ದಿ|| ಕೆ.ಸಿ.ಗುಪ್ತ ಜನ್ಮ ದಿನಾಚರಣೆ ಪ್ರಯುಕ್ತ ವಿವಿಧ ಕಾರ್ಯಕ್ರಮ

ದಾವಣಗೆರೆ:

      ವಾಸವಿ ಕ್ಲಬ್ ಇಂಟರ್ ನ್ಯಾಷನಲ್ ದೇವನಗರಿ ವತಿಯಿಂದ ಕ್ಲಬ್ಬಿನ ಸಂಸ್ಥಾಪಕ ದಿ. ಕೆ. ಸಿ.ಗುಪ್ತ ಅವರ 100ನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ಅರ್ಥಪೂರ್ಣ ವಿವಿಧ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಯಿತು.

       ಮಾತೃವಂದನಾ ಕಾರ್ಯಕ್ರಮವಲ್ಲದೇ, ರಕ್ತದಾನ ಶಿಬಿರ, ಶಿಕ್ಷಕರ ದಿನಾಚರಣೆ, ಪತ್ರಿಕಾ ದಿನಾಚರಣೆ ಸಮಾರಂಭಗಳನ್ನು ಸ್ಥಳೀಯ ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿರುವ ಶ್ರೀ ದತ್ತ ಮಂದಿರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.ವಾಸವಿ ಕ್ಲಬ್ಬಿನ ಅನೇಕ ಸದಸ್ಯರು ತಮ್ಮ ತಾಯಂದಿರಿಗೆ ಪಾದಪೂಜೆ ನೆರವೇರಿಸಿದರು. ಕ್ಲಬ್ಬಿನ ಸದಸ್ಯರು ಮಾತ್ರವಲ್ಲದೇ, ಅವರ ಕುಟುಂಬ ವರ್ಗದವರಿಗಾಗಿ ರಕ್ತದ ಗುಂಪಿನ ಪರೀಕ್ಷೆ ನಡೆಸಲಾಯಿತು. ಎಸ್.ಕೆ.ಪಿ. ವಿದ್ಯಾಸಂಸ್ಥೆಯ ಚನ್ನಗಿರಿ ವಿರೂಪಾಕ್ಷಪ್ಪ ವನಜಾಕ್ಷಮ್ಮ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಟಿ.ಕೆ. ನಳಿನಾಕ್ಷಿ ಅವರನ್ನು ಸನ್ಮಾನಿಸುವುದರೊಂದಿಗೆ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.

       ಹಿರಿಯ ಪತ್ರಕರ್ತ ಇ.ಎಂ. ಮಂಜುನಾಥ, ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸುವಲ್ಲಿ ತನ್ನದೇ ಆದ ವಿಶೇಷ ಮತ್ತು ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸುತ್ತಿರುವ ವಾಸವಿ ಕ್ಲಬ್ನ ಪದಾಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದರು.ತಾಯಿಯ ಋಣ ತೀರಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ ಅವರು, ಮಾತೃವಂದನಾ ಕಾರ್ಯಕ್ರಮದ ಮೂಲಕ ತಾಯಿಯ ಪಾದಪೂಜೆ ಮಾಡಿದ ವಾಸವಿ ಕ್ಲಬ್ಬಿನ ಸದಸ್ಯರನ್ನು ಅಭಿನಂದಿಸಿದರು. ಸಂಬಂಧಗಳನ್ನು ಬೆಸೆಯುವ ಇಂತಹ ಕಾರ್ಯಕ್ರಮಗಳು ಹೆಚ್ಚು-ಹೆಚ್ಚಾಗಿ ನಡೆಯುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

       ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಾಸವಿ ಕ್ಲಬ್ ಇಂಟರ್ ನ್ಯಾಷನಲ್ ದೇವನಗರಿ ಅಧ್ಯಕ್ಷ ಕೆ.ಜೆ. ಪ್ರಸಾದ್, ತಮ್ಮ ಕ್ಲಬ್ಬಿನಿಂದ ನಡೆಸುತ್ತಿರುವ ವಿವಿಧ ಸೇವಾ ಕಾರ್ಯಕ್ರಮಗಳನ್ನು ವಿವರಿಸಿದರು. ಕ್ಲಬ್ಬಿನ ವಲಯಾಧ್ಯಕ್ಷ ಎನ್. ಶ್ಯಾಮಸುಂದರ್ ಮಾತನಾಡಿ, ತಮ್ಮ ಕ್ಲಬ್ಬಿನ ಸದಸ್ಯರನ್ನು ಸೇವಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಅವರ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

       ಕ್ಲಬ್ಬಿನ ಖಜಾಂಚಿ ಶ್ರೀಮತಿ ರೇಖಾ ಅಂಜನಿ ಪ್ರಸಾದ್, ನಿರ್ದೇಶಕರಾದ ಶ್ರೀಮತಿ ವರಮಹಾಲಕ್ಷ್ಮಿ ಅವರುಗಳು ಅತಿಥಿಗಳ ಪರಿಚಯ ಮಾಡಿಕೊಟ್ಟರು. ವೆಂಕಟಾಚಲಪತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾಸವಿ ಕ್ಲಬ್ಬಿನ ಮಹಿಳೆಯರ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಚಂದ್ರಕುಮಾರ್ ಶೆಟ್ಟಿ ವಂದಿಸಿದರು.

              ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link