ನಾಟಕಗಳು ಮೌಲ್ಯಗಳನ್ನು ಸಾರುತ್ತವೆ: ಪ್ರಾಂಶುಪಾಲ ವಿಜಯೇಂದ್ರ

ತುಮಕೂರು:

             ನಾಟಕಗಳು ಮೌಲ್ಯಗಳನ್ನು ಸಾರುತ್ತವೆಎಂದುಪ್ರಾಂಶುಪಾಲ ಎಚ್.ಎನ್.ವಿಜಯೇಂದ್ರ ತಿಳಿಸಿದರು.
ನಗರದ ಶ್ರೀ ಸಿದ್ದಾರ್ಥ ಪ್ರಥಮದರ್ಜೆಕಾಲೇಜಿನಲ್ಲಿ ಶುಕ್ರವಾರಡಮರುಗರಂಗ ಸಂಪನ್ಮೂಲ ಕೇಂದ್ರದವತಿಯಿಂದ ಹಮ್ಮಿಕೊಂಡಿದ್ದ ಲಂಕೇಶ್‍ರವರ ತೆರೆಗಳು ಹೊಸ ರಂಗಪ್ರಯೋಗಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುವ ಸಮೂಹ ಆಧುನಿಕ ವ್ಯಾಮೋಹಕ್ಕೆ ಒಳಗಾಗದೆ ಮೌಲ್ಯಗಳನ್ನು ಅಳವಡಿಸಿಕೊಂಡು ಸುಸಂಸ್ಕøತ ಸಮಾಜ ನಿರ್ಮಿಸಬೇಕುಎಂದುಹೇಳಿದರು.
                ನಾಟಕಗಳನ್ನು ನೋಡಿ ಅನೇಕ ಮಹನೀಯರುತಪ್ಪುದಾರಿಯಿಂದ ಸರಿದಾರಿಗೆ ಬಂದು ವಿಶ್ವ ಮಟ್ಟಕ್ಕೆ ಬೆಳೆದಿರುವ ನಿದರ್ಶನಗಳಿವೆ. ಮೃಗೀಯ ಮನುಷ್ಯನನ್ನುಉತ್ತಮ ಮನುಷ್ಯನನ್ನಾಗಿ ಪರಿವರ್ತನೆ ಮಾಡುವಲ್ಲಿ ನಾಟಕಗಳು ಸಹಕಾರಿಯಾಗಿವೆಎಂದರು.
ಡಮರುಗರಂಗ ಸಂಪನ್ಮೂಲ ಕೇಂದ್ರದವತಿಯಿಂದಉತ್ತಮ ಸಂದೇಶವುಳ್ಳ ನಾಟಕವನ್ನು ಪ್ರದರ್ಶನ ಮಾಡಿ, ವಿದ್ಯಾರ್ಥಿಗಳ ಜೀವನಕ್ಕೆಅವಶ್ಯಕವಾದ ಮಾನವೀಯ ಮೌಲ್ಯಗಳನ್ನು ತಿಳಿಸಿಕೊಟ್ಟಿದ್ದಾರೆ ಎಂದರು.
                 ಅರೇನಾ ಅನಿಮೇಶನ್ ವ್ಯವಸ್ಥಾಪಕ ನಿರ್ದೇಶಕಎಲ್.ಗೌತಮ್ ಮಾತನಾಡಿ, ಮೊಬೈಲ್ ವ್ಯಾಮೋಹದಿಂದಾಗಿ ವಿದ್ಯಾರ್ಥಿಗಳು ಹಾದಿತಪ್ಪುತ್ತಿದ್ದು, ಅವಶ್ಯಕತೆಗೆತಕ್ಕಂತೆ ಮೊಬೈಲ್ ಬಳಸಬೇಕು.ಓದಿನ ಕಡೆ ಹೆಚ್ಚಿನ ಗಮನ ಹರಿಸಬೇಕುಎಂದರು.
ಪತ್ರಕರ್ತರಂಗನಾಥ ಕೆ.ಮರಡಿ ಮಾತನಾಡಿ, ಹಣದ ಹಿಂದೆಓಡುವ ಮನುಷ್ಯ ಮನುಷ್ಯತ್ವವನ್ನು ಕಳೆದುಕೊಳ್ಳುತ್ತಾನೆ. ಹಣದಿಂದ ವ್ಯಕ್ತಿತ್ವವನ್ನುಸಂಪಾದಿಸಲು ಸಾಧ್ಯವಿಲ್ಲ ಎಂದರು.
                ಹಣದ ಹಿಂದೆಓಡುವ ವ್ಯಕ್ತಿಗಳು ಇತಿಹಾಸವನ್ನು ಸೃಷ್ಟಿಸಲಾರರು. ಸಮಾಜಕ್ಕಾಗಿದುಡಿದ ವ್ಯಕ್ತಿಗಳು ಇತಿಹಾಸ ಸೃಷ್ಟಿಸುವುದರೊಂದಿಗೆಜೀವಂತವಾಗಿ ಉಳಿಯುತ್ತಾರೆ. ಪ್ರಪಂಚದಲ್ಲಿ ಸಾಧನೆ ಮಾಡುವವವರಿಗೆ ಮಾತ್ರ ಬೆಲೆ ಇದೆಎಂದು ತಿಳಿಸಿದರು.
ದೇಶದಲ್ಲಿ ಶಾಲೆಗಳಿಗಿಂತ ವೇಗವಾಗಿ ವೃದ್ದಾಶ್ರಮಗಳು ಹುಟ್ಟಿಕೊಳ್ಳುತ್ತಿರುವುದು ದುರಂತದ ಸಂಗತಿ.ಪೋಷಕರನ್ನು ಸಾಕಲಾಗದ ಮಕ್ಕಳು ನಮ್ಮಂತಹ ಮೌಲ್ಯಯುತದೇಶದಲ್ಲಿ ಹೆಚ್ಚುತ್ತಿರುವುದು ವಿಷಾದನೀಯಎಂದರು.
               ಉಪನ್ಯಾಸಕಪಿ.ರಾಘವೇಂದ್ರ ಮಾತನಾಡಿ, ನಾಟಕಗಳು ಮನುಷ್ಯನಲ್ಲಿ ಮನುಷ್ಯತ್ವವನ್ನುಬೆಳೆಸುತ್ತವೆ. ಸಾಹಿತ್ಯವನ್ನು ಹೆಚ್ಚು ಓದುವುದರಿಂದವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಾಧಕರಾಗಿ ಹೊರಹೊಮ್ಮಬೇಕುಎಂದರು.
ಆಧುನಿಕವಾಗಿ ಮೌಲ್ಯಗಳು ಮರೆಯಾಗುತ್ತಿವೆ. ಧಾರವಾಹಿಗಳ ವ್ಯಾಮೋದದಲ್ಲಿ ಪ್ರಾಚೀನ ಕಲೆಗಳು ಮಾಯವಾಗುತ್ತಿವೆ.               ಆದರೆಡಮರುಗಕೇಂದ್ರದಕಲಾವಿದರುಇಂದಿಗೂ ನಾಟಕದ ಮೂಲಕ ಅಳಿವಿನಂಚಿನಲ್ಲಿರುವ ಕಲೆಗಳನ್ನು ಉಳಿಸುವ ಪ್ರಯತ್ನ ಮಾಡುತ್ತಿರುವುದುಅಭಿನಂದನಾರ್ಹಎಂದರು.
              ತೆರೆಗಳು ನಾಟಕವನ್ನು ಡಮರುಗ ರಂಗ ಸಂಪನ್ಮೂಲ ಕೇಂದ್ರದ ಮೆಳೇಹಳ್ಳಿ ದೇವರಾಜು, ಡಮರುಗಉಮೇಶ್ ಮತ್ತು ತಂಡದ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು.
ಕಾರ್ಯಕ್ರಮದಲ್ಲಿಕನ್ನಡ ವಿಭಾಗದ ಮುಖ್ಯಸ್ಥಡಾ.ಬಿ.ಮಂಜೇಗೌಡ, ವಿಜಯ್ ಹೆನ್ರಿ, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

ಪೋಟೋ: ಶ್ರೀ ಸಿದ್ದಾರ್ಥ ಪ್ರಥಮದರ್ಜೆಕಾಲೇಜಿನಲ್ಲಿಡಮರುಗರಂಗ ಸಂಪನ್ಮೂಲ ಕೇಂದ್ರದವತಿಯಿಂದ ಹಮ್ಮಿಕೊಂಡಿದ್ದರಂಗಪ್ರಯೋಗಕಾರ್ಯಕ್ರಮದಲ್ಲಿ ಪತ್ರಕರ್ತರಂಗನಾಥ ಕೆ.ಮರಡಿ, ರಾಘವೇಂದ್ರ, ಎಲ್.ಗೌತಮ್, ಡಾ.ಬಿ.ಮಂಜೇಗೌಡ, ವಿಜಯ್ ಹೆನ್ರಿಇದ್ದರು.

Recent Articles

spot_img

Related Stories

Share via
Copy link