ಅಂಬೇಡ್ಕರ್ ಚಿಂತನೆಗಳ ಪ್ರಭಾವವೇ ದಲಿತ ಸಾಹಿತ್ಯ – ಡಾ. ಕೆ.ಆರ್. ದುರ್ಗಾದಾಸ್

ತುಮಕೂರು

               ಕನ್ನಡ ಸಾಹಿತ್ಯದಲ್ಲಿ ದಲಿತ ಬಂಡಾಯ ಎನ್ನುವುದು ವಿಶಿಷ್ಟವಾದ ಘಟ್ಟವಾಗಿದೆ. ಸಾವಿರಾರು ವರ್ಷಗಳಿಂದ ಶೋಷಿತರು ಅನುಭವಿಸಿದ ಸಮಸ್ಯೆಗಳ ಮೇಲೆ ದಲಿತ ಸಾಹಿತ್ಯ ಪ್ರಧಾನವಾಗಿ ಬೆಳಕನ್ನು ಚೆಲ್ಲುತ್ತದೆ. ಪ್ರಾಚೀನ, ಮಧ್ಯಕಾಲೀನ, ಆಧುನಿಕ ಕಾಲಘಟ್ಟವನ್ನು ಒಳಗೊಂಡಂತೆ ಪಂಪನಿಂದ ಹಿಡಿದು ಇಂದಿನವರೆಗೂ ಸುಮಾರು ಸಾವಿರಾರು ಕವಿಗಳು ತಮ್ಮ ಕೃತಿಗಳಲ್ಲಿ ದಲಿತ ಲೋಕದ ಚಿತ್ರಣವನ್ನು ಸೊಗಸಾಗಿ ಉಣಬಡಿಸಿದ್ದಾರೆ. ದಲಿತ ಬಂಡಾಯ ಘಟ್ಟದ ಸಾಹಿತ್ಯದಲ್ಲಿ ಅಂಬೇಡ್ಕರ್ ಚಿಂತನೆಗಳು ಬಹುಮುಖ್ಯವಾಗಿ ಅಭಿವ್ಯಕ್ತಗೊಂಡಿವೆ. ಹಾಗಾಗಿ ಅಂಬೇಡ್ಕರ್ ಚಿಂತನೆಗಳ ಪ್ರಭಾವವೇ ದಲಿತ ಸಾಹಿತ್ಯವೆನ್ನಬಹುದು ಎಂದು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಯೋಜನಾ ನಿರ್ದೇಶಕರಾದ ಡಾ. ಕೆ.ಆರ್. ದುರ್ಗಾದಾಸ್ ಅಭಿಪ್ರಾಯಪಟ್ಟರು. ನಗರದಲ್ಲಿ ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ತುಮಕೂರು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತುಮಕೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಎಸ್. ಮಂಜುಳಾ ಅವರ “ದಲಿತ ಬಂಡಾಯ ಕಾವ್ಯ : ಒಂದು ಸಾಂಸ್ಕøತಿಕ ಅಧ್ಯಯನ” ಎಂಬ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡುತ್ತ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸಂಶೋಧನಾ ಕ್ಷೇತ್ರದತ್ತ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿಲ್ಲ. ಅಂತಹ ಸಂದರ್ಭದಲ್ಲಿ ಮಹಿಳೆಯರ ಪ್ರತಿನಿಧಿಯಾಗಿ ಈ ಲೇಖಕಿ ಸಂಶೋಧನಾ ಗ್ರಂಥವನ್ನು ಹೊರತರುತ್ತಿರುವುದು ಸಂತಸದ ಸಂಗತಿಯೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಸಿದ್ಧ ವಿಮರ್ಶಕರಾದ ಪ್ರೊ. ಕೆ.ಬಿ. ಸಿದ್ದಯ್ಯರವರು ದಲಿತ ಎಂಬ ಪದದ ಪ್ರಯೋಗವನ್ನು ನಾವೆಲ್ಲರೂ ಸರಿಯಾಗಿ ಗ್ರಹಿಸಬೇಕಾಗಿದೆ.                          ಅಸ್ಪಶ್ಯತೆಯ ಅನುಭವವಿಲ್ಲದೆ ದಲಿತ ಪದವನ್ನು ಅರ್ಥೈಸಲು ಸಾಧ್ಯವಿಲ್ಲ. ಜಾತಿಪ್ರಜ್ಞೆಯು ಪಂಚೇಂದ್ರಿಯಗಳನ್ನು ಎಚ್ಚರಗೊಳಿಸುತ್ತದೆ. ಸ್ತ್ರೀಯರನ್ನು ಅಸ್ಪøಶ್ಯರಿಗಿಂತಲೂ ಇಂದು ಕೀಳಾಗಿ ಕಾಣಲಾಗುತ್ತದೆ. ಹಾಗಾಗಿ ತುಳಿತಕ್ಕೆ ಒಳಗಾದ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸುವ ನೆಲೆಯಲ್ಲಿ ದಲಿತ ಪದವನ್ನು ಬಳಸಬೇಕಾಗುತ್ತದೆ. ಅದಕ್ಕೆ ಸ್ಥಳೀಯವಾದ ಮತ್ತು ಜಾಗತೀಕವಾದ ಸ್ಪರ್ಶವನ್ನು ಕೂಡ ನೀಡಬೇಕಾಗುತ್ತದೆ. ಈ ನೆಲೆಯಲ್ಲಿ ದಲಿತ ಪದದ ಸಾಂಸ್ಕøತಿಕ ಚರ್ಚೆಯ ವಿಷಯಗಳು ಈ ಕೃತಿಯಲ್ಲಿ ಮನೋಜ್ಞವಾಗಿ ಮೂಡಿಬಂದಿದೆ.

ಕಾರ್ಯಕ್ರಮದಲ್ಲಿ ಡಾ. ಅಣ್ಣಮ್ಮ, ಡಾ. ಛಲಪತಿ ಕೃತಿ ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಬಾ.ಹ. ರಮಾಕುಮಾರಿ, ಡಾ. ಡಿ.ಸಿ.ಚಿತ್ರಲಿಂಗಯ್ಯ ಹಾಗೂ ಡಾ. ಗೋವಿಂದರಾಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link
Powered by Social Snap