ನವದೆಹಲಿ:
ಪ್ರತಿಷ್ಠಿತ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಕ್ಕೆ ನಡೆದ ಚುನಾವಣೆಯ ಫಲಿತಾಂಶ ಬಂದಿದ್ದು , ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಜಯ ಗಳಿಸಿದೆ, ಅಧ್ಯಕ್ಷ ಸೇರಿದಂತೆ ಪ್ರಮುಖ ಮೂರು ಹುದ್ದೆಗಳನ್ನು ತನ್ನದಾಗಿಸಿಕೊಂಡಿದೆ. ಎನ್ಎಸ್ಯುಐ ಜಿದ್ದಾ ಜಿದ್ದಿ ನ ಹೋರಾಟದಲ್ಲಿ ಒಂದು ಸ್ಥಾನ ಪಡೆದಿದೆ.
ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆದರಲ್ಲಿ ಪೈಕಿ ಮೂರರಲ್ಲಿ ಎಬಿವಿಪಿ ಜಯಭೇರಿ ಭಾರಿಸಿದ್ದು, ಅಧ್ಯಕ್ಷ ,ಉಪಾಧ್ಯಕ್ಷ ಹಾಗೂ ಜಂಟಿ ಕಾರ್ಯದರ್ಶಿ ಸ್ಥಾನವನ್ನು ಎಬಿವಿಪಿ ಪಾಲಾಗಿದೆ. ಒಂದು ಸ್ಥಾನ ಕಾರ್ಯದರ್ಶಿ ಎನ್ಎಸ್ಯುಐ ಗೆದ್ದಿದೆ.
ಎಬಿವಿಪಿಯ ಅಂಕಿವ್ ಬಸೋಯ ಅವರು ಅಧ್ಯಕ್ಷರಾಗಿ ಆಯ್ಕೆಯಾದರೆ ,ಉಪಾಧ್ಯಕ್ಷರಾಗಿ ಶಕ್ತಿ ಸಿಂಗ್ ಆಯ್ಕೆಯಾಗಿದ್ದಾರೆ.
ಎನ್ಎಸ್ ಯುಐ ನ ಆಕಾಶ್ ಚೌಧರಿ ಅವರು ಕಾರ್ಯದರ್ಶಿಯಾಗಿ ಹಾಗೂ ಎಬಿವಿಪಿಯ ಜ್ಯೋತಿ ಅವರು ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.