ಹಿರಿಯೂರು :
ನಗರದ ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸಂಸ್ಥೆಯ ಸಂಸ್ಥಾಪಕರಾದ ಡಾ.ಬಸವರಾಜ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು, ಶಿಕ್ಷಕರಾಗಲು ಬಯಸುವವರು ಸಂಕಲ್ಪ ಮಾಡಿಕೊಂಡು ಈ ಕ್ಷೇತ್ರಕ್ಕೆ ಬರಬೇಕು, ಪ್ರಸ್ತುತ ದಿನಮಾನಗಳಲ್ಲಿ ಜರುಗುತ್ತಿರುವ ಘಟನೆಗಳೇ ಅದಕ್ಕೆ ಸಾಕ್ಷಿ, ನೈತಿಕ ಮೌಲ್ಯಗಳೊಂದಿಗೆ ಶಿಕ್ಷಕರು ಸಮಾಜಕ್ಕೆ ಮಾದರಿಯಾಗಬೇಕು, ಭವಿಷ್ಯದ ಸದೃಢ ರಾಷ್ಟ್ರವನ್ನು ಕಟ್ಟುವಂತಹ ಪೀಳಿಗೆಯನ್ನು ತಯಾರು ಮಾಡುವಲ್ಲಿ ಶಿಕ್ಷಕರ ಜವಾಬ್ದಾರಿ ಗುರುತರವಾದದ್ದು ಎಂದರು.
ಪ್ರಾಚಾರ್ಯರಾದ ಎನ್.ಧನಂಜಯ ಮಾತನಾಡಿ ರಾಧಾಕೃಷ್ಣನ್ ರವರ ಶೈಕ್ಷಣಿಕ ಚಂತನೆಗಳು ಇಂದಿಗೂ ಪ್ರಸ್ತುತ, ಒಬ್ಬ ಶಿಕ್ಷಕರಾಗಿ ರಾಷ್ಟ್ರದ ಅತ್ಯುನ್ನತ ಹುದ್ದೆ ಅಲಂಕರಿಸಿದ್ದು ಅಭೂತಪೂರ್ವ ಸಂಗತಿ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಬಸವರಾಜ್, ನಾಗೇಶ್, ಅರುಣಕುಮಾರಿ, ತನುಶ್ರೀ, ವ್ಯವಸ್ಥಾಪಕರಾದ ದೊರೇಶ್, ಕಾರ್ಯದರ್ಶಿ ಅವಿನಾಶ್ ನಿರ್ದೇಶಕರಾದ ಭೀಮಪ್ಪ, ಹಾಗೂ ಶಿಕ್ಷಕ ವರ್ಗದವರು ಪಾಲ್ಗೊಂಡಿದ್ದರು.