ಬೆಂಗಳೂರು
ಜೀವನದಲ್ಲಿ ಜುಗುಪ್ಸೆ ಹೊಂದಿದ್ದ ಇಂಜಿನಿಯರೊಬ್ಬರು ನೇಣಿಗೆ ಶರಣಾಗಿರುವ ದಾರುಣ ಘಟನೆ ಜೆಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜೆಪಿ ನಗರದ 6ನೇ ಹಂತದ ರಾಯಲ್ಸ್ ಸ್ಕೂಲ್ ಬಳಿಯ ವಿಲ್ಲಾ ರೆಸಿಡೆನ್ಸಿ ಅಪಾರ್ಟ್‍ಮೆಂಟ್‍ನಲ್ಲಿ ವಾಸಿಸುತ್ತಿದ್ದ ಶಿರಿಷಾ (21)ಎಂದು ಆತ್ಮಹತ್ಯೆ ಮಾಡಿಕೊಂಡವರನ್ನು ಗುರುತಿಸಲಾಗಿದೆ.
ಇಂಜಿನಿಯರಿಂಗ್ ಮುಗಿಸಿ ಎಲ್ಲಿಯೂ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದ ಶಿರಿಷಾ,ಶನಿವಾರ ಸಂಜೆ ಪೋಷಕರು ಹೊರಗಡೆ ಹೋಗಿದ್ದಾಗ ನೇಣಿಗೆ ಶರಣಾಗಿದ್ದಾರೆ. ಪುಟ್ಟೇನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ರೇಸ್ ಬೆಟ್ಟಿಂಗ್ ಮೇಲೆ ದಾಳಿ
ರೇಸ್ ಬೆಟ್ಟಿಂಗ್ ಜೂಜಾಟದ ಅಡ್ಡೆಯ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಆರ್‍ಟಿ ನಗರದ ಗಂಗಾಧರ್ (43), ಮಂಜುನಾಥ್ (32), ಗೋಪಾಲ್ ರೆಡ್ಡಿ (42), ಶಿವಣ್ಣ (51) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 1,07,900 ರೂ.ನಗದು 4 ಮೊಬೈಲ್‍ಗಳು, ರೇಸ್‍ಬುಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರ್‍ಟಿ ನಗರದ ಬಳ್ಳಾರಿ ರಸ್ತೆಯ ಎಟುಬಿ ರೆಸ್ಟೋರೆಂಟ್ ಬಳಿಯ ಮನೆಯೊಂದರಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಕುದುರೆ ರೇಸ್ ಬೆಟ್ಟಿಂಗ್ ಜೂಜಾಟವಾಡುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








