ಜಾರಕಿಹೊಳಿ ಸಹೋದರರು ಪಕ್ಷ ಹೊಡೆಯಲ್ಲ; ಮೇಟಿ

ಬಾಗಲಕೋಟೆ;

              ಜಾರಕಿಹೊಳಿ ಸಹೋದರರು ಪಕ್ಷ ಕಟ್ಟುತ್ತಾರೆಯೇ ಹೊರತು, ಪಕ್ಷ ಹೊಡೆಯಲ್ಲ ಎಂದು ಮಾಜಿ ಸಚಿವ ಹೆಚ್.ವೈ.ಮೇಟಿ ತಿಳಿಸಿದ್ದಾರೆ.ಬೆಳಗಾವಿ ಜಿಲ್ಲಾ ಕಾಂಗ್ರೆಸ್‍ನಲ್ಲಿ ಉಂಟಾಗಿರುವ ಆಂತರಿಕ ಕಲಹಕ್ಕೆ ಪ್ರತಿಕ್ರಿಯಿಸಿ,ಮಾತನಾಡುತ್ತಿದ್ದ ಅವರು, ಜಾತ್ಯಾತೀತ ಮನೋಭಾವ ಹೊಂದಿರುವ ಈ ಸಹೋದರರ ಭಿನ್ನಾಭಿಪ್ರಾಯ ಏನಿದ್ದರೂ ಬೆಳಗಾವಿ ಜಿಲ್ಲೆಗೆ ಮಾತ್ರ ಸೀಮಿತವಾಗಿದೆ. ಅವರು ಮತ್ತು ನನ್ನ ಒಡನಾಟ 40 ವರ್ಷಗಳದ್ದಾಗಿದೆ. ಹೀಗಿರುವಾಗ ಅವರ ಮನಸ್ಸು ಎಂತಹುದು ಎಂದು ನಾನು ಬಲ್ಲೆ, ಈ ಸಹೋದರರ ಕಮಿಟ್‍ಮೆಂಟ್ ಇದೆ ಎಂದು ಹೇಳಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link