ನವದೆಹಲಿ:
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಸರ್ಕಾರ ಪತನವಾದರೆ, ಬಿಜೆಪಿ ನಾಯಕರ ನೆರಳೂ ಕೂಡಾ ಕಾಣಬಾರದು ಎಂದು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್‍ಶಾ ಅವರು ರಾಜ್ಯ ಬಿಜೆಪಿ ನಾಯಕರಿಗೆ ಖಡಕ್ ಸೂಚನೆ ನೀಡಿದರು.
ಸೆಪ್ಟೆಂಬರ್ 16 ರಂದೇ ಸೂಚಿಸಿರುವ ಅವರು, ಒಂದು ವೇಳೆ ಸಮ್ಮಿಶ್ರ ಸರ್ಕಾರ ಪತನಗೊಂಡಿದ್ದೇ ಆದಲ್ಲಿ ಕೂಡಲೇ ಸಭೆ ನಡೆಸಬೇಕು.ಮುಂದಿನ ನಿರ್ಧಾರ ಕೈಗೊಳ್ಳುವವರೆಗೂ ಬಿಜೆಪಿಯು ಸರ್ಕಾರವನ್ನು ಬೀಳಿಸಿತು ಎಂಬ ಭಾವನೆ ಜನರಲ್ಲಿ ಬಾರದಂತೆ ಹಾಗೂ ಪಕ್ಷದ ನಾಯಕರೂ ಕೂಡಾ ಅದರಲ್ಲಿ ಕಾಣಿಸಿಕೊಳ್ಳಬಾರದು ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








