ಗುಬ್ಬಿ
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಪೀರ್ ಕಮಿಟಿಯು ಆಗಮಿಸಿದ್ದು ಎರಡು ದಿನಗಳ ಕಾಲ ಕಾಲೇಜಿನಲ್ಲಿನ ಶೈಕ್ಷಣಿಕ ಸೌಲಭ್ಯಗಳು, ಶೈಕ್ಷಣಿಕ ಗುಣಮಟ್ಟ, ಕ್ರೀಡೆ ಹಾಗೂ ಸಾಂಸೃತಿಕ ಕಾರ್ಯಕ್ರಮ ಫಲಿತಾಂಶದ ವಿವರ ಹೀಗೆ ಶೈಕ್ಷಣಿಕ ಮಾನದಂಡವನ್ನು ಅಳೆದು ಗ್ರೇಡ್ ನೀಡಲು ಬಿಹಾರ ರಾಜ್ಯದ ಉಪಕುಲಪತಿ ರಾಜೇಂದ್ರಪ್ರಸಾದ್, ಅಸ್ಸಾಂನ ದೆಬರ್ಶಿ ಪ್ರಸಾದ್ ಹಾಗೂ ಮಧ್ಯಪ್ರದೇಶದ ಡಾ:ಪಂಕಜ್ಶುಕ್ಲಾ ಆಗಮಿಸಿದ್ದು ಎರಡು ದಿನಗಳಕಾಲ ಕಾಲೇಜಿನ ಎಲ್ಲಾ ರೀತಿಯ ಶೈಕ್ಷಣಿಕ ಗುಣಮಟ್ಟವನ್ನು ಅಳೆಯಲಾಗುತ್ತದೆ. ನ್ಯಾಕ್ ಕಮಿಟಿ ಕಾಲೇಜಿಗೆ ಬೇಟಿ ನೀಡಿದ್ದರಿಂದ ಇಡಿ ಕಾಲೇಜಿನ ಆವರಣದಲ್ಲಿ ಹಬ್ಬದ ವಾತವರಣ ನಿರ್ಮಾಣಮಾಡಿದ್ದು ಹಳೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಜನಪ್ರತಿನಿಧಿಗಳ ಸಮಲೋಚನೆಯನ್ನು ಸಹ ಖುದ್ದು ಅವರೇ ಮಾಡಿ ಅಂಕಗಳನ್ನು ನೀಡಲಿದ್ದಾರೆಂದು ತಿಳಿದು ಬಂದಿದೆ.







