ಹಿರಿಯೂರು :
ಇಂದಿನ ಪ್ರಗತಿಪರ ಸಮಾಜದಲ್ಲಿ ಶಿಕ್ಷಕರ ಪಾತ್ರ ತುಂಬಾ ಮಹತ್ವವಾದದ್ದು ಶಿಕ್ಷಕರಿಂದ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ದೊರೆಯುತ್ತದೆ. ದೇಶದ ಎಲ್ಲೆಡೆಯೂ ಶಿಕ್ಷಕರು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು ಹಾಗೂ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜೀವನ ಚರಿತ್ರೆ ಬಗ್ಗೆ ತಿಳಿಸಿದರು ಅಲ್ಲದೇ ಎಲ್ಲಾ ವಿದ್ಯಾರ್ಥಿಗಳು ಗುರುಗಳಿಗೆ ವಿಧೇಯರಾಗಿದ್ದು ಉತ್ತಮ ಶಿಕ್ಷಣ ಪಡೆದು ಈ ದೇಶದ ಉನ್ನತ ಪ್ರಜೆಗಳಾಗಿ ಬೆಳೆಯಬೇಕು ಎಂಬುದಾಗಿ ಈ ಸಂದರ್ಭದಲ್ಲಿ ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷರಾದ ಸಪ್ನಾ ಸತೀಶ್ ಮಾತನಾಡಿ ತಿಳಿಸಿದರು.
ನಗರದ ಗಂಗಾಸೆಂಟ್ರಲ್ ಸಿಬಿಎಸ್‍ಸಿ ಶಾಲೆಯಲ್ಲಿ ಇನ್ನರ್‍ವೀಲ್‍ಕ್ಲಬ್ ಸಹಯೋಗದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಛೇರ್ಮನ್ ಓಬಣ್ಣ, ತೋಟಗಾರಿಕೆ ವಿವಿ ನಿವೃತ್ತ ಡೀನ್ ಡಾ.ಬಿ.ಮಹಾಂತೇಶ್ ಮತ್ತು ಶಾಲೆಯ ಉತ್ತಮ ಶಿಕ್ಷಕ ಶಫೀಉಲ್ಲಾ ರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗೀತಾರಾಧಾಕೃಷ್ಣ, ಪದ್ಮಜಾ ಎಂ ಶೆಟ್ಟಿ ಸೌಮ್ಯಪ್ರಶಾಂತ್, ಸ್ವರ್ಣಲತಾರೆಡ್ಡಿ, ರಚನಾ ಮತ್ತಿತರರು ಇದ್ದರು.