ಇತಿಹಾಸ ಅರಿಯುವುದರಿಂದ ಜನ್ಮ ಪಾವನ

ದಾವಣಗೆರೆ :

             ಮನುಷ್ಯ ಜನ್ಮ ಪಾವನವಾಗಬೇಕಾದರೆ ಇತಿಹಾಸ ತಿಳಿದುಕೊಳ್ಳಬೇಕು ಎಂದು ಅಮರ ಶಿಲ್ಪಿ ಜಕಣಾಚಾರ್ಯ ಪ್ರಶಸ್ತಿ ಪುರಸ್ಕøತರಾದ ಖ್ಯಾತ ಶಿಲ್ಪಿ ಜಿ.ಬಿ.ಹಂಸಾನಂದ ಆಚಾರ್ಯ ಅಭಿಪ್ರಾಯಪಟ್ಟರು.

              ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕತಿ ಇಲಾಖೆ, ಮಹಾನಗರಪಾಲಿಕೆ ಹಾಗೂ ಜಿಲ್ಲಾ ವಿಶ್ವಕರ್ಮ ಸಮಾಜ ಇವರ ಸಂಯುಕ್ತಾಶ್ರಯದಲ್ಲಿ ಇಂದು ಕಾಳಿಕಾಂಬ ವಿಶ್ವಕರ್ಮ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಗಿದ್ದ ಭಗವಾನ್ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

              ಋಗ್ವೇದದ ಪ್ರಕಾರ ವಿಶ್ವಕರ್ಮ ಸೃಷ್ಟಿ ದೇವತೆಯ ಅಮೂರ್ತ ರೂಪ. ವಾಸ್ತುಶಿಲ್ಪಿಗಳ ಪ್ರಧಾನ ದೇವತೆ. ಬ್ರಹ್ಮಾಂಡದ ಪ್ರಧಾನ ವಾಸ್ತುಶಿಲ್ಪಿ. ಋಗ್ವೇದ, ಯಜುರ್‍ವೇದ, ಅಥರ್ವ ವೇದ ಮತ್ತು ಕಲಿಯುಗದಲ್ಲಿಯೂ ವಿಶ್ವಕರ್ಮನನ್ನು ವಿವಿಧ ಹೆಸರುಗಳಿಂದ ಚಿತ್ರಿಸಲಾಗಿದೆ. ವಿಶ್ವ ಕಟ್ಟುವಲ್ಲಿ, ಶಾಂತಿ ನಿರೂಪಿಸುವಲ್ಲಿ ವಿರ್ಶಕರ್ಮರ ಪಾತ್ರ ಅಪಾರವಾದದ್ದು. ಎಲ್ಲ ವಿಶ್ವಕರ್ಮರ ಹೃದಯ ಕಮಲದಲ್ಲಿಯೂ ಭಗವಾನ್ ವಿಶ್ವಕರ್ಮನಿದ್ದಾನೆ ಎಂದರು.

              84 ಲಕ್ಷ ಜೀವರಾಶಿಯಲ್ಲಿ ಮನುಷ್ಯ ಜನ್ಮ ಕೊನೆಯದ್ದು. ಅದರಲ್ಲೂ ವಿಶ್ವಕರ್ಮನಾಗಿ ಜನ್ಮ ಪಡೆಯುವುದು ವಿರಳ. ವಿಶ್ವಕರ್ಮನಾಗಿ ಜನ್ಮ ತಾಳಲು ಪುಣ್ಯ ಮಾಡಿರಬೇಕು. ನಮ್ಮನ್ನು ನಾವು ತಿಳಿಯುವವರೆಗೆ ವಿಶ್ವಕರ್ಮ ತಿಳಿಯುವುದಿಲ್ಲ. ಆದ್ದರಿಂದ ನಾನು ಯಾರೆಂಬ ಪ್ರಶ್ನೆ ಹಾಕಿಕೊಳ್ಳಬೇಕು. ನರನು ಶಿರಬಾಗಬೇಕಾದರೆ ಶಿಲ್ಪಕಲೆ ಬೇಕು. ಕಲ್ಲಿನಲ್ಲಿ ಬಂಗಾರವಿದೆ ಎಂದು ತಿಳಿಸಿದವನು ವಿಶ್ವಕರ್ಮ, ಕಲ್ಲಿನಲ್ಲಿ ಸಕಲ ಧಾತುಗಳಿವೆ ಎಂದು ತಿಳಿಸಿದವ ವಿಶ್ವಕರ್ಮ ಎಂದರು.

              ವಿಶ್ವಕರ್ಮರು ಮಹಿರ್ಷಿಗಳ ವಂಶಸ್ಥರು. ವಿಶ್ವಕರ್ಮನ ಐದು ಮುಖಗಳು ಆಕಾಶ, ಬೆಳಕು, ಜಲ, ನೆಲ ಮತ್ತು ಗಾಳಿಯನ್ನು ಪ್ರತಿನಿಧಿಸುತ್ತದೆ. ಕಾಣದ ಇನ್ನೊಂದು ಮುಖ ಗಾಯತ್ರಿಯದ್ದಾಗಿದೆ. ರಾಮಕೃಷ್ಣ, ವಿವೇಕಾನಂದ ಸೇರಿದಂತೆ ಎಲ್ಲ ಮಹಾತ್ಮರೂ ವಿಶ್ವಕರ್ಮರೇ ಆಗಿದ್ದಾರೆ. ವಿಶ್ವಕರ್ಮರು 125 ಗೋತ್ರಗಳನ್ನು ಹೊಂದಿದ್ದು, ವೈವಾಹಿಕ ಸಂಬಂಧಗಳಲ್ಲಿ ಸ್ವಗೋತ್ರ ನೋಡುವುದನ್ನು ಬಿಡಬೇಕೆಂದು ಸಲಹೆ ನೀಡಿದ ಅವರು ಇಂದು ಸಂಸ್ಕಾರದ ಕೊರತೆಯಿದ್ದು, ನಾವೆಲ್ಲರೂ ಸಂಸ್ಕಾರವಂತರಾಗಬೇಕಿದೆ. ಭಯ, ಭಕ್ತಿ, ಜ್ಞಾನ, ವೈರಾಗ್ಯ ಬೇಕಿದೆ. ಕ್ಷಮಾ ಗುಣ ಹೊಂದಬೇಕಿದೆ ಎಂದರು.

              ಕಾರ್ಯಕ್ರಮ ಉದ್ಘಾಟಿಸಿದ ಮೇಯರ್ ಶೋಭಾ ಪಲ್ಲಾಗಟ್ಟೆ ಮಾತನಾಡಿ, ಮನುಷ್ಯನಿಗೆ ಮುಖ್ಯವಾಗಿ ಬೇಕಿರುವುದು ಸಮಾಧಾನ. ಸಮಾಧಾನ ಚಿತ್ತದಿಂದ ಯುವಕರು ಸೇರಿದಂತೆ ಎಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಹಾರೈಸಿ, ವಿಶ್ವಕರ್ಮ ಜಯಂತಿಗೆ ಶುಭ ಕೋರಿದರು.

              ಉಪವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ವಿಶ್ವ ಸೃಷ್ಟಿಸಿದ ವಿಶ್ವಕರ್ಮರ ಪ್ರಸ್ತುತ ಸವಾಲುಗಳು ಮತ್ತು ಸಾಗಬೇಕಾದ ದಿಕ್ಕಿನ ಕುರಿತು ಚಿಂತಿಸಬೇಕಿದೆ. ಬದುಕನ್ನು ಕಟ್ಟಿಕೊಳ್ಳುವ ಹೊಣೆಗಾರಿಕೆ ಹೆಚ್ಚಿದೆ. ಹೊಸ ತಂತ್ರಜ್ಞಾನ ಮತ್ತು ಆಧುನಿಕತೆಗೆ ಹೊಂದಿಕೊಳ್ಳಬೇಕಾಗಿದೆ. ಅತ್ಯಂತ ಸೃಜನಶೀಲತೆ, ಸುಸಂಸ್ಕತೆಯಿಂದ ಕೂಡಿದ ಸಮುದಾಯ ಕೈಗಾರಿಕೋದ್ಯಮ, ನಗರೀಕರಣ, ಆಧುನಿಕತೆಯ ಸವಾಲನ್ನು ಎದುರಿಸುತ್ತಿದೆ. ಇಂತಹ ಸಂದರ್ಭಗಳನ್ನರಿತ ಭಾರತ ಮತ್ತು ರಾಜ್ಯ ಸರ್ಕಾರ ಕೌಶಲ್ಯ ಭಾರತ ಮತ್ತು ಕೌಶಲ್ಯ ಕರ್ನಾಟಕವೆಂಬ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತರಬೇತಿ, ಹಣಕಾಸಿನ ನೆರವನ್ನು ನೀಡುತ್ತಿದೆ. ಕೌಶಲ್ಯಾಭಿವೃದ್ಧಿ ಇಲಾಖೆಯೇ ಇದ್ದು ಸಮುದಾಯಗಳ ಕೌಶಲ್ಯವನ್ನು ಆಧುನಿಕತೆಗೆ ತಕ್ಕಂತೆ ಬದುಕು ರೂಪಿಸಿಕೊಳ್ಳಲು ಯೋಜನೆಗಳನ್ನು ರೂಪಿಸಿದೆ ಎಂದರು.

             ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಸ್ವಾಗತಿಸಿದರು. ಜಿಲ್ಲಾ ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ನಾಗೇಂದ್ರಾಚಾರ್, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಮರಿಯಾಚಾರ್, ಜಿಲ್ಲಾ ವಿಶ್ವಕರ್ಮ ಸಮಾಜದ ಪ್ರಧಾನ ಕಾರ್ಯದರ್ಶಿ ಶಿವಾನಂದ್ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link