ಕ್ರೀಡಾ ವಸತಿ ನಿಲಯ ಮಂಜೂರು ಮಾಡುವ ಪ್ರಯತ್ನ ಮಾಡುವೆ :ಶಾಸಕ

ಹರಪನಹಳ್ಳಿ:

     ತಾಲ್ಲೂಕಿನಲ್ಲಿ ಅತಿ ಹೆಚ್ಚು ಕ್ರೀಡಾಪಟುಗಳು ಇರವುದರಿಂದ ಈ ಭಾಗದಲ್ಲಿ ಕ್ರೀಡಾ ವಸತಿನಿಲಯವನ್ನು ಮಂಜೂರು ಮಾಡುವ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಹೇಳಿದರು.

      ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹರಪನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ಪ್ರೌಡಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದಅವರು ಕ್ರೀಡಾ ಕೂಟಗಳಲ್ಲಿ ಕ್ರೀಡಾಪಟುಗಳಿಗೆ ಸಮವಸ್ತ್ರದ ತಾರತಮ್ಯ ವಾಗದೆ ಅವರಿಗೆ ಒಂದೇ ರೀತಿಯ ಸಮವಸ್ತ್ರ ಹಾಗೂ ಶೂ ಬೇಕು ಎಂಬುದನ್ನು ತಿಳಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡದೆ ಅವರಿಗೆ ಸಮವಸ್ತ್ರ ಸಿಗುವಂತೆ ಮಾಡುತ್ತೇನೆ. ಕ್ರೀಡಾ ದೈಹಿಕ ನಿರ್ದೇಶಕರು ನೀಡುವ ತೀರ್ಮಾನ ಗೌರವಿಸಬೇಕು ಅವರು ಕೂಡ ನ್ಯಾಯಯುತ ನಿರ್ಣಯ ಕೊಡಬೇಕು ಎಂದರು.

      ಕ್ರೀಡಾಪಟುಗಳು ವಲಯಮಟ್ಟ ಮುಗಿಸಿ ತಾಲ್ಲೂಕು ಮಟ್ಟಕ್ಕೆ ಬಂದಿದ್ದೀರಿ. ಇದೇ 18 ಕ್ಕೆ ಜಿಲ್ಲಾ ಮಟ್ಟದಲ್ಲಿ ನೀವು ಭಾಗವಹಿಸಿ ಅಲ್ಲಿ ಗೆದ್ದು ರಾಜ್ಯಮಟ್ಟದಲ್ಲಿ ಭಾಗವಹಿಸಿ ಅಲ್ಲಿ ಗೆಲವು ಸಾಧನೆ ಮಾಡುವ ಮೂಲಕ ಹರಪನಹಳ್ಳಿ ತಾಲ್ಲೂಕನ್ನು ದೇಶದ ಭೂಪಟದಲ್ಲಿ ಗುರುತಿಸುವಂತೆ ಮಾಡಬೇಕು, ಅವರು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸವುದರಿಂದ ಮಕ್ಕಳ ಅರೋಗ್ಯ ಹಾಗೂ ಕ್ರೀಯಾಶೀಲರಾಗಿರುತ್ತಾರೆ ಎಂದರು.

      ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಶೀಲಾ ಕೆ.ಆರ್. ಪುರಸಭೆ ಅದ್ಯಕ್ಷ ಎಚ್.ಕೆ.ಹಾಲೇಶ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣಮ್ಮ ಉಪಾಧ್ಯಕ್ಷ ಎಲ್.ಮಂಜ್ಯಾನಾಯ್ಕ, ಪುರಸಭೆ ಉಪಾಧ್ಯಕ್ಷ ಕೆ. ಸತ್ಯನಾರಾಯಣ, ಜಿಲ್ಲಾ ಪಂಚಾತಿಯಿ ಸದಸ್ಯರಾದ ಸುವರ್ಣ ಆರುಂಡಿ, ಬಿಇಒ ಎಲ್.ರವಿ, ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಜಂಟಿ ಕಾರ್ಯದರ್ಶಿ ಜಿ.ಪದ್ಮಲತಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಸಂಗಪ್ಪನವರ್, ನೌಕರರ ಒಕ್ಕೂಟದ ಅಧ್ಯಕ್ಷ ಎಂ.ಆಂಜನೇಯ ತಾಲ್ಲೂಕು ಪಂಚಾಯಿತಿ ಸದಸ್ಯರಾದ ವೆಂಕಟೇಶ್‍ರೆಡ್ಡಿ ವೀರಣ್ಣ, ಮುಖಂಡರಾದ ನಿಟ್ಟೂರುಸಣ್ಣಹಾಲಪ್ಪ, ಸತ್ತೂರು ಹಾಲೇಶ್, ಲೋಕೇಶ್, ಬಾಗಳಿ ಕೊಟ್ರೇಶ್, ಕೆ.ಸಿದ್ದಲಿಂಗನಗೌಡ, ಎಸ್.ವೀರಣ್ಣ, ಅಂಜಿನಪ್ಪ ಕಮ್ಮತ್ತರ, ಎಚ್.ಹೂವಣ್ಣ, ಕೆ.ಷಣ್ಮುಖಪ್ಪ, ಶಾನಭೋಗರ ಸಿದ್ದಪ್ಪ, ಎ.ಎಚ್.ಜನಾರ್ದನರೆಡ್ಡಿ, ಯು.ಶೇಖರಪ್ಪ, ಬಿ.ರಾಜಶೇಖರ, ಜಯಣ್ಣ ಪೂಜಾರ್, ಇತರರಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link