ಮನಸ್ಸುಗಳು ಸ್ವಚ್ಚವಾದರೆ ದೇಶವೂ ಸ್ವಚ್ಚ;ಶಿವರಶ್ಮಿ

ಚಿತ್ರದುರ್ಗ:

      ದೇಶ ಸ್ವಚ್ಚವಾಗಿರಬೇಕಾದರೆ ಮೊದಲು ಎಲ್ಲರ ಮನಸ್ಸುಗಳು ಸ್ವಚ್ಚವಾಗಿರಬೇಕೆಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಶಿವರಶ್ಮಿ ಅಕ್ಕನವರು ತಿಳಿಸಿದರು.

        ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಮಾರುತಿ ಯುವಕರ ಸಂಘ, ಟಾರ್ಗೆಟ್ ಟೆನ್ ಥೌಸೆಂಡ್, ಪ್ರಜ್ಞಾ ಶಿಕ್ಷಣ ಗ್ರಾಮೀಣಾಭಿವೃದ್ದಿ ಸಂಸ್ಥೆ, ಏಕನಾಥೇಶ್ವರಿ ಗ್ರೂಪ್ ಇವರುಗಳ ಸಂಯುಕ್ತಾಶ್ರಯಲ್ಲಿ ಬುರುಜನಹಟ್ಟಿಯ ಏಳನೆ ವಾರ್ಡ್‍ನಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸ್ವಚ್ಚತಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

        ಅ.2 ಗಾಂಧಿಜಯಂತಿಯೊಳಗೆ ದೇಶದ ಐವತ್ತು ಸಾವಿರ ಸ್ಥಳಗಳಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಸ್ವಚ್ಚತಾ ಕಾರ್ಯಕ್ರಮವನ್ನು ಕೈಗೊಳ್ಳಲಾಗುವುದು. ಎಲ್ಲಿಯಾದರೂ ಆಗಲಿ ಸ್ವಚ್ಚತೆ ಮಾಡಿದ ಮರುದಿನವೇ ಮತ್ತೆ ಆ ಸ್ಥಳ ಗಲೀಜಾಗಿರುತ್ತದೆ. ಅದಕ್ಕಾಗಿ ಪ್ರತಿಯೊಬ್ಬರು ತಮ್ಮ ತಮ್ಮ ಮನೆ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಂಡು ಬೇರೆಯವರಿಗೆ ಸ್ವಚ್ಚತೆ ಕುರಿತು ಜಾಗೃತಿ ಮೂಡಿಸಿ ಎಂದು ಹೇಳಿದರು.

       ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕೆಂಬ ಪರಿಕಲ್ಪನೆ ಎಲ್ಲರಲ್ಲಿಯೂ ಇರಬೇಕು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸ್ವಚ್ಚತೆಗೆ ಆದ್ಯತೆ ನೀಡಿರುವುದನ್ನು ನೋಡಿ ದೇಶದ ಪ್ರಧಾನಿ ಮೋದಿರವರು ಬ್ರಾಂಡ್ ಅಂಬಾಸಿಡರ್ ಗ್ರೂಪ್ ಎಂದು ಹೇಳಿ ಮೆಚ್ಚುಗೆ ಸೂಚಿಸಿದ್ದಾರೆ. ಬಾಹ್ಯ ಜಗತ್ತು ಸ್ವಚ್ಚವಾಗುವುದು ಎಷ್ಟು ಮುಖ್ಯವೋ ಅದೇ ರೀತಿ ಎಲ್ಲರ ಮನಸ್ಸು ಸ್ವಚ್ಚವಾಗಿರಬೇಕು. ಆಗ ಮಾತ್ರ ಪರಮಾತ್ಮನನ್ನು ಧ್ಯಾನ ಮಾಡಬಹುದು ಎಂದರು.

       ಏಳನೆ ವಾರ್ಡ್‍ನ ನಗರಸಭೆ ಸದಸ್ಯೆ ಪಿ.ಕೆ.ಮೀನಾಕ್ಷಿ ಮಾತನಾಡಿ ರಾಷ್ಟ್ರಪಿತ ಮಹಾತ್ಮಗಾಂಧಿರವರ 150 ನೇ ಜನ್ಮದಿನದ ಅಂಗವಾಗಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜೊತೆ ಸೇರಿಕೊಂಡು ಬುರುಜನಹಟ್ಟಿಯಲ್ಲಿ ಸ್ವಚ್ಚತಾ ಕಾರ್ಯಕ್ರಮನ್ನು ಕೈಗೊಳ್ಳಲಾಗಿದೆ.

      ಕಾಮ, ಕ್ರೋದ, ಮಧ, ಮೋಹ, ಮತ್ಸರ ಎಲ್ಲವನ್ನು ಮೆಟ್ಟಿ ನಿಂತಾಗ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಒತ್ತಡಗಳ ಬದುಕಿಗೆ ಆಧ್ಯಾತ್ಮವೂ ಬೇಕು ಎಂದು ಹೇಳಿದರು.ಫೈಲ್ವಾನ್ ತಿಪ್ಪೇಸ್ವಾಮಿ, ಎಂ.ವಿ.ಮಾಳೇಶ್, ಟಾರ್ಗೆಟ್ ಟೆನ್‍ಥೌಸೆಂಡ್‍ನ ಸಿದ್ದರಾಜ ಜೋಗಿ ವೇದಿಕೆಯಲ್ಲಿದ್ದರು.

                   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link