ಕೊಡಗು ಸಂತ್ರಸ್ಥರ ದೇಣಿಗೆ ಸಂಗ್ರಹ ಏಣಿಕೆ : 1,09,700 ಕೊಡಗು ಆಡಳಿತಕ್ಕೆ

ಚಳ್ಳಕೆರೆ

     ಕಳೆದ ತಿಂಗಳು ರಾಜ್ಯದ ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಕೊಡಗು ಜಿಲ್ಲೆಯ ಹಲವಾರು ಗ್ರಾಮಗಳ ಜಲಾವೃತಗೊಳಿಸಿದ್ದಲ್ಲದೆ ಸಾವಿರಾರು ಜನರು ಮನೆ ಮಠ ಹಾಗೂ ಆಸ್ತಿಗಳನ್ನು ಕಳೆದುಕೊಂಡು ಅಕ್ಷರ ಸಹ ನಿರಾಶಿತರಾಗಿ ಸರ್ಕಾರದ ಮತ್ತು ಸಾರ್ವಜನಿಕರಿಂದ ನೆರವನ್ನು ಆಪೇಕ್ಷಿಸುವ ಸಂದರ್ಭ ಒದಗಿಬಂದಿತ್ತು.

     ಆದರೆ, ರಾಜ್ಯ ಸರ್ಕಾರ, ವಿವಿಧ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಕೊಡಗು ಜನರ ದಾರುಣ್ಯ ಸ್ಥಿತಿಯನ್ನು ಅರಿತು ಸ್ವಯಂ ಪ್ರೇರಣೆಯಿಂದ ಹಣ ಹಾಗೂ ವಸ್ತುಗಳ ಸಂಗ್ರಹಣೆಯಲ್ಲಿ ತೊಡಗಿದರು. ಚಳ್ಳಕೆರೆ ನಗರದಲ್ಲೂ ಸಹ ಇಲ್ಲಿನ ಹಲವಾರು ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು ಸ್ವಯಂ ಪ್ರೇರಣೆಯಿಂದ ಈ ಕಾರ್ಯದಲ್ಲಿ ನೆರವಾದವು.

    ತಾಲ್ಲೂಕು ಆಡಳಿತ ತಹಶೀಲ್ದಾರ್ ಟಿ.ಸಿ.ಕಾಂತರಾಜು ನೇತೃತ್ವದಲ್ಲಿ ಕೊಡಗು ನಿರಾಶಿತರಾಗಿಗಾಗಿ ನಗರದ ಹಲವಾರು ಅಂಗಡಿ ಮಳಿಗೆ, ಹೋಟೆಲ್, ಸಾರ್ವಜನಿಕವಾಗಿ ದೇಣಿಗೆಯನ್ನು ಸಂಗ್ರಹಿಸಿದ್ದು, ಕರ್ನಾಟಕ ಪ್ರೆಸ್ ಕ್ಲಬ್ ಸಹ ಸಹಕಾರ ನೀಡಿತ್ತು. ಸಂಗ್ರಹವಾದ ಹಣವನ್ನು ಮಂಗಳವಾರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಏಣಿಕೆ ಮಾಡಲಾಗಿದೆ. 1,09,700 ಹಣವಿದ್ದು ಇದನ್ನು ಜಿಲ್ಲಾಧಿಕಾರಿಗಳ ಮೂಲಕ ಕೊಡಗು ಜಿಲ್ಲಾ ಆಡಳಿತಕ್ಕೆ ಕಳುಹಿಸಿಕೊಡುವುದಾಗಿ ತಹಶೀಲ್ದಾರ್ ತಿಳಿಸಿದರು.

   ಏಣಿಕೆ ಕಾರ್ಯದಲ್ಲಿ ಕಂದಾಯಾಧಿಕಾರಿ ಶರಣಬಸಪ್ಪ, ಗ್ರಾಮ ಲೆಕ್ಕಿಗರಾದ ರಾಜೇಶ್, ರಾಮೇಗೌಡ, ಡಿ.ಶ್ರೀನಿವಾಸ್, ಹಿರಿಯ ಪತ್ರಕರ್ತ ಬಿ.ವಿ.ಮಂಜುನಾಥ, ಕರ್ನಾಟಕ ಪ್ರೆಸ್ ಕ್ಲಬ್ ಅಧ್ಯಕ್ಷ ಗೋಪನಹಳ್ಳಿ ಶಿವಣ್ಣ, ಬೆಳಗೆರೆ ಸುರೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಿ.ಟಿ.ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.

               ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link