ಮಕ್ಕಳ ಭವಿಷ್ಯ ರೂಪಿಸುವ ಹೊಣೆ ಶಿಕ್ಷಕ ಮೇಲಿದೆ

ಹುಳಿಯಾರು:

ಮಕ್ಕಳ ಮನಸ್ಥಿತಿ ಅರಿತು ಅವರ ಭವಿಷ್ಯ ರೂಪಿಸುವ ಹೊಣೆ ಶಿಕ್ಷಕರ ಮೇಲಿದೆ ಎಂದು ಸುವರ್ಣ ವಿದ್ಯಾ ಚೇತನ ಅಧ್ಯಕ್ಷ ಹಾಗೂ ನಿವೃತ್ತ ಶಿಕ್ಷಕ ರಾಮಕೃಷ್ಣಪ್ಪ ತಿಳಿಸಿದರು.
ಬೋರನಕಣಿವೆ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಿಂದ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವ ಕೊಡಬೇಕು. ಶಿಕ್ಷಕರಿಗೆ ಗೌರವ ನೀಡಿದರೆ ವಿದ್ಯೆ ತಾನಾಗಿಯೇ ಒಲಿಯುತ್ತದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಎಚ್.ಆರ್.ಗಿರೀಶ್ ಮಾತನಾಡಿದರು. ಕಾಲೇಜು ವಿಭಾಗದ ಪ್ರಾಂಶುಪಾಲ ಪುಟ್ಟರಾಮಯ್ಯ, ಮುಖ್ಯಶಿಕ್ಷಕಿ ತಬ್‍ಸುಮ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವದ್ಧಿಗಯ್ಯ, ನಿವೃತ್ತ ಶಿಕ್ಷಕಿ ಎಸ್.ಮಂಜುಳಾ, ಸುವರ್ಣ ವಿದ್ಯಾ ಚೇತನದ ಕಾರ್ಯದರ್ಶಿ ಎಚ್.ಆರ್.ಯುವರಾಜು, ಸಂಚಾಲಕ ಗುರು ಇದ್ದರು.
ನಿವೃತ್ತ ಶಿಕ್ಷಕ ಮೈಲಾರಯ್ಯ ದಂಪತಿಯನ್ನು ವಿದ್ಯಾರ್ಥಿಗಳು ಸನ್ಮಾನಿಸಿದರು. ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ 9 ನೇ ತರಗತಿ ಬಸವರಾಜು ಅವರನ್ನು ಅಭಿನಂದಿಸಲಾಯಿತು.

Recent Articles

spot_img

Related Stories

Share via
Copy link