ಹುಳಿಯಾರು:
ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತನಿಗೆ ಹಾವು ಕಡಿದ ಪರಿಣಾಮ ಸ್ಥಳದಲ್ಲೇ ರೈತ ಸಾವನ್ನಪ್ಪಿದ ಘಟನೆ ಹುಳಿಯಾರು ಹೋಬಳಿಯ ತೊರೆಮನೆಯಲ್ಲಿ ಜರುಗಿದೆ.
ಹಾವು ಕಡಿದು ಸಾವನ್ನಪ್ಪಿದ ರೈತನನ್ನು ತೊರೆಮನೆಯ ಲಕ್ಷ್ಮಯ್ಯ ಬಿನ್ ನಿಂಗಯ್ಯ (65) ಎಂದು ಗುರುತಿಸಲಾಗಿದೆ. ಈವರು ಕೃಷಿಯ ಜೊತೆ ಹೈನುಗಾರಿಗೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಎಂದಿನಂತೆ ತನ್ನ ಹಸುಗಳಿಗೆ ಹುಲ್ಲು ಹಾಕಲು ಕೊಪ್ಪಲಿನಲ್ಲಿದ್ದ ಹುಲ್ಲು ಇರಿಯುವಾಗ ವಿಷಪೂರಿತ ಹಾವು ಬಲ ಮೊಣಕಾಲಿನ ಕೆಳಗೆ ಕಚ್ಚಿದೆ.
ಪರಿಣಾಮ ಲಕ್ಷ್ಮಯ್ಯ ಕಾಲಿಡಿದುಕೊಂಡು ಕೂಗಿಕೊಂಡು ಕಳಗೆ ಬಿದ್ದಿದ್ದಾರೆ. ತಂದೆಯ ಧ್ವನಿ ಕೇಳಿದ ಮಗ ಮಲ್ಲಿಕಾರ್ಜುನಯ್ಯ ಅವರು ಬಂದು ನೋಡಲಾಗಿ ಕಾಲಿನಿಂದ ರಕ್ತ ಹರಿಯುತ್ತಿದ್ದು ತನ್ನ ತಾಯಿ ವಸಂತರವಿಗೆ ಮಾಹಿತಿ ನೀಡಿ ಬಟ್ಟೆ ಹಾಗೂ ದಾರದಿಂದ ಮೊಣಕಾಲು ಕಟ್ಟುವ ಮೂಲಕ ಪ್ರಥಮ ಚಿಕಿತ್ಸೆ ಮಾಡಿದ್ದರೆ.
ಅಷ್ಟರಲ್ಲಾಗಲೇ ಹಾವಿನ ವಿಷ ದೇಹವನ್ನೇ ಆಕ್ರಮಿಸಿದ್ದ ಪರಿಣಾಮ ಪ್ರಥಮ ಚಿಕಿತ್ಸೆ ಫಲಕಾರಿಯಾಗದೆ ರೈತ ಲಕ್ಷ್ಮಯ್ಯ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಹಾಗೂ 1 ಗಂಡು ಮತ್ತು 2 ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ