ತುಮಕೂರು
ನಗರದ ಖಾದರ್ ನಗರ ಹಾಗೂ ಮಾರುತಿ ನಗರ ಮಧ್ಯದ ಕಟ್ಟಡ ನಿರ್ಮಾಣದ ಪಕ್ಕದಲ್ಲಿ ದಿನಾಂಕ:-08-09-2018 ರಂದು ನವಜಾತ 7 ದಿನದ ಹೆಣ್ಣು ಮಗು ಪತ್ತೆಯಾಗಿದೆ. ಖಾದರ್ ನಗರದ ವಾಸಿ ಚಂದ್ರು ಎಂಬುವವರು ದಿನಾಂಕ:-07-09-2018 ರಂದು ಮಧ್ಯರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 4 ಗಂಟೆಯವರೆಗೂ ಮಗು ಅಳುವ ಆಕ್ರಂದನ ಕೇಳಿ ಅಭಿವೃದ್ಧಿ ಸಾಮಾಜಿಕ ಸೇವಾ ಸಂಸ್ಥೆ, ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ ಹಿನ್ನಲೆಯಲ್ಲಿ ಮಕ್ಕಳ ಸಹಾಯವಾಣಿ-1098 ತಂಡ ಸ್ಥಳಕ್ಕೆ ಧಾವಿಸಿ 7 ದಿನದ ನವಜಾತ ಹೆಣ್ಣು ಶಿಶುವನ್ನು ಮತ್ತು ತಾಯಿ ಗಂಗಮ್ಮ ರವರು ಪತ್ತೆ ಮಾಡಿದಾಗ ಇವರು ಅತಿಯಾದ ಮಾದಕವ್ಯಸನಿಗಳಾಗಿದ್ದು ವಲಸಿಗರಾಗಿದ್ದು ಭಿಕ್ಷೆ ಬೇಡುವು ಮತ್ತು ಚಿಂದಿ ಆಯುವುದು ಇವರ ವೃತ್ತಿಯಾಗಿದೆ. ಆದ ಕಾರಣ ಮಗುವಿನ ಆರೋಗ್ಯದ ಬಗ್ಗೆ ಕಾಳಜಿಯಿಲ್ಲದೇ ಬೀದಿಯಲ್ಲಿ ಮಲಗಿಸಿರುತ್ತಾರೆ. ಇದನ್ನು ಕಂಡ ಕೂಡಲೇ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಅವರನ್ನು ಕರೆ ತಂದು ಡಾ. ವಿನಯ್ ವೈಧ್ಯಾಧಿಕಾರಿಗಳಿಂದ ವೈಧ್ಯಕೀಯ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಗುವಿನ ತಂದೆ ಯಾರೆಂಬುದು ಪತ್ತೆಯಾಗಿಲ್ಲ. ಈ ರಕ್ಷಣಾ ಕಾರ್ಯದಲ್ಲಿ ಮಕ್ಕಳ ಸಹಾಯವಾಣಿ ತಂಡದ ಶೋಭ ಕೆ.ಎಲ್, ಗೊಲ್ಲಳ್ಳಿ ಬಾಲಕೃಷ್ಣ ಹಾಗೂ ಕೇಂದ್ರ ಸಂಯೋಜಕರಾದ ನಾಗರಾಜ್.ಜೆ.ಆರ್. ಹಾಗೂ ತುಮಕೂರು ಹೇಮಾದ್ರಿ ಕಾಲೇಜಿನ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಕುಮಾರಿ ಗೌತಮಿ, ಕುಮಾರಿ ತಮನ, ಕುಮಾರಿ ಸಿಂಧು ಹಾಗೂ ಮಹಿಳಾ ಚಿಕಿತ್ಸಾ ಘಟಕದ ಸಮಾಲೋಚಕರಾದ ಶ್ರೀಮತಿ ಶೃತಿ, ಸಮಾಜ ಕಾರ್ಯಕರ್ತರಾದ ಕುಸುಮಬಾಯಿ ಉಪಸ್ಥಿತರಿದ್ದರು.