಾಮನಾಗದ ಹೊರತು ದೊರೆಯದಣ್ಣ ಮುಕ್ತಿಯೆಂಬಂತೆ, ನಾವು ಗುರುಗಳನ್ನು ಹಿಂಬಾಲಿಸಿ ನಡೆದು ತೋರುವ ಮಾರ್ಗದರ್ಶನವನ್ನು ಬದುಕಿನ ಹಾದಿಯಾಗಸಿ ಕೊಳ್ಳಬೇಕಿದೆಯೆಂದರು, ಡಾ.ಸರ್ವೇಪಲ್ಲಿ ರಾಧಕೃಷ್ಣರವರ 130 ನೇ ಜಯಂತೋತ್ಸವವನ್ನು ಇಂದು ಆಚರಿಸುತ್ತಿರುವ ಈ ಸಂಧರ್ಭದಲ್ಲಿ ಎಲ್ಲಾ ಮಕ್ಕಳು ಶಿಕ್ಷಕರನ್ನು ಅಭಿನಂದಿಸುವುದರ ಜೊತೆಗೆ ನಿಮ್ಮ ಮನೆಯಲ್ಲಿರುವ ಪ್ರಥಮ ಗುರುವನ್ನು ಗೌರವಿಸಿ ಅಭಿನಂದಿಸಿ ಎಂದು ಕರೆನೀಡಿದರು. ಇಂದು ಜಗತ್ತಿನ ಎಲ್ಲಾ ಹೆಣ್ಣು ಮಕ್ಕಳು ಹೆಣ್ಣಾಗಿ ಹುಟ್ಟಿರುವುದಕ್ಕೆ ಸಂತೋಷಪಡಿ ನಾವೆಲ್ಲರೂ ಒಂದಲ್ಲ ಒಂದು ಕಾರಣಗಳಿಂದ ನೋವು ಅನುಭವಿಸುತ್ತಲೆ ಜಗತ್ತನ್ನು ಬೆಳಗುತ್ತಿರುವ ದೀವಿಗೆಗಳು ಎಂದು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು.
              ವಿದ್ಯಾರ್ಥಿಗಳು ಎಂಕಾ, ಬಿಕಾಂ, ಬಿಎ, ಬಿಎಸ್ಸಿ ಉಪನ್ಯಾಸಕರುಗಳನ್ನೇಲ್ಲಾ ಒಂದೇ ವೇದಿಕೆಯಲ್ಲಿ ವ್ಯವಸ್ಥಿತವಾಗಿ ಸೇರಿಸಿ ಕಿರುಕಾಣಿಕೆಯಾಗಿ ಪುಸ್ತಕ ಮತ್ತು ಪೆನ್ನುಗಳನ್ನು ನೀಡಿ ತಮ್ಮ ಗೌರವ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದರು, ಶಿಕ್ಷಕರಿಗೆ ವಿವಿದ ಸಾಂಸ್ಕøತಿಕ ಸ್ಪರ್ಧೇ ಏರ್ಪಡಿಸಿ ವಿಜೇತರಿಗೆ ಪುಸ್ತಕಗಳನ್ನು ಕೊಡುಗೆ ನೀಡಿ, ಯಾರಿಗಾದರೂ ಕೊಡುಗೆ ಅಥವಾ ಬಹುಮಾನ ನೀಡಬೇಕಿದ್ದರೆ ಪುಸ್ತಕಗಳು ಅಥವಾ ಗಿಡಗಳನ್ನು ನೀಡುವುದರ ಮೂಲಕ ಜ್ಞಾನ ಮತ್ತು ಪರಿಸರದ ಬದುಕು ನಿರ್ಮಿಸಿಕೊಳ್ಳುತ್ತೇವೆಂದು ಗುರುಗಳ ಸಮ್ಮುಖದಲ್ಲಿ ಪ್ರತಿಜ್ಞೆ ಮಾಡಿದರು,
              ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ.ಹೆಚ್.ಎನ್ ವಿಜಯೇಂದ್ರÀ್ವಹಿಸಿದ್ದರು, ಕಾರ್ಯಕ್ರಮದ ನಿರೂಪಣೆಯನ್ನು ಅಮೃತ ಮಾಡಿದರೆ, ಮುಬಿನ್ ತಾಜ್ ಪ್ರಾರ್ಥಿಸಿದರು, ವಿಜಯ ಬಾರ್ಗವ್ ಸ್ವಾಗತಿಸಿದರೆ, ರಾಸೇಯೋ ಕಾರ್ಯಕ್ರಮಾಧಿಕಾರಿ ಶ್ರೀನಿವಾಸಮೂರ್ತಿ ಎಲ್ ಗಂಗಾತನಯಸಿರಿ ವಂದಿಸಿದರು, ಕಾರ್ಯಕ್ರಮದಲ್ಲಿ ಲಕ್ಷ್ಮೀಪ್ರಸಾದ್, ಷಾಹಿದ್, ಸುಪ್ರಿಯ, ಮುಸ್ಕಾನ್ ತಾಜ್, ಉಪಸ್ಥಿತರಿದ್ದರು ವಿದ್ಯಾರ್ಥಿಗಳು ಕಿರು ನಾಟಕ ಪ್ರದರ್ಶಿಸುವುದರ ಮೂಲಕ ಸಮಾಜಕ್ಕೆ ಗುರುಗಳ ಮಹತ್ವವೇನೆಂದು ಸಾರಿದರು.

Recent Articles

spot_img

Related Stories

Share via
Copy link