ತುಮಕೂರು:
ನಗರದ ಅಮಾನಿಕರೆಯಲ್ಲಿರುವ ಗಾಜಿನಮನೆಯಲ್ಲಿ ಸೆಪ್ಟಂಬರ್ 20ರ ಗುರುವಾರದಂದು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಜನಾಂಗ ಸಚಿವರು,ಶಾಸಕರಿಗೆÉ ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲು ಶನಿವಾರ ನಡೆದ ಛಲವಾದಿ ಮಹಾಸಭಾದ ಸಭೆಯಲ್ಲಿ ಒಮ್ಮತದ ತೀರ್ಮಾನಕೈಗೊಳ್ಳಲಾಗಿದೆ.
ನಗರದ ಆದರ್ಶನಗರದಲ್ಲಿರುವ ಛಲವಾದಿ ಮಹಾಸಭಾದ ಕಚೇರಿಯಲ್ಲಿ ಆಯೋಜಿಸಿದ್ದ ಛಲವಾದಿ ಮುಖಂಡರ ಸಭೆಯಲ್ಲಿ ಸತತ 8 ವರ್ಷಗಳ ಕಾಲ ಕೆ.ಪಿ.ಸಿ.ಸಿ.ಸಾರಥ್ಯವಹಿಸಿ,ಎರಡು ಬಾರಿ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಿರುವ ಹಾಗೂ ಪ್ರಸ್ತುತ ಸಮ್ಮಿಶ್ರ ಸರಕಾರದಲ್ಲಿ ಉಪಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಜಿ.ಪರಮೇಶ್ವರ್ ಹಾಗು ಜನಾಂಗದ ಸಚಿವರು ಮತ್ತು ಶಾಸಕರುಗಳಿಗೆ ಸೆಪ್ಟಂಬರ್ 20ರಂದು ಅಭಿನಂದನಾ ಸಮಾರಂಭ ಏರ್ಪಡಿಸಲು ಸುಧೀರ್ಘ ಚರ್ಚೆ ನಡೆಸಿ,ಕಾರ್ಯಕ್ರಮಕ್ಕೆ ಸಂಬಂಧಿಸಿದ ಕರಪತ್ರ ಬಿಡುಗಡೆಗೊಳಿಸುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಲಾಯಿತು.
ಜನಾಂಗದ ಹಿರಿಯ ಮುಖಂಡರಾದ ಎನ್.ಮೂರ್ತಿ,ಚಂದ್ರಪ್ಪ, ಹೆಗ್ಗೆರೆ ಗಂಗಾಧರ್ ಕರಪತ್ರ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಎನ್.ಮೂರ್ತಿ ಅವರು, ಈ ಕರಪತ್ರವನ್ನು ಜಿಲ್ಲೆಯಲ್ಲಿರುವ ಛಲವಾದಿಗಳ ಪ್ರತಿ ಮನೆಗೂ ತಲುಪಿಸಿ, ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಬರುವಂತೆ ಆಯೋಜಕರು ಮಾಡಬೇಕೆಂದು ತಿಳಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಬಿ.ಎನ್.ದಿನೇಶ್ ಮಾತಾಡಿ,ಕಾರ್ಯಕ್ರಮಕ್ಕೂ ಮುನ್ನ ಎಲ್ಲಾ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಛಲವಾದಿ ಯುವಕರು, ಮುಖಂಡರು ಸಭೆ ನಡೆಸಿ, ಛಲವಾದಿ ಮಹಾಸಭಾ ಸಂಘಟಿಸುವ ಜೊತೆಗೆ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುಂತೆ ಮಾಡಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಬಿ.ಜಿ.ಲಿಂಗರಾಜು,ಪ್ರಚಾರ ಸಮಿತಿ ಅಧ್ಯಕ್ಷರಾದ ಭಾನುಪ್ರಕಾಶ್, ಮುಖಂಡರಾದ ದೊಡ್ಡನಂಜಯ್ಯ,ಆಹಾರ ಸಮಿತಿ ಅಧ್ಯಕ್ಷರಾದ ಗಂಗಾಧರ್,ಮುಖಂಡರಾದ ಶ್ರೀನಿವಾಸ್, ಹುಚ್ಚೀರಯ್ಯ, ಶಂಕರ್‍ಮೂರ್ತಿ,ಶಿವಾಜಿ, ಎನ್.ಕೆ.ನಿಧಿಕುಮಾರ್, ಟಿ.ಆರ್.ನಾಗೇಶ್,ಹೆಗ್ಗರೆ ಕೃಷ್ಣಪ್ಪ,ಜಿ.ಆರ್.ಗಿರೀಶ್, ಜಿ.ಆರ್.ಸುರೇಶ್, ಸಿದ್ದಲಿಂಗಪ್ಪ,ಜಗನ್ನಾಥ್,ನರಸಿಂಹಮೂರ್ತಿ, ದೊಡ್ಡಹನು ಮಂತರಾಯಪ್ಪ, ಸೋಮಶೇಖರ್, ಅಂಬೇಡ್ಕರ್ ಮತ್ತಿತರರು ಉಪಸ್ಥಿತರಿದ್ದರು.