ಹೊನ್ನಾಳಿ:
ನೀರು ಸಾಗಾಟದ ಟ್ಯಾಂಕರ್‍ನ ಟ್ರ್ಯಾಕ್ಟರ್‍ಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಟ್ಯಾಂಕರ್ ಜಖಂಗೊಂಡಿರುವ ಘಟನೆ ಮಂಗಳವಾರ ತಾಲೂಕಿನ ಎಚ್. ಕಡದಕಟ್ಟೆ ವೃತ್ತದಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕೆಎಸ್‍ಆರ್‍ಟಿಸಿ ಬಸ್ ನ್ಯಾಮತಿ ತಾಲೂಕಿನ ತೀರ್ಥರಾಮೇಶ್ವರ ಸುಕ್ಷೇತ್ರದಿಂದ ಕೆಂಚಿಕೊಪ್ಪ, ಸೊರಟೂರು, ಎಚ್. ಕಡದಕಟ್ಟೆ ಗ್ರಾಮಗಳ ಮಾರ್ಗವಾಗಿ ಹೊನ್ನಾಳಿಗೆ ಬರುತ್ತಿತ್ತು. ನೀರು ಸಾಗಾಟದ ಟ್ಯಾಂಕರ್‍ನ ಟ್ರ್ಯಾಕ್ಟರ್ ಎಚ್. ಕಡದಕಟ್ಟೆ ಗ್ರಾಪಂ ವ್ಯಾಪ್ತಿಯ ತುಂಗಾ ಮೇಲ್ದಂಡೆ ನಾಲಾ ಕಾಲೋನಿಗೆ ನೀರು ಪೂರೈಸಲು ತೆರಳುತ್ತಿತ್ತು. ತಾಲೂಕಿನ ಹೊಳೆ ಮಾದಾಪುರ ಗ್ರಾಮದ ವ್ಯಕ್ತಿಯೊಬ್ಬರಿಗೆ ಟ್ರ್ಯಾಕ್ಟರ್ ಸೇರಿದೆ ಎನ್ನಲಾಗಿದೆ.
ಅಪಘಾತದಲ್ಲಿ ಹಾನಿಗೀಡಾಗಿರುವ ಟ್ಯಾಂಕರ್‍ನ ರಿಪೇರಿಗೆ ಕೆಎಸ್‍ಆರ್‍ಟಿಸಿ ಬಸ್ ಚಾಲಕ 12 ಸಾವಿರ ರೂ.ಗಳನ್ನು ನೀಡಿದರು. ಎರಡೂ ವಾಹನಗಳ ಚಾಲಕರು ರಾಜೀ ಮಾಡಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ