ನಾಳೆ ಬೃಹತ್ ಉದ್ಯೋಗ ಮೇಳ ಮತ್ತು ಆರೋಗ್ಯ ಶಿಬಿರ

ತುಮಕೂರು
              ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಹುಟ್ಟುಹಬ್ಬದ ಪ್ರಯುಕ್ತ ಗೂಳೂರು ಗ್ರಾಮದಲ್ಲಿ ಸೆ.16 ಭಾನುವಾರ ಬೆಳಗ್ಗೆ 10 ಗಂಟೆಗೆ ಬೃಹತ್ ಉದ್ಯೋಗ ಮೇಳ ಹಾಗೂ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಅಧ್ಯಕ್ಷ ಹಾಲನೂರು ಅನಂತಕುಮಾರ್ ತಿಳಿಸಿದರು.
                ನಗರದ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮಾಂತರ ಶಾಸಕ ಗೌರಿಶಂಕರ್ ಹುಟ್ಟುಹಬ್ಬದ ಪ್ರಯುಕ್ತ ಗೂಳೂರಿನ ಸಾರಂಗ್ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ. ಇದರಲ್ಲಿ 5 ಸಆವಿರ ನಿರುದ್ಯೋಗ ಯುವಕ ಯುವತಿರಿಗೆ ಉದ್ಯೋಗ ದೊರಕಿಸುವ ಕಾರ್ಯ ಇದಾಗಿದೆ. ಇದರ ಉದ್ಘಾಟನೆಯನ್ನು ಜಿಲ್ಲಾಧ್ಯಕ್ಷ ಸಿ.ಚೆನ್ನಿಗಪ್ಪ ನೆರವೇರಿಸಲಿದ್ದಾರೆ. ಈ ಉದ್ಯೋಗ ಮೇಳದಲ್ಲಿ ಇನ್ಫೋಸಿ, ಎಲ್ ಅಂಡ್ ಟಿ, ಟಿವಿಎಸ್ ಸೇರಿದಂತೆ ನೂರಾರು ಕಂಪನಿಗಳು ಭಾಗವಹಿಸಲಿವೆ. ಅರ್ಹ ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳ ನಕಲು ಪ್ರತಿಗಳನ್ನು ತಂದು ಉದ್ಯೋಗ ಮೇಳದ ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
              ಕಾರ್ಯಕ್ರಮದ ಭಾಗವಾಗಿ ಲಯನ್ಸ್‍ಕ್ಲಬ್, ಬೆಂಗಳೂರಿನ ವರ್ಧಮಾನ್ ಕಣ್ಣಿನ ಆಸ್ಪತ್ರೆ, ಸಪ್ತಗಿರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ನಾರಾಯಣ ಹಾರ್ಟ್ ಸೆಂಟರ್, ಶಾರದಾ ರೋಟರಿ ಕಣ್ಣಿನ ಆಸ್ಪತ್ರೆ, ಅಶ್ವಿನಿ ಆಯುರ್ವೇದಿಕ್ ಆಸ್ಪತ್ರೆ, ಎಸ್.ಆರ್.ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ, ಅಪೋಲೋ ಆಸ್ಪತ್ರೆ ಸಹಯೋಗದಲ್ಲಿ ಬೃಹತ್ ವೈದ್ಯಕೀಯ ಉಚಿತ ಆರೋಗ್ಯ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜನೆ ಮಾಡಲಾಗಿದ್ದು, ಚಿಕ್ಕಣ್ಣಸ್ವಾಮಿ ಕ್ಷೇತ್ರದ ಧರ್ಮಾಧಿಕಾರಿ ಪಾಪಣ್ಣರವರು ನೆರವೇರಿಸಲಿದ್ದಾರೆ. ಈ ಶಿಬಿರದಲ್ಲಿ ಅವಶ್ಯಕ ವಿರುವವರಿಗೆ 1000 ಮಂದಿಗೆ ಕನ್ನಡಕಗಳು, 100 ಮಂದಿಗೆ ಮೂರು ಚಕ್ರದ ಚೇರ್‍ಗಳು, 100 ಮಂದಿಗೆ ಶ್ರವಣಯಂತ್ರಗಳು, 500 ವಾಕಿಂಗ್ ಸ್ಟಿಕ್‍ಗಳು ವಿತರಣೆ ಮಾಡಲಿದ್ದೇವೆ. ವಿಶೇಷವಾಗಿ ಎರಡು ಕೈಗಳನ್ನು ಕಳೆದುಕೊಂಡ ವ್ಯಕ್ತಿಗಳು ಇದ್ದಲ್ಲಿ ಅವರಿಗೆ 3.5 ಲಕ್ಷದ ವೆಚ್ಚದಲ್ಲಿ ರೋಬೋ ಕೈಗಳನ್ನು ಅಳವಡಿಸಲಾಗುವುದು. ಶಸ್ತ್ರ ಚಿಕಿತ್ಸೆ ಅವಶ್ಯಕವಿದ್ದವರಿಗೆ ಬಾಲಗಂಗಾಧರನಾಥ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು ಎಂದು ತಿಳಿಸಿದರು.
                ಪತ್ರಿಕಾಗೋಷ್ಠಿಯಲ್ಲಿ ತುಮಕೂರು ಜಿಲ್ಲಾ ಯುವ ಘಟಕದ ಜಿಲ್ಲಾಧ್ಯಕ್ಷ ಹಿರೇಹಳ್ಳಿ ಮಹೇಶ್, ಮಹಾನಗರ ಪಾಲಿಕೆ ಸದಸ್ಯ ಮಂಜುನಾಥ್ ಸೇರಿದಂತೆ ಜೆಡಿಎಸ್ ಪದಾಧಿಕಾರಿಗಳಾದ ರುದ್ರೇಶ್, ಸತೀಶ್, ಸುವರ್ಣಗಿರಿ ಕುಮಾರ್, ಕೆಂಪರಾಜು, ಮಹಮ್ಮದ್ ಆಜಮ್ ಮತ್ತಿತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link