ಪಾವಗಡ;-
ವಿದ್ಯಾರ್ಥಿಗಳ ಜಾತಿ ಅದಾಯ, ಮತ್ತು ಅಧಾರ್ ಕಾರ್ಡ ಪಡೆಯಲು ತಹಶೀಲ್ದಾರ್ ಕಛೇರಿಯಲ್ಲಿ ಪ್ರತ್ಯೇಕ ಕೌಂಟರ್ ತೆರೆಯಬೇಕೆಂದು ಪಾವಗಡ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕರುಗಳು ತಹಶೀಲ್ದಾರ್ ಕಛೇರಿಯ ಶಿರಸ್ಥೆದಾರ್ ಗೆ ಮನವಿ ಸಲ್ಲಿಸಿದ ಘಟನೆ ಮಂಗಳವಾರ ಜರುಗಿದೆ.
ಸಂಘದ ಸಂಘಟನಾ ಕಾರ್ಯದರ್ಶಿ ಕೆ. ನರಸಿಂಹಮೂರ್ತಿ ಮಾತನಾಡಿ, ತಾಲ್ಲೂಕಿನಲ್ಲಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್.ಸಿ. ಎಸ್.ಟಿ. ಮತ್ತು ಓ.ಬಿ.ಸಿ.ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಡೆಯಲು ಆದಾರ್‍ಕಾರ್ಡ, ಜಾತಿ ಮತ್ತು ವರಮಾನ ಪತ್ರ ಮತ್ತು ಬ್ಯಾಂಕಿನಲ್ಲಿ ಖಾತೆ ತೆರಯಲು ಪೋಷಕರು ಹರಸಾಹಸ ಪಡುತ್ತಿದ್ದು,ಸಮಾಜಕಲ್ಯಾಣ ಇಲಾಖೆಯಿಂದ ಅನ್‍ಲೈನ್ ನಲ್ಲಿ ಅರ್ಜಿಯೊಂದಿಗೆ ಮಾಹಿತಿಯನ್ನು ಪೂರ್ಣಗೊಳಿಸಬೇಕಾಗಿರುವುದರಿಂದ ಸಮಸ್ಯೆಯುಂಟಾಗುತ್ತಿದ್ದು, ಅಲ್ಲದೆ ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ನಿಗದಿತ ಸಮಯದಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಲು ಅದೇಶ ನೀಡಿರುವುದರಿಂದ ತುಂಬ ಸಮಸ್ಯೆಯುಂಟಾಗಿದ್ದು, ಮುಖ್ಯ ಶಿಕ್ಷಕರುಗಳು ಒತ್ತಡದಲ್ಲಿ ಸಿಲುಕಿದ್ದು, ಕೂಡಲೆ ತಹಶೀಲ್ದಾರ್ ಕಛೇರಿಯಲ್ಲಿ ವಿದ್ಯಾರ್ಥಿಗಳ ಜಾತಿ ಅದಾಯ, ಮತ್ತು ಅಧಾರ್ ಕಾರ್ಡ್ ಪಡೆಯಲು ಪ್ರತ್ಯೇಕ ಕೌಂಟರ್ ತೆರೆಯಬೇಕೆಂದು ಒತ್ತಾಯಿಸಿದರು.
ಸಂಘದ ಉಪಾಧ್ಯಕ್ಷರಾದ ಸಾವಿತ್ರಮ್ಮ ಮಾತನಾಡಿ, ಪಾವಗಡ ತಾಲ್ಲೂಕಿನಲ್ಲಿ ಎಸ್.ಸಿ. ಎಸ್.ಟಿ. ಮಕ್ಕಳೆ ಹೆಚ್ಚಾಗಿದ್ದು, 1 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಜಾತಿ ವರಮಾನ ಪತ್ರ ಹಾಗೂ ಅದಾರ್ ಕಾರ್ಡ್ ಇರುವುದಿಲ್ಲ, ಅಲ್ಲದೆ ತಂದೆ ತಾಯಿಯರ ಅದಾರ್ ಕಾರ್ಡ ಸಹ ಇರುವುದಿಲ್ಲ, ಅದ್ದರಿಂದ ಅಪ್ ಲೋಡ್ ಮಾಡಲು ಸಮಸ್ಯೆಯುಂಟಾಗಿದೆ ಎಂದರು.
ಶಿಕ್ಷಕರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಶ್ರೀನಿವಾಸಲು ಮಾತನಾಡಿ, ಪಾವಗಡ ತಾಲ್ಲೂಕಿನಲ್ಲಿ ಪಕ್ಕದ ಗಡಿಯಲ್ಲಿಯಲ್ಲಿರುವ ಅಂದ್ರದಿಂದಲೂ ಮಕ್ಕಳು ಶಾಲೆಗಳಿಗೆ ಅಗಮಿಸುತ್ತಿದ್ದು, ಇವರ ಅಧಾರ್ ಕಾರ್ಡ ಅಂದ್ರದಲ್ಲಿದ್ದು, ಕರ್ನಾಟಕದಲ್ಲಿ ವಾಸಸ್ಥಳ ಪ್ರಮಾಣ ಪತ್ರ ಪಡೆಯಲು ಸಮಸ್ಯೆಯುಂಟಾಗಿದೆ, ಅದ್ದರಿಂದ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮದ್ಯ ಪ್ರವೇಶಿಸಿ ಈ ಸಮಸ್ಯೆಯನ್ನು ಹೋಗಲಾಡಿಸಬೇಕೆಂದು ಒತ್ತಾಯಿಸಿದರು.ಶಿರಸ್ಥೆದಾರ್ ಜಯಣ್ಣಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭಲ್ಲಿ ಶಿಕ್ಷಕರ ಸಂಘದ ನಿರ್ದೇಶಕರಾದ ವಿಜಯಲಕ್ಷ್ಮಿ,ಮುಖ್ಯ ಶಿಕ್ಷಕರಾದ ಚಿಕ್ಕೋಬಳಪ್ಪ, ಅಶ್ವಥಪ್ಪ, ಕೇಶವನ್,ಉಗ್ರಪ್ಪ, ವೇಣುಗೋಪಾಲ್ ರೆಡ್ಡಿ, ನಾಗೇಂದ್ರಪ್ಪ, ಮತ್ತಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
