ಗೌರಿ ಹಬ್ಬ: ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳು

ಗುಬ್ಬಿ
           ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವು ದೇವಾಲಯಗಳಲ್ಲಿ ಗೌರಿ ಹಬ್ಬದ ಅಂಗವಾಗಿ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಮಹಿಳೆಯರು ಬೆಳಗ್ಗೆಯಿಂದಲೆ ದೇವಾಲಯಗಳಿಗೆ ತೆರಳಿ ಶ್ರದ್ಧಾ ಭಕ್ತಿಯಿಂದ ಬಾಗಿನ ಅರ್ಪಿಸುವ ಮೂಲಕ ಸಡಗರ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು.
            ಪ್ರತಿ ವರ್ಷದಂತೆ ತಾಲ್ಲೂಕಿನ ಅಮ್ಮನಘಟ್ಟ ಗ್ರಾಮದಲ್ಲಿ ಸಾಂಪ್ರದಾಯಿಕವಾಗಿ ಆಚರಿಸುವ ಗೌರಿ ಹಬ್ಬದಂದು ಊರಿನ ಕೆರೆಗೆ ತೆರಳಿ ಕೆರೆಯಿಂದ ಗೌರಮ್ಮನನ್ನು ತಂದು ದೇವಾಲಯದಲ್ಲಿಟ್ಟು ಪೂಜೆ ಸಲ್ಲಿಸುವ ಮೂಲಕ ವಿನೂತನವಾಗಿ ಆಚರಿಸಲಾಯಿತು. ಬೆಳಗ್ಗೆಯೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ಮೂಲಕ ಗ್ರಾಮಸ್ಥರು ಕೆರೆಗೆ ತೆರಳಿ ಗಂಗಾ ಪೂಜೆ ಸಲ್ಲಿಸಿ ಕೆರೆಯಿಂದ ಗೌರಮ್ಮನನ್ನು ಭಕ್ತಿಯಿಂದ ತರುವುದು ಗ್ರಾಮದ ಸಂಪ್ರದಾಯ ಇಲ್ಲಿನ ಗೌರಮ್ಮನನ್ನು ಸ್ವರ್ಣಗೌರಿ ಎಂದು ಕರೆಯಲಾಗುತ್ತದೆ. ಪ್ರತಿ ವರ್ಷ ಸ್ವರ್ಣ ಗೌರಿ ಅಮ್ಮನವರ ಜಾತ್ರೆಯನ್ನು ಅತ್ಯಂತ ವೈಭವಯುತವಾಗಿ ಆಚರಿಸಲಾಗುತ್ತದೆ.
               ತಾಲ್ಲೂಕಿನ ಬಹುತೇಕ ಎಲ್ಲಾ ದೇವಾಲಯಗಳಲ್ಲಿಯು ಸಹ ಗೌರಿ ಹಬ್ಬದ ಅಂಗವಾಗಿ ವಿಶೇಷ ಪೂಜೆ ಮಾಡಲಾಗಿದ್ದು ಮಹಿಳೆಯರು ಭಕ್ತಿ ಭಾವದಿಂದ ಪೂಜೆ ಸಲ್ಲಿಸುವ ಮೂಲಕ ಗೌರಿಗೆ ಬಾಗಿನ ಅರ್ಪಿಸಿದರು. ಇಂದು ಗಣೇಶ ಚತುರ್ಥಿ ಇರುವುದರಿಂದ ಬಹುತೇಕ ದೇವಾಲಯಗಳಲ್ಲಿ ಮತ್ತು ವಿವಿಧ ಬಡಾವಣೆಗಳಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಯುವಕರು ಮತ್ತು ಮಕ್ಕಳು ಗಣಪತಿಯನ್ನು ಪ್ರತಿಷ್ಠಾಪಿಸಲು ತಮ್ಮದೆ ಆದ ಶೈಲಿಯಲ್ಲಿ ತೆಂಗಿನ ಗರಿಗಳಿಂದ ಚಪ್ಪರಗಳನ್ನು ಹಾಕಿ ಮಾವಿನ ಸೊಪ್ಪು, ಬಾಳೆಕಂದುಗಳನ್ನು ಕಟ್ಟಿ ವಿವಿಧ ಹೂಗಳಿಂದ ಸಿಂಗರಿಸಿಕೊಳ್ಳುತ್ತಿದ್ದಾರೆ. ವಿಘ್ನನಿವಾರಕ ವಿನಾಯಕನ ಹಬ್ಬ ಆಚರಣೆಗಾಗಿ ಯುವಕರು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

Recent Articles

spot_img

Related Stories

Share via
Copy link