ಹಾವೇರಿ :
ಭಾರತೀಯ ಜನತಾ ಪಾರ್ಟಿ ವತಿಯಿಂದ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಜಿಲ್ಲಾ ಕಾರ್ಯಾಲಯದಿಂದ ಮೇರವಣಿಗೆ ಮೂಲಕ ಹೊಸಮನಿ ಸಿದ್ದಪ್ಪ ಸರ್ಕಲ್ವರಿಗೆ ತೆರಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸಿದ್ದರಾಜ ಕಲಕೋಟಿ ಮಾತನಾಡಿ ಮುಖ್ಯಮಂತ್ರಿಯವರು ತಮ್ಮ ಘನತೆ ಗೌರವ ಹಾಗೂ ಮುಖ್ಯಮಂತ್ರಿ ಹುದ್ದೆಯ ಮೌಲ್ಯವನ್ನು ಮರೆತು ರಾಜ್ಯದ ಜನತೆಗೆ ಬಿಜೆಪಿ ವಿರುದ್ದ ದಂಗ ಏಳಲು ಪ್ರೇರಿಪಿಸಿರುವದು ಅತ್ಯಂತ ವಿಷಾದಕರ ಸಂಗತಿ. ರಾಜ್ಯದ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುವಲ್ಲಿ ವಿಫಲವಾಗಿದೆ, ರಾಜ್ಯದ ಹಿತದೃಷ್ಟಿಯಿಂದ ಈ ಸರ್ಕಾರ ಅತ್ಯಂತ ಅಪಾಯಕಾರಿ ತಕ್ಷಣವೇ ಮುಖ್ಯಮಂತ್ರಿಗಳು ತಮ್ಮ ಹೇಳಿಕೆಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದರು.
ಶಾಸಕರಾದ ನೆಹರು ಓಲೇಕಾರ ಮಾತನಾಡಿ ಮುಖ್ಯಮಂತ್ರಿಗಳಿಗೆ ರಾಜ್ಯದ ಆಡಳಿತ ನಡೆಸುವ ಸಾಮರ್ಥವಿಲ್ಲ. ಸುರಕ್ಷಿತ ಆಡಳಿತ ಒದಗಿಸುವಲ್ಲಿ ಮುಖ್ಯಮಂತ್ರಗಳು ವಿಫಲರಾಗಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯದ ಜನರಿಗೆ ದಂಗೆ ಏಳಲು ನೀಡಿರುವ ಹೇಳಿಕೆ ಅತ್ಯಂತ ವಿಷಾದನೀಯ. ಮುಖ್ಯಮಂತ್ರಿಗಳಿಗೆ ನೈತಕತೆ ಏನಾದರು ಇದ್ದಲ್ಲಿ ತಕ್ಷಣವೇ ನೈತಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಇಲ್ಲದಿದ್ದಲ್ಲಿ ಮುಂಬರುವ ಚುಣಾವಣೆಯಲ್ಲಿ ಕಾಂಗ್ರೇಸ ಮತ್ತು ಜೆಡಿಎಸ್ ಪಕ್ಷಗಳು ದೋಳಿಪಟವಾಗುವದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಶಿವಾನಂದ ಮ್ಯಾಗೇರಿ, ಮುಖಂಡರಾದ ಪ್ರಭು ಹಿಟ್ನಳ್ಳಿ, ಸುರೇಶ ಹೊಸಮನಿ, ಡಾ. ಸಂತೋಷ ಆಲಕಟ್ಟಿ, ನಂಜುಡೇಶ ಕಳ್ಳೇರ, ಮುರುಗೆಪ್ಪ ಶೆಟ್ಟರ, ಬಸವರಾಜ ಛತ್ರದ, ನಿಂಗಪ್ಪ ಗೊಬ್ಬೇರ, ಗಾಳೆಪ್ಪ ದೊಡ್ಡಪೂಜಾರ, ಶಿವಕುಮಾರ ಸಂಗೂರ, ವಿರೇಂದ್ರ ಶೆಟ್ಟರ, ವರುಣ ಆನವಟ್ಟಿ, ನಾಗರಾಜ ಹುಳ್ಳಿಕುಪ್ಪಿ, ಜಗದೀಶ ಮಲಗೋಡ, ಕೋಟಪ್ಪ ಕಂಬಳಿ, ಅಶೋಕ ಬಣಕಾರ, ಹೊನ್ನಪ್ಪ ಮಾಳಗಿ, ಮರಿಯಪ್ಪ ಹರಿಜನ, ಫಕ್ಕಿರೇಶ ಹರಿಜನ, ಅಡವಯ್ಯ ಯಲುಗಿಮಠ, ಶಂಕ್ರಪ್ಪ ಹಟ್ಟಿ, ಶಿವಯೋಗಿ ಹುಲಿಕಂತಿಮಠ, ಚನ್ನಮ್ಮ ಬ್ಯಾಡಗಿ, ಬಸವರಾಜ ಬ್ಯಾಡಗಿ, ನಾಗರಾಜ ಹಿರೇಮಠ, ಚಂದ್ರಹಾಸ ಕ್ಯಾತಣ್ಣನವರ, ನಾಗರಾಜ ಬಸಗಣ್ಣಿ, ವಿವೇಕಾನಂದ ಇಂಗಳಗಿ, ಚಿಕ್ಕಪ್ಪ ದೊಡ್ಡತಳವಾರ. ಅಣ್ಣಪ್ಪ ಗದಗ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








