ಚಳ್ಳಕೆರೆ
ಸಂಗೀತವೆಂಬುವುದು ಒಂದು ವಿಶೇಷ ಕಲೆ, ಸಾವಿರಾರು ವರ್ಷಗಳಿಂದ ನಾಡಿನ ಎಲ್ಲಾ ಜನರಿಗೂ ಹರ್ಷವನ್ನುಂಟು ಮಾಡಿ ಅವರ ಮನಸ್ಸಿಗೆ ನೆಮ್ಮದಿಯನ್ನು ತರುವ ಶಕ್ತಿ ಸಂಗೀತಕ್ಕೆ ಮಾತ್ರ ಇದೆ. ವಿಶೇಷವಾಗಿ ನಮ್ಮ ಭಕ್ತಿ ಗೀತೆಗಳು ಸಂಗೀತ ಕಲೆಯ ವೈಶಿಷ್ಟ್ಯಗಳಲ್ಲಿ ಒಂದು. ಸಂಗೀತವನ್ನು ಪ್ರೀತಿ, ಗೌರವಿಸುವ ವ್ಯಕ್ತಿ ಎಲ್ಲರಿಂದಲೂ ಗೌರವವಕ್ಕೆ ಒಳಗಾಗುತ್ತಾನೆಂದು ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ತಿಳಿಸಿದರು.
ಅವರು, ಸೋಮವಾರ ಸಂಜೆ ನಗರದ ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಡಾ.ಅಶ್ವಥ್ ಗಾನಸಿರಿ ಸಾಂಸ್ಕøತಿಕ ಕಲಾ ಸಂಘ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಗಾನ ಕೋಗಿಲೆ ಕಲಾ ಬಳಗ ಮುತ್ತುರಾಜ್ ಮತ್ತು ನೇತಾಜಿ ಸ್ನೇಹ ಬಳಗ ಸಂಯುಕ್ತಾಶ್ರಯದಲ್ಲಿ ಶ್ರಾವಣ ಸಂಗೀತ ಸಂಜೆ ಕಾರ್ಯಕ್ರಮ ಹಾಗೂ ನೂತನ ನಗರಸಭಾ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮವನ್ನು ತಬಲ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ನಗರಸಭೆಗೆ ನೂತನವಾಗಿ 31 ಜನ ಸದಸ್ಯರು ಅದರಲ್ಲೂ ವಿಶೇಷವಾಗಿ ಯುವಕರು ಆಯ್ಕೆಯಾಗಿರುವುದು ಸಂತಸ ಸಂಗತಿ. ಯಾವ ಜನಪ್ರತಿನಿಧಿ ನಾನು ಜನನಾಯಕನೆಂದು ಬಿಂಬಿತವಾದಾಗ ಅವನ ವ್ಯಕ್ತಿತ್ವವೇ ಕಳಹಿನವಾಗುತ್ತದೆ. ಆದರೆ, ನಾನು ಜನ ಸೇವಕನೆಂದು ಬಿಂಬಿತವಾದಾಗ ಅವನು ಎಲ್ಲಾ ರೀತಿಯ ಗೌರವ ಕೀರ್ತಿಗಳನ್ನು ಸಂಪಾದಿಸುತ್ತಾನೆ. ಜನಪ್ರತಿನಿಧಿ ಎಂದಿಗೂ ಸೇವೇ ನನ್ನ ಮೂಲ ಕರ್ತವ್ಯವೆಂದು ತಿಳಿದಾಗ ಮಾತ್ರ ತನ್ನ ರಾಜಕೀಯ ಭವಿಷ್ಯವನ್ನು ಉತ್ತಮ ಪಡಿಸಿಕೊಳ್ಳುವವನಾಗುತ್ತಾನೆಂದರು.
ಇದೇ ಸಂದರ್ಭದಲ್ಲಿ ಗಾನಕೋಗಿಲೆ ಕೆ.ಟಿ.ಮುತ್ತುರಾಜ್ ಮತ್ತು ಸಂಗಡಿಗರು, ಶಿಕ್ಷಕ ನಾಗರಾಜು, ಲತಾ, ಪ್ರಜ್ವಲ್ ಮುಂತಾದವರು ಹಲವಾರು ಭಕ್ತಿ ಗೀತೆಗಳನ್ನು ಹಾಗೂ ಚಿತ್ರಗೀತೆಗಳನ್ನು ಹಾಡಿದರು. ನಗರಸಭೆಯ ನೂತನ ಸದಸ್ಯರಾದ ಎಸ್.ಜಯಣ್ಣ, ಕೆ.ವೀರಭದ್ರಯ್ಯ, ಜಿ.ಮಲ್ಲಿಕಾರ್ಜುನ, ಕೆ.ಸಿ.ನಾಗರಾಜು, ಎಂ.ಜೆ.ರಾಘವೇಂದ್ರ, ವೈ.ಪ್ರಕಾಶ್, ಶಿವಕುಮಾರ್, ವಿರೂಪಾಕ್ಷ, ಪಾಲಮ್ಮ, ಕವಿತಾ, ಸುಜಾತಮ್ಮ, ಜೈತುಂಬಿ, ಜಯಲಕ್ಷ್ಮಿ, ಸುಮಾ, ಆರ್.ಮಂಜುಳಾ ಮುಂತಾದವರನ್ನು ಅಭಿನಂದಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಇಂತಹ ಸಂಗೀತ ಕಾರ್ಯಕ್ರಮಗಳು ಕೇವಲ ಮನೋರಂಜನೆಗೆ ಮಾತ್ರ ಸೀಮಿತವಾಗಬಾರದು. ಪ್ರತಿಯೊಂದು ಹಾಡಿನಲ್ಲೂ ವಿಶೇಷವಾದ ಅರ್ಥವಿರುತ್ತದೆ. ಹಾಡುಗಳಲ್ಲಿ ಬರುವ ಎಲ್ಲಾ ರೀತಿಯ ಭಾವನೆಗಳನ್ನು ಅರ್ಥೈಸಿಕೊಳ್ಳುವಲ್ಲಿ ನಾವೆಲ್ಲರೂ ಸಫಲರಾಗಬೇಕು. ವಿಶೇಷವಾಗಿ ಗ್ರಾಮೀಣ ಭಾಗದ ಗಾಯಕರಿಗೆ ಉತ್ತಮ ವೇದಿಕೆಯನ್ನು ನಿರ್ಮಿಸಿಕೊಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಗಾಯಕ ಕೆ.ಟಿ.ಮುತ್ತುರಾಜ್ನನ್ನು ರಾಜ್ಯ ಮಟ್ಟದ ಗಾಯಕ ಖ್ಯಾತಿ ಪಡೆಯಲು ಎಲ್ಲಾ ಸಂಗೀತಾಭಿಮಾನಿಗಳ ಕೃಪೆ ಬೇಕು ಎಂದರು.
ಕಾರ್ಯಕ್ರಮದಲ್ಲಿ ಕ್ರೀಡಾಪಟು ಘಟಪರ್ತಿ ನಾಗರಾಜು, ಮಾಜಿ ಸೈನಿಕ ಬೋರರಾಜು, ನೆಲಗೇತನಹಟ್ಟಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಮುತ್ತಯ್ಯ, ಶಿಕ್ಷಕ ನಾಗರಾಜು ಇವರನ್ನು ಸನ್ಮಾನಿಸಲಾಯಿತು. ಪ್ರಗತಿಪರ ರೈತ ಆರ್.ಎ.ದಯಾನಂದಮೂರ್ತಿ, ಖ್ಯಾತ ವಾಣಿಜ್ಯೋದ್ಯಮಿ ಬಿ.ಕೆ.ರಾಜಶೇಖರಪ್ಪ, ಎಲ್ಐಸಿ ದುಗ್ಗಾವರ ರಂಗಸ್ವಾಮಿ, ಫರೀದ್ಖಾನ್, ಆರ್.ಪ್ರಸನ್ನಕುಮಾರ್, ನೇತಾಜಿ ಪ್ರಸನ್ನ, ನನ್ನಿವಾಳ ನಾಗರಾಜು, ಬಂಗ್ಲೆ ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು. ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.








