ದಾವಣಗೆರೆ:
ಎಲ್ಲಾ ಸರ್ಕಾರಿ, ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳ ವ್ಯಾಪ್ತಿಗೆ ಬರುವ ಎಲ್ಲಾ ಇಲಾಖೆಗಳು ಇನ್ನು ಮುಂದೆ ಖಜಾನೆ ಇಲಾಖೆಯ ಖಜಾನೆ-2ರ ಅಡಿಯಲ್ಲಿ ಹಣ ಸೆಳೆಯಲು ಅವಶ್ಯಕತೆ ಇರುತ್ತದೆ.
ಆದ್ದರಿಂದ ಖಜಾನೆಯಲ್ಲಿ ಪ್ರತಿಯೊಂದು ಕಚೇರಿಯ ಮುಖ್ಯಸ್ಥರು, ತಲಾ ಓರ್ವ ಅಧೀಕ್ಷಕರು, ವಿಷಯ ನಿರ್ವಾಹಕರು, ಸಂದೇಶ ವಾಹಕರು ಇವರು ನೋಂದಣಿ ಮಾಡಿಕೊಳ್ಳವುದು ಕಡ್ಡಾಯವಾಗಿದ್ದು, ಸರ್ಕಾರದ ಆದೇಶದಂತೆ ನೋಂದಣಿ ಮಾಡಿಕೊಳ್ಳಲು ಸೆಪ್ಟೆಂಬರ್ 15 ಕೊನೆ ದಿನವಾಗಿರುತ್ತದೆ. ಹಾಗೂ ಇದಕ್ಕಾಗಿ ಎಲ್ಲಾ ಡ್ರಾಯಿಂಗ್ ಅಧಿಕಾರಿಗಳು ಜಿಲ್ಲಾ ಖಜಾನೆ ಹಾಗೂ ಉಪಖಜಾನೆಯಲ್ಲಿ ಲಭ್ಯವಿರುವ ಆರ್-1 ಮತ್ತು ಆರ್-2 ಫಾರಂಗಳನ್ನು ನಿಗದಿತ ನಮೂನೆಗಳಲ್ಲಿ ಭರ್ತಿ ಮಾಡಿ ವೇತನ ಪಡೆಯುತ್ತಿರುವ ಮೂಲ ಸ್ಥಳದಲ್ಲಿ (ನಿಯೋಜನೆ ಸ್ಥಳ ಹೊರತುಪಡಿಸಿ) ಸಲ್ಲಿಸಲು ತಿಳಿಸಿದೆ.
ಕೆ-2 ನಲ್ಲಿ ನೋಂದಣಿಯಾದ ನಂತರ ಡಿ.ಎಸ್.ಸಿ ಅರ್ಜಿ ನಮೂನೆಯನ್ನು ನೀಲಿ ಇಂಕ್ ಪೆನ್ನಿಂದ ಭರ್ತಿ ಮಾಡಿ ಸಹಿ ಮಾಡಬೇಕು. ಆಧಾರ್ಕಾರ್ಡ್ ಹಾಗೂ ಪ್ಯಾನ್ಕಾರ್ಡ್ಗಳನ್ನು ಝೆರಾಕ್ಸ್ ಮಾಡಿಸಿ ನೀಲಿ ಇಂಕ್ ಪೆನ್ನಿಂದ ಸ್ವಯಂ ದೃಢಿಕರಣ ಹಾಗೂ ಮೇಲಾಧಿಕಾರಿಗಳಿಂದ ದೃಢಿಕರಿಸಿ ಸಂಬಂಧಪಟ್ಟ ಜಿಲ್ಲಾ ಖಜಾನೆ ಅಥವಾ ಉಪಖಜಾನೆಗಳಲ್ಲಿ ತುರ್ತಾಗಿ ಸಲ್ಲಿಸಬೇಕು.
ಎಲ್ಲಾ ಬಡವಾಡೆ ಅಧಿಕಾರಿಗಳು ಅವರ ಅಡಿಯಲ್ಲಿ ಬರುವ ಎಲ್ಲಾ ಸರ್ಕಾರಿ ನೌಕರರನ್ನು ರೆಸಿಪಿಯೆಂಟ್ ಆಗಿ (ರೆಸಿಪಿಯೆಂಟ್ ವಿಧ-27ರ ಅಡಿಯಲ್ಲಿ) ನೋಂದಣಿ ಮಾಡಿಕೊಳ್ಳಬೇಕಾಗಿದೆ. ಒಂದು ವೇಳೆ ಸರ್ಕಾರಿ ನೌಕರರನ್ನು ರೆಸಿಪಿಯೆಂಟ್ ಆಗಿ ನೋಂದಣಿ ಮಾಡಿಕೊಳ್ಳದಿದ್ದರೆ ನಿವೃತ್ತಿ ನಂತರದ ಸೌಲಭ್ಯಗಳನ್ನು ಪಡೆಯುವಲ್ಲಿ ವಿಳಂಬವಾಗುವ ಸಂಭವವಿರುತ್ತದೆ ಎಂದು ಜಿಲ್ಲಾ ಖಜಾನೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ