ವಿದ್ಯಾರ್ಥಿಗಳು ಕ್ರೀಡೆಯ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು

ಕುಣಿಗಲ್ :

   ಕ್ರೀಡೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಯಾವುದೇ ರೀತಿಯ ವೈಮನಸ್ಸು,ಜಿದ್ದನ್ನು ಬಳೆಸಿಕೊಳ್ಳದೇ ಉತ್ತಮ ಸ್ನೇಹ ಮನೋಬಾವದೊಂದಿಗೆ ಕ್ರೀಡೆಯ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕೆಂದು ಶಾಸಕ ಡಾ|| ರಂಗನಾಥ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

    ತಾಲ್ಲೂಕಿನ ಕೊತ್ತಗೆರೆ ಹೋಬಳಿ ಶೆಟ್ಟಿಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮಂಗಳವಾರ ತುಮಕೂರು ದಕ್ಷಿಣ ಜಿಲ್ಲಾಮಟ್ಟದ ಹಿರಿಯ ಹಾಗೂ ಪ್ರೌಢಶಾಲೆಯ 14 ರಿಂದ 17 ವಯಸ್ಸಿನ ವಿದ್ಯಾರ್ಥಿಗಳಿಗೆ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

      ಜಿಲ್ಲಾ ಮಟ್ಟದ ಒಂದು ಕ್ರೀಡೆ ಗ್ರಾಮೀಣ ಪ್ರದೇಶದ ಒಂದು ಪುಟ್ಟ ಹಳ್ಳಿಯಲ್ಲಿ ನಡೆಯುತ್ತಿರುವುದು ಪ್ರಶಂಸನೀಯ ಕ್ರೀಡೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಲ್ಲಿ ಪಟ್ಟಣದ ಮಕ್ಕಳಿಗಿಂತ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ನಾವು ಹೆಚ್ಚು ಆಸಕ್ತಿ ಹಾಗೂ ಸ್ಪೂರ್ತಿಯನ್ನು ಕಾಣಬಹುದಾಗಿದೆ ಎಂದರು. ಸರ್ಕಾರ ಶಿಕ್ಷಣಕ್ಕೆ ಎಷ್ಟು ಮಾನ್ಯತೆ ನೀಡುತ್ತಿದೆಯೋ ಅದೇರೀತಿ ಕ್ರೀಡೆಗಳಿಗೂ ನೀಡಬೇಕು ಕ್ರೀಡೆಗಳಿಂದ ವಿದ್ಯಾರ್ಥಿಗಳ ಮನಸ್ಸು ಕ್ರೀಯಾಶಿಲತೆ ಹೊಂದುತ್ತದೆ ಹಾಗೂ ಆರೋಗ್ಯವಂತರಾಗಬಹುದು ಎಂದ ಅವರು ಇಂತಹ ಕಾರ್ಯಕ್ರಮಗಳಲ್ಲಿ ರಾಜಕೀಯವನ್ನು ಬೆರೆಸದೆ ಪಕ್ಷಾತೀತವಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಹ ನೀಡಬೇಕೆಂದರು.

      ಶೆಟ್ಟಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಹುಚ್ಚಯ್ಯ ಕ್ರೀಡಾ ಕಾರ್ಯಕ್ರಮವನ್ನು ಎಸ್‍ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ಸುಸರ್ಜಿತವಾಗಿ ಆಯೋಜಿಸಿದ್ದರು. ಪಂಧ್ಯದಲ್ಲಿ 24 ತಂಡಗಳು ಭಾಗವಹಿಸಿದ್ದವು, ಕಾರ್ಯಕ್ರಮದಲ್ಲಿ ಬಿಇಒ ಸಿದ್ದಯ್ಯ, ಅಕ್ಷರ ದಾಸೋಹದ ಶ್ರೀರಂಗರಾಜು, ಬಿಆರ್‍ಸಿ ಕೃಷ್ಣಕುಮಾರ್, ತಾ.ಪಂ. ಸದಸ್ಯೆ ರೇಣುಕಮ್ಮ, ಶಿಕ್ಷಕರ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್.ನಾಗರಾಜು, ಸ.ನೌ. ಸಂಘದ ಅಧ್ಯಕ್ಷ ಗೋಪಾಲ, ಮಾಜಿ ಅಧ್ಯಕ್ಷ ಶಿವಕುಮಾರ, ಜಿಲ್ಲಾ ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ನಾಗರಾಜ, ಸೇರಿದಂತೆ ಹಲವಾರು ತಾಲ್ಲೂಕು ಗಳಿಂದ ಬಂದಂತಹ ಕ್ರೀಡಾಪಟುಗಳು, ಸಾರ್ವಜನಿಕರು ಮತ್ತಿತರರು ಭಾಗವಹಿಸುವ ಮೂಲಕ ಕ್ರೀಡೆಯನ್ನು ಯಶಸ್ವಿಗೊಳಿಸಿದರು.

               ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link