ಮಧುಗಿರಿ:
ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಆದರೆ ತಾಲೂಕಿನ ಪ್ರಥಮ ಪ್ರಜೆಯಾದ ಕ್ಷೇತ್ರದ ಶಾಸಕರಾದ ಎಂ.ವಿ.ವೀರಭದ್ರಯ್ಯ ರವರೇ ಖುದ್ದು ಈ ವಿವಾಹಕ್ಕೆ ಪ್ರೋತ್ಸಾಹ ನೀಡಿರುವುದು ಖಂಡಾನಾರ್ಹ ಎಂಬ ಸುದ್ದಿ ಪಟ್ಟಣದಲ್ಲಿನ ನಾಗರೀಕರಲ್ಲ್ಲಿ ಬಿಸಿ ಬಿಸಿಯಾಗಿ ಚರ್ಚೆಯಾಗುತ್ತಿದೆ.
ಪಟ್ಟಣದ 23 ವಾರ್ಡಿನ ಎಸ್ ಎಂ ಕೃಷ್ಣ ಬಡಾವಣೆಯಲ್ಲಿ ಸ್ನೇಹ ಜೀವಿ ಗೆಳೆಯರ ಬಳಗದ ವತಿಯಿಂದ ಗಣೆಶೋತ್ಸವದ ಅಂಗವಾಗಿ ಇಟ್ಟಿದ್ದ ವಿನಾಯಕನ ಪೆಂಡಾಲ್ ನಲ್ಲಿಯೇ ಅಪ್ರಾಪ್ತ ಬಾಲಕಿ ಹಾಗೂ ಯುವಕ ಮದುವೆಯಾಗಿರುವುದು ಅಂದಿಗೆ ಸಂತೋಷದ ವಿಚಾರವೇ ಆದರೂ ಬಾಲಕಿಗೆ ಮದುವೆಯ ವಯಸ್ಸು ತುಂಬಿಲ್ಲವೆಂಬದು ಇವರ ಕಲ್ಯಾಣಕ್ಕೆ ಸಾಕ್ಷಿಯಾಗಿದ್ದ ಪ್ರಮುಖರ ಅರಿವಿಗೆ ಬಂದಿಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಪರಿಶಿಷ್ಟ ಜಾತಿಯ ಸಮೂದಾಯಕ್ಕೆ ಸೇರಿದ ಇವರು ಕುಟುಂಬದ ಹಿರಿಯರ ಆದೇಶದಂತೆ ಮದುವೆಗೆ ಒಬ್ಬರಿಗೊಬ್ಬರು ಒಪ್ಪಿಕೊಂಡಿದ್ದರು.
ವರನಾದ ಬಾಲಾಜಿ ಕಬ್ಬಿನ ಹಾಲಿನ ಜ್ಯೂಸ್ ಅಂಗಡಿ ನಡೆಸುತ್ತಿದ್ದು ವಿವಾಹಿತ ಬಾಲಕಿಯ ನಡುವೆ ಕುಟುಂಬಸ್ಥರ ಸಮ್ಮುಖದಲ್ಲಿ ಆರು ತಿಂಗಳ ಹಿಂದೆಯೇ ನಿಶ್ಚಿತಾರ್ಥ ನಡೆದಿತ್ತು ಆದರೆ ವಿವಾಹಿತೆಯ ತಂದೆ ಇನ್ನೂ ಕೆಲವು ವರ್ಷಗಳ ಕಾಲ ಮದುವೆ ಮಾಡಿಕೊಡಲು ನಿರಾಕರಿಸಿದ ವಿರೋಧ ವ್ಯಕ್ತ ಪಡಿಸಿದ್ದರೂ ಕೂಡ ನವ ದಂಪತಿಗಳು ಯಾರ ವಿರೋಧವಿಲ್ಲೆಂದು ಜತೆಯಲ್ಲಿ ಸುಖಾ ಸುಮ್ಮನೆ ವಿವಾಹವನ್ನು ಅನ್ಯ ಕಾರಣದಿಂದ ಮೂಂದೂಡಲಾಗುತ್ತಿತ್ತು ವಾರ್ಡಿನ ಕೆಲ ಜನರು ಇಲ್ಲ ಸಲ್ಲದ ಮಾತುಗಳನ್ನಾಡುತ್ತಿದ್ದರೂ ಮತ್ತೆ ಬರುವ ದಿನಗಳು ಮದುವೆಗೆ ಸರಿಯಿಲ್ಲ ಇದೂ ವರೆವಿಗೂ ನಮ್ಮ ವಾರ್ಡಿನ ಗಣೇಶನ ಮುಂದೆ ಯಾರು ವಿವಾಹವಾಗಿಲ್ಲ ಎಂದೂ ದೊಡ್ಡವರೆಲ್ಲಾ ಸೂಚಿಸಿದ್ದರ ಹಿನ್ನೆಲೆಯಲ್ಲಿ ನಾವು ಪೆಂಡಾಲ್ ನಲ್ಲಿಯೇ ವಿವಾಹವಾಗಿರುವುದಾಗಿ ತಿಳಿಸಿದ್ದಾನೆ.
ನವ ವಿವಾಹಿತೆ ಮಾತನಾಡಿ ಈ ಮದುವೆಯು ನನಗೆ ಇಷ್ಟವಿದೆ ಆದರೆ ಈಗ ನಡೆದಿರುವ ಮದುವೆಯಿಂದಾಗಿ ನಮ್ಮ ತಂದೆ ತಾಯಿ ಜಗಳವಾಡಿಕೊಳ್ಳುತ್ತಿದ್ದಾರೆ ಕುಟುಂಬದ ವಿರೋಧವೇನು ಇರಲಿಲ್ಲ ಎಂದು ತಿಳಿಸಿದ್ದಾಳೆ.
ಗಣೇಶನ ಪ್ರತಿಷ್ಟಾಪಿಸಿದ 4ನೇ ದಿನದ ಭಾನುವಾರ ಸಂಜೆ ಸಮಯದಲ್ಲಿ ಕ್ಷೇತ್ರದ ಶಾಸಕರು ಮತ್ತು ಅದೇ ವಾರ್ಡಿನ ನೂತನ ಸದಸ್ಯ ಜಿ.ಎ.ಮಂಜುನಾಥ, ಸ್ನೇಹ ಜೀವಿ ಗೆಳೆಯರ ಬಳಗದ ತಿಪ್ಪಣ್ಣ, ಮೂರ್ತಿ, ಮೂಡ್ಲಿಗೀರೀಶ್, ನಾಗಭೂಷಣ್ ಹಾಗೂ ಪದಾಧಿಕಾರಿಗಳು ಮತ್ತು ಕೆಲ ವಾರ್ಡಿನ ನಾಗರೀಕರು ಈ ಮದುವೆಯಲ್ಲಿ ಭಾಗವಹಿಸಿ ಬಾಲ್ಯ ವಿವಾಹಕ್ಕೆ..? ಖುದ್ದು ಸಾಕ್ಷಿ ಯಾಗಿದ್ದಾರೆ. ಇ ರೀತಿ ವಿವಾಹಗಳನ್ನು ತಡೆಗಟ್ಟುವ ಅಧಿಕಾರಿಗಳು ಯಾರ ಮೇಲೆ ಯಾವ ಕ್ರಮ ಕೈಗೊಳ್ಳೊವರೋ ಎಂಬುದು ಕುತೂಹಲದ ಪ್ರಶ್ನೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ