ಜಯನಗರ
ಇಂದು ಮದ್ಯಾಹ್ನ ಸುಮಾರು 1-00 ಗಂಟೆಗೆ ತುಮಕೂರು ಟೌನ್, ಸಿ.ಬಿ ಬಡಾವಣೆ, 3 ನೇ ಕ್ರಾಸ್ ವಾಸಿ ಸತೀಶ ಕೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿದ ದೂರಿನ ಅಂಶವೇನೆಂದರೆ, ದಿನಾಂಕ: 30-06-2018 ರಂದು ನನ್ನ KA06Q4887 Yamaha RX 135 ಕಪ್ಪು ಬಣ್ಣದ ದ್ವಿಚಕ್ರ ವಾಹನ ವನ್ನು ಸಿ.ಬಿ ಬಡಾವಣೆ 3 ನೇ ಕ್ರಾಸ್ ನಲ್ಲಿರುವ ಬಾಡಿಗೆ ಮನೆಯ ಮುಂದೆ ರಾತ್ರಿ 10-30 ಗಂಟೆಗೆ ನಿಲ್ಲಿಸಿ ಬೀಗವನ್ನು ಹಾಕಿ ಪ್ರತಿನಿತ್ಯದಂತೆ ಮನೆಯಲ್ಲಿ ಮಲಗಿದ್ದೆನು. ದಿನಾಂಕ: 01-07-2018 ರಂದು ಬೆಳಿಗ್ಗೆ 6-00 ಗಂಟೆಯಲ್ಲಿ ಎದ್ದು ವಾಹನವನ್ನು ನೋಡಲಾಗಿ ನಿಲ್ಲಿಸಿದ್ದ ಜಾಗದಲ್ಲಿ ಇರಲಿಲ್ಲ.
ನಾನು ಅಕ್ಕಪಕ್ಕದವರನ್ನು ವಿಚಾರ ಮಾಡಲಾಗಿ ಯಾವುದೇ ಮಾಹಿತಿ ದೊರೆಯಲಿಲ್ಲ. ವಾಹನದ ಬೆಲೆ ಸುಮಾರು 15,000 ರೂ ಗಳಾಗಿದ್ದು, ನಾನು ಇದುವರೆವಿಗೂ ನನ್ನ ಸ್ನೇಹಿತರು , ಹಾಗೂ ಸಂಬಂಧಿಕರನ್ನು ವಿಚಾರ ಮಾಡಲಾಗಿ ವಾಹನದ ಬಗ್ಗೆ ಯಾವ ಸುಳಿವು ಸಿಗದೇ ಇದ್ದ ಕಾರಣ ತಡವಾಗಿ ಈ ದಿನ ಠಾಣೆಗೆ ಬಂದು ವಾಹನವನ್ನು ಪತ್ತೆ ಮಾಡಿಕೊಡಲು ದೂರು ನೀಡಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ