ಹರಿಹರ:
ಗಂಗನರಸಿ ಗ್ರಾಮದ ಸಹಕಾರ ಸಂಘಗದಲ್ಲಿನ 261 ರೈತರ 96ಲಕ್ಷದ 84 ಸಾವಿರ ರೂ ರೈತರ ಸಾಲ ಮನ್ನಾವು 2017-18ನೇ ಸಾಲಿನ ಆಗಿದೆ. ಮುಂದಿನ ಜೂನ್ ಜೂಲೈ ತಿಂಗಳೊಳಗೆ ರೈತರಿಗೆ ಹೆಚ್ಚುವರಿ ಸಾಲ ಕೊಡುವುದಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಾಕಾರ ಸಂಘದ ನೂತನ ಅಧ್ಯಕ್ಷ ಎಂ.ಎನ್. ಶರಣಬಸಪ್ಪ ಭರವಸೆ ನೀಡಿದರು.
ತಾಲೂಕಿನ ಗಂಗನರಸಿ ಗ್ರಾಮದಲ್ಲಿ ಮಂಗಳವಾರ ಪ್ರಾಥಮಿಕ ಕೃಷಿ ಪತ್ತಿನ ಸಹಾಕಾರ ಸಂಘದ ಕಛೇರಿ ಆವರಣದಲ್ಲಿ ನೆಡದ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 2017-18ನೇ ಸಾಲಿನ ರೈತರ ಸಾಲ ಮನ್ನಾವಾಗಿರುವುದರಲ್ಲಿ 1 ಕೋಟಿ 10ಲಕ್ಷ 96 ಸಾವಿರಗಳಲ್ಲಿ, 96ಲಕ್ಷದ 84 ಸಾವಿರ ರೂ ಸಾಲ ಮನ್ನಾ ಆಗಿರುತ್ತದೆ. ರೈತರಿಂದ ವಸೂಲಾತಿ ಆದ ಹಣ 14 ಲಕ್ಷದ 12 ಸಾವಿರ.
ಸುಮಾರು ವರ್ಷಗಳಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಾಕಾರ ಸಂಘದ ಕಚೇರಿಯು ಮಳೆಯಿಂದ ಸೊರುತ್ತಿದ್ದು, ಇದರ ನವಿಕರಣವನ್ನು ಗ್ರಾಮದಲ್ಲಿ ಸರ್ಕಾರಿ ಜಮಿನಿನಲ್ಲಿ ಗೋದಾಮನ್ನು ನಿಮಾರ್ಣ ಮಡುವುದರ ಜೊತೆಗೆ, ಹೋರಗಿನ ರೈತರನ್ನು ಗಣನೆಗೆ ತಗೆದುಕೊಂಡು ಸಹಕಾರ ಸಂಘದ ಸದೂಪಯೋಗ ಪಡೆದುಕೋಳ್ಳಬೇಕು ಎಂದು ಹೇಳಿದರು.
ಸರ್ಕಾರ ರೈತರಿಗೆ ನೀಡುವ ಸೌಲಭ್ಯಗಳನ್ನು ಸಹಕಾರ ಸಂಘಗಳು ರೈತರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ. ನಾವು ನೂತನವಾಗಿ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ನಾನೂ ಕೂಡು ರೈತರಿಗೆ ಇಲಾಖೆಗಳಿಂದ ಸಿಗಬೇಕಾದ ಸೌಲಭ್ಯವನ್ನು ಕೊಡಿಸುವಲ್ಲಿ ಪ್ರಯತ್ನಿಸುತ್ತೇನೆ. ಈಗಾಗಲೆ ಗ್ರಾಮದಲ್ಲಿ ರೈತರು ತಮ್ಮ ಜಮೀನುಗಳಿಗೆ ಭತ್ತದ ನಾಟಿ ಮಾಡಿದ್ದು, ನೀರು ಇಲ್ಲದೆ ಭತ್ತ ಹೋಣಗುತ್ತಿದೆ. ಊರಿನಲ್ಲಿ ಭದ್ರ ನೀರು ಬಳಕೆ ದಾರರ ಎರಡು ಸಂಘಗಳಿದ್ದು, ಅವರುಗಳ ಸಹಕಾರದೊಂದಿಗೆ ಸುಮಾರು ದಿನಗಳಿಂದ ಕೊನೆಭಾಗದ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸುವಂತೆ ದಾವಣಗೆರೆ ನೀರಾವರಿ ಇಲಾಖೆಗೆ ಹೋಗಿ ಮನವಿ ಮಾಡುವುದಾಗಿ ತಿಳಿಸಿದರು.
ಗ್ರಾಮದ ಹಾಲು ಉತ್ಪಾದಕರು ಡೈರಿಗಳಿಗೆ ಹಾಲು ಹಾಕುತ್ತೀರಿ, ಅದರ ಹಣ ಬಿಡಿಸಿಕೋಳ್ಳಲು ನಗರ ಪ್ರದೇಶಗಳಿಗೆ ಹೋಗುವ ಬದಲು, ಡಿಸಿಸಿ ಬ್ಯಾಕ್ನಲ್ಲಿ ಖಾತೆ ತೆರೆಯುವುದರ ಮೂಲಕ ಹಣವನ್ನು ನಮ್ಮ ಗ್ರಾಮದ ಬ್ಯಾಂಕಿನಲ್ಲಿಯೇ ಬಿಡಿಸಿಕೊಳ್ಳಬಹುದು ಎಂದು ಹಾಲು ಉತ್ಪಾದಕರಿಗೆ ಸಲಹೆ ನೀಡಿದರು.
ಈ ವೇಳೆ ಸಹಕಾರ ಸಂಘದ ಕಾರ್ಯದರ್ಶಿ ಎಂ.ಮಹದೇವಪ್ಪ ವರ್ಷಿಕ ಲೆಕ್ಕ ಪತ್ರಗಳ ವರದಿಯನ್ನು ಮಂಡಿಸಿ, ಮಾಜಿ ಸದಸ್ಯರಿಗೆ ಬಿಳ್ಕೊಡಿಗೆ ನೀಡುವುದರ ಮೂಲಕ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಾಕಾರ ಸಂಘದ ಉಪಾಧ್ಯಕ್ಷರಾದ ಬಿ.ಕೊಟ್ರೇಶ್. ಸದಸ್ಯರುಗಳಾದ ಎಂ.ಸತ್ಯಾನಂದಂ. ಬಿ.ಯಶೋದರ್, ಗೌಡ್ರು ಅಬ್ಲೂರಪ್ಪ, ಈರಣ್ಣ ಆವರಗೊಳ್ಳ, ತಳವಾರ ನಾಗಪ್ಪ, ಸಿ. ಕೇಶವಪ್ಪ, ಆನ್ವೇರಿ ನಾಗಪ್ಪ, ಹಾಲುವರ್ತಿ ನಾಗಪ್ಪ, ಸುಮಂಗಳಮ್ಮ, ನೀಲಮ್ಮ ಹಾಗೂ ಪಿಗ್ಮಿ ಎಜೆಂಟ್ ಪ್ರಕಾಶ್. ಮಾರಾಟ ಸಹಯಕ ಜಬೀವುಲ್ಲಾ, ಗ್ರಾಮದ ಮುಖಂಡ ಜಿ.ಎಂ .ನಾಗೇಂದ್ರಪ್ಪ, ಎ.ಸಿ ರವಿ, ನಾಗರಾಜಪ್ಪ, ಹನುಮಂತಪ್ಪ, ಗ್ರಾಮಸ್ಥರು ಉಪಸ್ಥಿತರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ