ಬೆಂಗಳೂರು
ಪ್ರೀತಿಸಿ ಮದುವೆಯಾಗಿ ಒಂದು ವರ್ಷ ಸಂಸಾರ ನಡೆಸಿ ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಕೈಕೊಟ್ಟು ಪತಿ ಪರಾರಿಯಾಗಿದ್ದರಿಂದ ಕಂಗಾಲಾದ ಗರ್ಭಿಣಿ ಪತಿ ಮನೆ ಮುಂದೆ ಪ್ರತಿಭಟಿಸುತ್ತಿದ್ದಾಳೆ.
ಚನ್ನಪಟ್ಟಣದ ಹೊಂಗನೂರಿನ ಯುವಕ ಪ್ರಸನ್ನ (23) ಕನಕಪುರದ ಸಾಸಲಪುರದ ಯುವತಿಯನ್ನು ಪ್ರೀತಿಸಿ ಮದುವೆಯಾಗಿ ಇದೀಗ ಕೈಕೊಟ್ಟು ಹೋಗಿದ್ದಾನೆ,
ಕುಂಬಳಗೂಡು ಬಳಿಯ ಪೆಪ್ಸಿ ಕಾರ್ಖಾನೆಗೆ ಕೆಲಸಕ್ಕೆಂದು ಹೋಗುತ್ತಿದ್ದಾಗ ಪರಸ್ಪರ ಇಷ್ಟಪಟ್ಟು ಕಳೆದ ವರ್ಷ ಚನ್ನಪಟ್ಟಣದ ಪ್ರಸಿದ್ಧ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದೆವು. ಮದುವೆಯಲ್ಲಿ ಹುಡುಗಿಯ ತಾಯಿ ಹಾಗೂ ಪ್ರಸನ್ನನ ಸ್ನೇಹಿತರನ್ನ ಬಿಟ್ರೆ ಆತನ ಸಂಬಂಧಿಕರಿಗೆ ವಿಷಯವೇ ತಿಳಿಸಿರಲಿಲ್ಲ ಎಂದು ಗರ್ಭಿಣಿ ಮಹಿಳೆ ಹೇಳಿದ್ದಾರೆ.
ಮದುವೆ ಬಳಿಕ ಕುಂಬಳಗೂಡಿನಲ್ಲಿಯೇ ಬಾಡಿಗೆ ಮನೆ ಮಾಡಿ ಒಂದು ವರ್ಷ ಸಂಸಾರ ಮಾಡಿದ್ದ. ಆದರೆ ನಾನು ಗರ್ಭಿಣಿಯಾಗುತ್ತಿದ್ದಂತೆ ಪ್ರಸನ್ನ ತನ್ನ ತಾಯಿಯನ್ನ ನೋಡಿಕೊಂಡು ಬರುತ್ತೇನೆಂದು ಹೇಳಿ ಹೋದವ ಇಲ್ಲಿಯವರೆಗೂ ಪತ್ತೆಯಿಲ್ಲ. ಇನ್ನು ಹೊಂಗನೂರಿನಲ್ಲಿರುವ ಅವರ ಮನೆಗೆ ಕೂಡ ಬೀಗಹಾಕಿದ್ದು, ಪತಿಯ ತಾಯಿಯೂ ನಾಪತ್ತೆ ಆಗಿದ್ದಾರೆ ಎಂದು ಮಹಿಳೆ ದೂರಿದ್ದಾರೆ.
ನನಗೆ ನನ್ನ ಗಂಡ ಬೇಕೆಂದು ಮಹಿಳೆ ಆತನ ಮನೆ ಮುಂದೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾಳೆ. ಮನೆಯಿಂದ ಹೊರಡುವ ವೇಳೆ ಪತ್ನಿಯ ಎಟಿಎಂ ಕಾರ್ಡ್ ತೆಗೆದುಕೊಂಡು ಹೋಗಿರುವ ಪ್ರಸನ್ನ ತಮಿಳುನಾಡಿನ ಸೇಲಂನಲ್ಲಿ 7 ಸಾವಿರ ರೂ. ಹಣ ಡ್ರಾ ಮಾಡಿ ಮೊಬೈಲ್ ಸ್ವಿಚ್‍ಆಫ್ ಮಾಡಿದ್ದಾನೆ. ಇನ್ನು ಈ ಪ್ರಕರಣ ಸಂಬಂಧ ಕುಂಬಳಗೂಡು ಹಾಗೂ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
