ಬೆಂಗಳೂರು:
ಫುಡ್ ಪಾಯ್ಸನ್ ಕಾರಣ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಡಿಕೆಶಿಗೆ ಮೂವರು ವೈದ್ಯರಿಂದ ಚಿಕಿತ್ಸೆ!
ನೆನ್ನೆ ಬೆಳಿಗ್ಗೆ ಕನಕಪುರದಿಂದ ರಾಮನಗರಕ್ಕೆ ತೆರಳುವ ಮಾರ್ಗಮಧ್ಯೆ ತಿಂದ ಆಹಾರದಿಂದಾಗಿ ಡಿಕೆಶಿ ಅವರಿಗೆ ಫುಡ್ ಪಾಯ್ಸನ್ ಆಗಿತ್ತು. ನಂತರ ರಾಮನಗರದ ನಿವಾಸದಲ್ಲೇ ಅವರನ್ನು ಪರೀಕ್ಷಿಸಿದ್ದ ವೈದ್ಯರು ಡಿಹೈಡ್ರೇಶನ್ ಕಾರಣ ಸಮಸ್ಯೆಯಾಗಿದೆ ಎಂದು, ಉಪಚಾರ ಮಾಡಿದ್ದರು.
ಇಂದು ಸುಮಾರು 10 ಗಂಟೆಯ ಸಮಯಕ್ಕೆ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಪೋಲೋ ಆಸ್ಪತ್ರೆ ಪತ್ರಿಕಾ ಪ್ರಕಟಣೆ ನೀಡಲಿದ್ದು, ಇಂದು ಸಂಜೆಯ ಹೊತ್ತಿಗೆ ಕನಕಪುರ ಶಾಸಕ ಡಿಕೆಶಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.