ಗುಬ್ಬಿ
ತಾಲ್ಲೂಕು ಯಾದವ ಸಂಘ, ರಾಜ್ಯ ಯಾದವ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಕರ್ನಾಟಕ ಯಾದವ ಯುವ ಸೇನೆಯ ಸಹಯೋಗದಲ್ಲಿ ಸೆ.9 ರಂದು ತಾಲ್ಲೂಕಿನ ಹೇರೂರು ಶ್ರೀಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಶ್ರೀಕೃಷ್ಣ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದ್ದು ದಿವ್ಯ ಸಾನ್ನಿಧ್ಯವನ್ನು ಶ್ರೀಕ್ಷೇತ್ರ ಗೊಲ್ಲಗಿರಿ ಮಹಾ ಸಂಸ್ಥಾನದ ಶ್ರೀಕೃಷ್ಣಯಾದವಾನಂದ ಮಹಾಸ್ವಾಮೀಜಿ ವಹಿಸಲಿದ್ದಾರೆ.
ಶಾಸಕರಾದ ಪೂರ್ಣಿಮಾ ಶ್ರೀನಿವಾಸ್ ಸಮಾರಂಭವನ್ನು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಯಾದವ ಸಂಘದ ಅಧ್ಯಕ್ಷ ಜಿ.ಎನ್.ಬೆಟ್ಟಸ್ವಾಮಿ ವಹಿಸಲಿದ್ದಾರೆ. ಐಎಫ್ಎಸ್ ಅಧಿಕಾರಿ ಚಿಕ್ಕಪ್ಪಯ್ಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಿದ್ದಾರೆ. ಸಮಾರಂಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಕೆ.ಯಶೋಧಮ್ಮ ಶಿವಣ್ಣ, ಉಪವಿಭಾಗಾಧಿಕಾರಿ ವೆಂಕಟೇಶಯ್ಯ, ಯಾದವ ಯುವ ಸೇನೆ ರಾಜ್ಯಾಧ್ಯಾಧ್ಯಕ್ಷ ಅಮ್ಮನಹಟ್ಟಿ ಹರೀಶ್, ಉಪನ್ಯಾಸಕ ಲೋಕೇಶ್, ಶ್ರೀಚಿಕ್ಕಣ್ಣ ಸ್ವಾಮಿ ಕ್ಷೇತ್ರದ ಅರ್ಚಕರಾದ ಡಾ:ಪಾಪಣ್ಣ, ಡಾ:ಶಿವಕುಮಾರ್, ಜುಂಜಪ್ಪಸ್ವಾಮಿ ಅರ್ಚಕ ಯರ್ರಪ್ಪ, ಮುಖಂಡರಾದ ಕಾಡುಗೊಲ್ಲ ಸಂಘದ ಜಿಲ್ಲಾಧ್ಯಕ್ಷ ಕರಿಯಪ್ಪ, ಬಿಬಿಎಂಪಿ ಸದಸ್ಯರಾದ ರಾಜಣ್ಣ, ಸರ್ವಮಂಗಳ ನಾಗರಾಜು, ಡಿವೈಎಸ್ಪಿ ಬಸವರಾಜು ಮುಂತಾದವರು ಭಾಗವಹಿಸಲಿದ್ದಾರೆಂದು ತಾಲ್ಲೂಕು ಯಾದವ ಯುವ ಸೇನೆ ಅಧ್ಯಕ್ಷ ಕೆ.ಎಸ್.ನಾಗರಾಜು ಪ್ರಧಾನ ಕಾರ್ಯದರ್ಶಿ ಮಹಾಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.