ಹುಳಿಯಾರು:
ಪಟ್ಟಣದ ರಾಮಗೋಪಾಲ್ ಸರ್ಕಲ್ ನಲ್ಲಿರುವ ಎಸ್ ಬಿ ಐ ಬ್ಯಾಂಕ್ ನ ಎಟಿಎಂನಲ್ಲಿ ಗ್ರಾಹಕರೊಬ್ಬರು ಹಣ ಡ್ರಾ ಮಾಡಿದಾಗ ಹರಿದ ಹಾಗೂ ಮಸಿ ಹತ್ತಿದ 500 ರೂ. ಮುಖಬೆಲೆ ನೋಟುಗಳು ಬಂದಿದ್ದರಿಂದ ಗ್ರಾಹಕರು ದಿಗ್ಬಮೆಗೊಂಡಿದ್ದಾರೆ.ಶುಕ್ರವಾರ ಬೆಳಗ್ಗೆ ಗ್ರಾಹಕ ಡ್ರೈವರ್ ಸಂತೋಷ್ ಅವರು ಎಸ್ ಬಿ ಐ ಬ್ಯಾಂಕ್ ಎಟಿಎಂನಲ್ಲಿ 30 ಸಾವಿರ ರೂ. ಹಣ ಡ್ರಾ ಮಾಡಿದಾಗ ಅದರಲ್ಲಿ 500 ರೂ. ಮುಖಬೆಲೆಯ 10 ಸಾವಿರ ರೂ. ಹರಿದ ನೋಟುಗಳು ಬಂದಿದ್ದರೆ, ಇನ್ನೂ ಕೆಲ ನೋಟಿಗೆ ಸ್ಟಿಕ್ಕರ್ ಹಚ್ಚಲಾಗಿದೆ.ನೋಟುಗಳ ಮೇಲೆ ಮಸಿ ಮತ್ತು ಇತರೆ ದ್ರವಗಳು ಬಿದ್ದು ಗಲಿಜಾಗಿವೆ. ಇದನ್ನು ಕಂಡ ಗ್ರಾಹಕರು ವಿಚಲಿತರಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗ್ರಾಹಕರು ತುರ್ತು ಬೇಕಿದ್ದ ಕಾರಣ ಬಿಡಿಸಿಕೊಂಡಿದ್ದು ಹರಿದ ನೋಟ್ ಬಂದಿರುವುದರಿಂದ ಇದನ್ನು ಬ್ಯಾಂಕ್ ಸಿಬ್ಬಂದಿಗೆ ವಾಪಸ್ ಮಾಡುವ ಎಂದರು ಬ್ಯಾಂಕಿಗೆ ರಜಾ ದಿನವಾದ್ದರಿಂದ ಸಾಧ್ಯವಾಗುತ್ತಿಲ್ಲ.ನಮ್ಮ ಅವಶ್ಯಕತೆಗೆ ಖಾತೆಯಲ್ಲಿ ಉಳಿದಿರುವ ಹಣ ಬಿಡಿಸಿಕೊಂಡರೂ ಕಷ್ಟಕ್ಕಾಗುವಷ್ಟಿಲ್ಲ.ಅಂಗಡಿಯವರು ಹರಿದ,ಬಣ್ಣವಾದ ನೋಟನ್ನು ಪಡೆಯುವುದಿಲ್ಲ.ಇಂದು, ನಾಳೆ, ನಾಡಿದ್ದು ರಜೆ ಇದೆ. ನೋಟ್ ಬದಲಾಯಿಸುವವರು ಯಾರೂ.ಹೀಗಾದರೆ ಹೇಗೆ,ನಾವ್ಯಾರನ್ನು ಪ್ರಶ್ನಿಸುವದು ಎಂದರು.
ಎಟಿಎಂ ಕೌಂಟರಿನಲ್ಲಿದ್ದ ಮತ್ತೊಬ್ಬ ಗ್ರಾಹಕರಾದ ಏಜಾಸ್ ಮಾತನಾಡಿ ಹೊರಗಡೆಯಿಂದ ಬಂದವರಿಗೆ ಹೀಗೇನಾದರೂ ಆದರೆ ಅವರೇನು ಮಾಡಬೇಕು ಎಂದು ಪ್ರಶ್ನಿಸಿದರು. ಎಟಿಎಂ ಪ್ರಕರಣ ಪದೇಪದೇ ಮರುಕಳಿಸಿದರೂ ಕಟ್ಟುನಿಟ್ಟಿನ ಕ್ರಮ ಆರ್ ಬಿ ಐ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇನ್ನಾದರೂ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








