ಬೆಂಗಳೂರು :
ಜಲಸಂಪನ್ಮೂಲ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ತನ್ನ ಮೇಲಿನ ದೂರುಗಳಿಂದ ಪಾರಾಗಲು ಕಸರತ್ತು ನಡೆಸಿದ್ದು, ಭ್ರಷ್ಟಾಚಾರ ನಿಗ್ರಹ ಘಟಕದ ಅಧಿಕಾರಿಗಳಿಗೆ ಕೋಟ್ಯಂತರ ರೂ. ಲಂಚ ನೀಡಿದ್ದಾರೆ. ಅಲ್ಲದೇ ಹವಾಲಾದಲ್ಲಿ ಭಾಗಿಯಾಗಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಪರ ವಕೀಲ ಜೀವನ್ ನೀರಲಗಿ ದೂರಿನಲ್ಲಿ ಆರೋಪ ಮಾಡಿದ್ದಾರೆ.
ಆದಾಯ ತೆರಿಗೆ ಇಲಾಖೆ ಪರ ವಕೀಲ ಜೀವನ್ ನೀರಲಗಿ ಸಲ್ಲಿರುವ ದೂರಿನ ವಿವರ ಹೊರಬಂದಿದ್ದು, ಅದರಂತೆ ಅರೋಪಗಳ ಬಗ್ಗೆ ವಿವರ ನೀಡುವಂತೆ ಐಟಿ ನೋಟೀಸ್ ಜಾರಿ ಮಾಡಿತ್ತು . ಈ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಶನಿವಾರ ಕಚೇರಿಗೆ ತೆರಳಿ ವಿವರ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಎಐಸಿಸಿಗೆ ಡಿಕೆಶಿ ಕೋಟ್ಯಂತರ ಹಣ ಪಾವತಿಸಿ, ತಮ್ಮ ಮೇಲೆ ಯಾವುದೇ ಕ್ರಮ ಕೈಗೊಳ್ಳದಂತೆ ನೋಡಿಕೊಂಡಿದ್ದಾರೆ. ಅಲ್ಲದೇ ಹವಾಲಾ ಚಟುವಟಿಕೆಯಲ್ಲಿ ಕೂಡ ಭಾಗಿಯಾಗಿದ್ದಾರೆ. ದೆಹಲಿಯ 4 ಫ್ಲಾಟ್ಗಳ ಮೇಲೆ ಐಟಿ ದಾಳಿ ನಡೆದ ಸಂದರ್ಭದಲ್ಲಿ 8.59 ಕೋಟಿ ಪತ್ತೆಯಾಗಿತ್ತು. ಪ್ರಕರಣದ 5ನೇ ಆರೋಪಿಯಾಗಿರುವ ರಾಜೇಂದ್ರ ಮನೆ ಮೇಲೂ ಐಟಿ ದಾಳಿಯಾಗಿತ್ತು. ಡಿಕೆಶಿ, ಶರ್ಮಾ ಟ್ರಾನ್ಸ್ ಪೋರ್ಟ್ ವ್ಯವಹಾರ ನೋಡಿಕೊಳ್ಳುವ ರಾಜೇಂದ್ರ ಮನೆಯಲ್ಲಿ ಡೈರಿ, ಟಿಪ್ಪಣಿಗಳು ಪತ್ತೆಯಾಗಿದ್ದವು ಎನ್ನಲಾಗಿದೆ.
ಲಕ್ಷಗಳನ್ನು ಞg ಎಂದು ಡೈರಿಯಲ್ಲಿ ಉಲ್ಲೇಖ ಮಾಡಲಾಗಿದ್ದು, ಎಐಸಿಸಿಗೆ ನೀಡಲು ವಿ.ಮುಳ್ಗುಂದ್ಗೆ 5 ಕೋಟಿ ರವಾನಿಸಲಾಗಿದೆ. ಡಿ.ಕೆ. ಶಿವಕುಮಾರ್ ಸೂಚನೆ ಮೇರೆಗೆ ಹಣ ರವಾನಿಸಿದ್ದ ರಾಜೇಂದ್ರ, ಆಂಜನೇಯಗೆ 3.24 ಕೋಟಿ ಪಾವತಿಸಿದ್ದರು ಎಂದು ತಿಳಿದು ಬಂದಿದೆ.
ಶರ್ಮಾ ಟ್ರಾನ್ಸ್ ಪೋರ್ಟ್ ಗೆ ಸೇರಿದ ಮನೆ ಡಿಕೆಶಿ ಹಣ ಇಡಲು ಬಳಕೆ ಮಾಡಿಕೊಂಡಿದ್ದು, ಸಫ್ದರ್ ಜಂಗ್ ನ 3 ಫ್ಲಾಟ್ ಗಳಲ್ಲಿ ಹಣ ಸಂಗ್ರಹ ಮಾಡಲಾಗಿತ್ತು. ಈ ಹಣವನ್ನು ನೋಡಿಕೊಳ್ಳಲು ಸಚಿನ್ ನಾರಾಯಣ್ ಬಳಕೆ ಮಾಡಿಕೊಳ್ಳುತ್ತಿದ್ದರು. ಐಟಿಗೆ ಸಿಕ್ಕಿದ 1.37 ಕೋಟಿ ಹಣ ಹಾಗೂ ಫ್ಲಾಟ್ ತನ್ನದೆಂದು ಸಚಿನ್ ನಾರಾಯಣ್ ಹೇಳಿಕೊಂಡಿದ್ದಾರೆ. ಆದರೆ ಹಣದ ಮೂಲ ತಿಳಿಸಲು ಸಚಿನ್ ನಾರಾಯಣ್ ವಿಫಲನಾಗಿದ್ದಾನೆ ದೂರಿನಲ್ಲಿ ಆರೋಪಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
