ದೊಡ್ಡೇರಿ:-
ಶತಶತಮಾನಗಳಿಂದಲೂ ನಮ್ಮ ಪೂರ್ವಿಕರು ಪ್ರತಿಗ್ರಾಮದಲ್ಲಿಯೂ ಸಹ ಒಂದೊಂದು ದೇವಾಲಯ ನಿರ್ಮಿಸಿಕೊಂಡು ಭಕ್ತಿ ಭಾವದಿಂದ ಪೂಜಿಸಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದರು ಎಂದು ಮಧುಗಿರಿ ಶಾಸಕ ವೀರಭದ್ರಯ್ಯ ತಿಳಿಸಿದರು
ಅವರು ದೊಡ್ಡೇರಿ ಹೋಬಳಿಗೆ ಸೇರಿದ ಸಿಡಿದರಗಲ್ಲು ಗ್ರಾಮದಲ್ಲಿ ನೆಲೆಸಿರುವ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯವರ ನೂತನ ದೇವಸ್ಥಾನ ಮತ್ತು ಕಳಶ ಪ್ರಥಿಸ್ಠಾಪನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಗ್ರಾಮದ ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರುಗಳ ಸಹಕಾರದಿಂದ ಶಿಥಿಲಗೊಂಡಿದ್ದ ದೇವಾಲಯವನ್ನು ಭಕ್ತರಿಂದಲೇ 2ಕೋಟಿ ರೂಗಳ ಹಣ ಸಂಗ್ರಹದಿಂದ ನೂತನ ದೇವಸ್ಥಾನ ನಿರ್ಮಿಸಿರುವುದು ಸಂತೋಷವಾಗಿದೆ ಎಂದರು ಹಾಗೆಯೇ ಮುಂದಿನ ದಿನಮಾನಗಳಲ್ಲಿ ಇನ್ನೂ ಹೆಚ್ಚಿನ ನೆಮ್ಮದಿಯ ತಾಣ ವಗಿರುವ ದೇಗುಲಗಳ ರಕ್ಷಣೆಯನ್ನು ಮತ್ತು ಅಭಿವೃದ್ಧಿ ಹಾಗೂ ಧಾನ ಧರ್ಮಗಳ ಕಡೆ ಇಂದಿನ ಯುವ ಪೀಳಿಗೆ ಹೆಚ್ಚಿನ ಗಮನ ಕೊಡಬೇಕಾಗಿದೆ ಎಂದರು ಇದೆ ಸಂಧರ್ಭದಲ್ಲಿ ದೊಡ್ಡೇರಿ ಹೋಬಳಿ ಕಂಗೊಳಿಸುತ್ತಿತ್ತು ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿದ್ದವು ಈಗ ಬರದ ನಾಡಾಗಿ ಪರಿವರ್ತನೆಯಾಗಿದೆ ವ್ಯವಸಾಯ ಸೊರಗುತ್ತಿದೆ ಇದರಿಂದ ರೈತರೂ ಸಹ ಸೊರಗುತ್ತಿದ್ದಾರೆ ರೈತರುಗಳು ವ್ಯವಸಾಯ ಬಿಟ್ಟು ನಗರ ಪ್ರದೇಶಗಳಿಗೆ ಹೋಗಿ ಜೀವನಮಾಡಲು ಹೊರಟಿರುವುದು ವಿಪರ್ಯಾಸವಾಗಿದೆ ಆದ್ದರಿಂದ ಮುಂದಿನ ದಿನಮಾನಗಳಲ್ಲಿ ಮಧುಗಿರಿ ತಾಲ್ಲೂಕಿನ ಎಲ್ಲಾ ಕೆರೆಗಳಿಗೂ ಎತ್ತಿನ ಹೊಳೆ ಮೂಲಕ ನೀರುಹರಿಸುವ ಕೆಲಸವನ್ನು ಮಾಡಿಸುತ್ತೇನೆ ಎಂದರು ಇದೆ ಸಂದರ್ಭದಲ್ಲಿ ಎಲೆ ರಾಂಪುರದ ಕುಂಚಿಟಿಗ ಮಠದ ಶ್ರೀ ಹನುಂತ ಸ್ವಾಮೀಜಿ ಆಶೀರ್ವಚನ ನೀಡಿ ಭಕ್ತರು ಸಮರ್ಪಣ ಭಾವದಿಂದ ಬದುಕಿ ದ್ವಂದ್ವ ನಿಲುವಿನಿಂದ ಹೊರಬಂದು ತಾಳ್ಮೆ ಮತ್ತು ಸಹನೆ ಯಿಂದ ಉತ್ತಮ ನೆಮ್ಮದಿ ಜೀವನ ಸಾಗಿಸ ಬಹುದು ಎಂದರು ಸಿದ್ದರಬೆಟ್ಟದ ಶ್ರೀ ಶ್ರೀ ಶ್ರೀ ಶಿವಾನಂದ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿ ಮಾನವನಿಂದ ನಿಶ್ಚಲ ಭಕ್ತಿಗಿಂತ ದೇವರು ಬೇರೇನೂ ಆಪೇಕ್ಷಿಸುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಲಿಯ ಅಧ್ಯಕ್ಷ ಬಂಡೀವೀರಪ್ಪ ತೋವಿನಕೆರೆ ಪರಮೇಶ್ವರಪ್ಪ ದೊಡ್ಡೇರಿ ವಿ ಎಸ್ ಎಸ್ ಎನ್ ಅಧ್ಯಕ್ಷ ಜಿ ಕೃಷ್ಣಮೂರ್ತಿ ಸಿಡಿದರಗಲ್ಲು ಶ್ರೀನಿವಾಸ್ ಗ್ರಾ.ಪಂ ಸದಸ್ಯರಾದ ಗಬಾಲಿ ರಾಜಣ್ಣ ಸಿಡಿದರಗಲ್ಲು ವಿಶ್ವನಾಥ್ ಸಣ್ಣೀರಪ್ಪ ಬಾವಿಮನೆ ಕಾಂತರಾಜು ವಾಸ್ತುಶಿಲ್ಪಿ ಗೋಪಾಲಪ್ಪ ಮುಖ್ಯಶಿಕ್ಷಕಿ ಸಿದ್ದಗಂಗಮ್ಮ ಬಲರಾಂ ತುಂಗೋಟಿ ರಾಮಣ್ಣ ಹಾಗೂ ಸಾರ್ವಜನಿಕರು ಭಕ್ತಾಧಿಗಳು ಹಾಜರಿದ್ದರು.