ಕೋಟೆನಾಡಿನ ಜನರ ಪ್ರೀತಿ ಮರೆಯಲಾಗದು’

ಚಿತ್ರದುರ್ಗ:

     ಜಿಲ್ಲೆಯ ಜನರ ಪ್ರೀತಿ, ಅಭಿಮಾನವನ್ನು ಹೊತ್ತು ದುಗಡವಾದ ಮನಸ್ಸಿನಿಂದ ಬೇರೆ ಊರಿಗೆ ಹೋಗುತ್ತಿದ್ದೇನೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಶ್ರೀನಾಥ್ ಎಂ.ಜೋಷಿ ಬೇಸರದಿಂದ ನುಡಿದರು.

     ಜಿಲ್ಲಾ ರಕ್ಷಣಾಧಿಕಾರಿಗಳಾಗಿ ಒಂದು ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಎಸ್.ಎಂ.ಜೋಷಿರವರು ಕೋಟೆ ವಾಯುವಿಹಾರಿಗಳ ಸಂಘದಿಂದ ಕೋಟೆ ಆವರಣದಲ್ಲಿರುವ ಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದರು.

     ದೂರದ ಬೆಳಗಾಂನಿಂದ ಇಲ್ಲಿಗೆ ವರ್ಗವಾಗಿ ಬಂದಾಗ ನನಗೆ ಬೇರೆ ಊರಿಗೆ ಬಂದಿದ್ದೇನೆ ಎಂದೆನಿಸಲಿಲ್ಲ. ಏಕೆಂದರೆ ಇಲ್ಲಿಯ ಜನರು ತೋರಿದ ಅಭಿಮಾನ ಕರ್ತವ್ಯದ ಅವಧಿಯಲ್ಲಿ ನನಗೆ ನೀಡಿದ ಸಹಕಾರವನ್ನು ಎಂದಿಗೂ ಮರೆಯುವುದಿಲ್ಲ. ಅಂದಾಜು ಎಪ್ಪತ್ತರಿಂದ ಎಪ್ಪತ್ತೈದು ಬಾರಿ ಚಿತ್ರದುರ್ಗದ ಕೋಟೆಯನ್ನು ನೋಡಿದ್ದೇನೆ. ಆದರೂ ಇನ್ನು ಪೂರ್ಣವಾಗಿ ನೋಡಲು ಆಗಲಿಲ್ಲ.

      ಇಲ್ಲಿನ ಒಂದೊಂದು ಕಲ್ಲು ಬಂಡೆಗಳು ತನ್ನದೆ ಆದ ಕಥೆ ಹೇಳುತ್ತವೆ. ಸುಂದರವಾದ ವಾತಾವರಣ ಕೋಟೆಯಲ್ಲಿದೆ. ಇಲ್ಲಿನ ಜನರು ಪ್ರಾಣಿ ಪಕ್ಷಿಗಳಿಗೆ ನೀರು ಆಹಾರಗಳನ್ನು ನೀಡಿ ಸಲಹುತ್ತಿರುವುದನ್ನು ನೋಡಿದರೆ ಜಿಲ್ಲೆಯ ಜನರು ಸಹೃದಯಿಗಳು ಎನ್ನುವುದು ಗೊತ್ತಾಗುತ್ತದೆ.

      ಅಧಿಕಾರಿಯಾಗಿ ಕಚೇರಿಯಲ್ಲಿ ಕುಳಿತರೆ ಜನರಿಂದ ದೂರವಾಗುತ್ತೇನೆ ಎನ್ನುವುದು ನನ್ನ ಮನಸ್ಸಿಗೆ ನಾಟಿತು. ಎಸ್ಪಿ ಆದವರು ಜನರಿಂದ ಏಕೆ ದೂರ ಉಳಿಯಬೇಕು. ಬದಲಾಗಿ ನೊಂದವರ ಕಷ್ಟವನ್ನು ಆಲಿಸಿ ಪರಿಹಾರ ನೀಡುವಲ್ಲಿ ಸಾಕಷ್ಟು ಶ್ರಮಿಸಿದ್ದೇನೆ.

       ಮಹಿಳೆಯರಿಗೆ ಅವರದೆ ಆದ ತಾಪತ್ರಯಗಳು ಇರುತ್ತವೆ. ಅದಕ್ಕಾಗಿ ಮಹಿಳೆಯರ ರಕ್ಷಣೆಗಾಗಿಯೇ ಜಿಲ್ಲೆಯಲ್ಲಿ ಓಬವ್ವ ಪಡೆಯನ್ನು ರಚಿಸಿದ್ದೇನೆ. ಅದು ರಾಜ್ಯಾದ್ಯಂತೆ ಮೆಚ್ಚುಗೆ ಗಳಿಸಿದೆ ಎಂದು ಹೇಳಿದರು.

       ಸರ್ಕಾರಿ ನೌಕರಿ ಎಂದ ಮೇಲೆ ವರ್ಗಾವಣೆ ಅನಿವಾರ್ಯ. ನಾನು ಎಲ್ಲಿಯೇ ಇರಲಿ ನಿಮ್ಮ ಕಷ್ಟ-ಸುಖದಲ್ಲಿ ಸದಾ ಭಾಗಿಯಾಗುತ್ತೇನೆ ಎಂದು ಭರವಸೆ ನೀಡಿದರು.

        ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ಮಾತನಾಡಿ ಜಿಲ್ಲಾ ರಕ್ಷಣಾಧಿಕಾರಿ ಎಸ್.ಎಂ.ಜೋಷಿ ಐ.ಪಿ.ಎಸ್ . ಅಧಿಕಾರಿಯೆಂದು ಎಂದಿಗೂ ಅಧಿಕಾರದ ದರ್ಪವನ್ನು ಯಾರ ಮೇಲೂ ತೋರಲಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದುಕೊಂಡು ಕಾನೂನು ಸುವ್ಯವಸ್ಥೆಯನ್ನು ಚಾಚೂ ತಪ್ಪದೆ ಪಾಲಿಸಿ ಜಿಲ್ಲೆಯಲ್ಲಿ ಎಲ್ಲಿಯೂ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡರು ಎಂದು ಗುಣಗಾನ ಮಾಡಿದರು.

          ಒಂದು ವರ್ಷಗಳ ಕಾಲ ಚಿತ್ರದುರ್ಗ ಜಿಲ್ಲಾ ರಕ್ಷಣಾಧಿಕಾರಿಯಾಗಿದ್ದ ಜೋಷಿರವರು ಕಡಿಮೆ ಅವಧಿಯಲ್ಲಿಯೇ ಎಲ್ಲರ ಮನ ಗೆದ್ದಿದ್ದರು ಎಂದರು.

         ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡುತ್ತ ಸರಳ ಸಜ್ಜನಿಕೆಯ ಅಧಿಕಾರಿಯಾಗಿದ್ದ ಎಸ್.ಎಂ.ಜೋಷಿರವರಲ್ಲಿ ಸೂಕ್ಷ್ಮತೆಯಿತ್ತು. ದಿನದ 24 ಗಂಟೆಯೂ ಕರ್ತವ್ಯದ ಒತ್ತಡದ ನಡುವೆ ಎಲ್ಲವನ್ನು ಗಮನಿಸುತ್ತಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲವನ್ನು ಆರಂಭದಲ್ಲಿಯೇ ಚಿವುಟಿ ಹಾಕುವ ಸಾಮಥ್ರ್ಯ ಅವರಲ್ಲಿತ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

         ಕೋಟೆ ವಾಯುವಿಹಾರಿಗಳ ಸಂಘದ ಗೌರವಾಧ್ಯಕ್ಷ ಜಯಣ್ಣ, ಕಾರ್ಯದರ್ಶಿ ಮಂಜುನಾಥ್, ಉಪಾಧ್ಯಕ್ಷರುಗಳಾದ ಚನ್ನಬಸಪ್ಪ, ರಾಮಜ್ಜ, ಪದಾಧಿಕಾರಿಗಳಾದ ಭದ್ರಣ್ಣ, ಶ್ರೀನಿವಾಸ್, ಕೂಬಾನಾಯ್ಕ, ಕೂಡ್ಲಿಗಿ ಪಿ.ಯು.ಕಾಲೇಜು ಪ್ರಾಂಶುಪಾಲರಾದ ನಾಗರಾಜಪ್ಪ, ಚಂದ್ರಣ್ಣ, ನರಸಿಂಹಪ್ಪ, ರತ್ನಮ್ಮ, ವೀಣ, ವನಜಾಕ್ಷಿ, ಲತ, ಮಂಗಳಮ್ಮ, ಚಂದ್ರಮ್ಮ, ಮಹದೇವಮ್ಮ, ಜಯಶ್ರೀ, ಸಾವಿತ್ರಮ್ಮ, ಲತ, ಪ್ರಭಾವತಿ, ಕಮಲ, ನಿರ್ಮಲ, ಗಂಗಮ್ಮ, ಭಾಗ್ಯಮ್ಮ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

                     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link