ದಾವಣಗೆರೆ:
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಸ್ಫರ್ದೆಯಲ್ಲಿ ನಗರದ ಬೀರೇಶ್ವರ ವ್ಯಾಯಾಮ ಶಾಲೆಯ ಕ್ರೀಡಾಪಟುಗಳು ಭಾಗವಹಿಸಿ, ಕಂಚಿನ ಪದಕ ಪಡೆದಿದ್ದಾರೆ.
ಕ್ರೀಡಾಪಟುಗಳಾದ ಪಿ.ವಿಶ್ವಾನಾಥ್ ಮತ್ತು ವಿ.ರಕ್ಷಿತ್ ಅವರುಗಳು ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ 93 ಕೆಜಿ ವಿಭಾಗದಲ್ಲಿ ಕ್ರಮವಾಗಿ ಮಾಸ್ಟರ್ಸ್ ಮತ್ತು ಜೂನಿಯರ್ಸ್ ವಿಭಾಗದಲ್ಲಿ ಸ್ಪರ್ಧಿಸಿ ಕಂಚಿನ ಪದಕ ಪಡೆದು, ಸೆ.26ರಿಂದ 30ರ ವರೆಗೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಇವರಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಉದ್ಯಮಿ ಗೋಪಾಲರಾವ್ ಮಾನೆ, ಶಶಿ ಸೋಪ್‍ನ ರವಿ ಇಳಂಗೋ, ವೀರಶೈವ ಸಮಾಜದ ಮುಖಂಡ ದೇವರಮನಿ ಶಿವಕುಮಾರ್, ಬೀರೇಶ್ವರ ವ್ಯಾಯಾಮ ಶಾಲೆಯ ಸಂಚಾಲಕ ಕೆ. ಮಲ್ಲಪ್ಪ ವತ್ತಿತರರು ಅಭಿನಂದಿಸಿದ್ದಾರೆ.
