ದಾವಣಗೆರೆ:
ಲಕ್ಷೀಬಾಯಿ ವಾಸುದೇವಸಾ ಮೆಹರ್ವಾಡೆ ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಜೀವನದುದ್ದಕ್ಕೂ ಅನೇಕ ಸಮಾಜ ಸೇವಾ ಕಾರ್ಯಗಳನ್ನು ಕೈಗೂಂಡು. ತಪೋವನ ಸಂಸ್ಥೆಯನ್ನು ಸ್ಥಾಪಿಸಿ ಅದರ ಮುಖಾಂತರ ನೂರಾರು ಮಹಿಳೆಯರಿಗೆ ದಾರಿದೀಪವಾಗಿ ಕೆಲಸ ಮಾಡಿದ್ದಾರೆ.
ಇವರಿಗೆ ರಾಜ್ಯ ಸರ್ಕಾರವು ಕಿತ್ತೂರು ರಾಣಿಚನ್ನಮ್ಮ ಪ್ರಶಸ್ಥಿಯನ್ನು ಕೊಟ್ಟು ಗೌರವಿಸಿದೆ ಮಧ್ಯಪಾನ ವಿರೋದಿ ಚಳುವಳಿಗಳಲ್ಲಿ ಭಾಗವಹಿಸಿ ವ್ಯಸನ ಮುಕ್ತ ಸಮಾಜವನ್ನು ಸೃಷ್ಠಿಸಲು ಶ್ರಮಿಸಿದ್ದಾರೆ.ಇವರು ಸ್ರೀ ಶಕ್ತಿ ಸಂಘಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.ಜನರಿಗೆ ಮನೆಮದ್ದು,ನಾಟಿ ಔಷದಿಕೊಡುವುದರ ಮೂಲಕ ಅನೇಕರಿಗೆ ಆರೋಗ್ಯ ಸೇವೆ ಸಲ್ಲಿಸಿದ್ದಾರೆ.
ಶ್ರೀಮತಿ ಲಕ್ಷ್ಮೀಬಾಯಿ ಅಮ್ಮನವರ ಅನೇಕ ಸಮಾಜ ಮುಖಿಕಾರ್ಯಗಳನ್ನು ಮನಗಂಡು ಇದರ ಪ್ರೇರಣೆಯಿಂದ ಪುತ್ರರಾದ ಡಾ|| ಶಶಿಕುಮಾರ್.ವಿ.ಮೆಹರ್ವಾಡೆ ಇವರು ತೆಪೋವನ ಸಮೂಹ ಸಮೂಹ ಸಂಸ್ಥೆಗಳನ್ನು ಪ್ರಾರಂಭಿಸಿ ಅನೇಕ ರಾಜ್ಯಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೇವೆ ನೀಡುತ್ತಿದ್ದಾರೆ ಅಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆರೋಗ್ಯ,ಶಿಕ್ಷಣ ಸ್ವಾವಲಂಬನೆ ಹಿರಿಯ ನಾಗರೀಕರಿಗೆ ಸೇವೆ, ಭೂಮಿ ಮಣ್ಣು-ನೀರಿನ ಸಂರಕ್ಷಣೆ ,ಮದ್ಯಪಾನದಿಂದ ಆಗುವ ದುಷ್ಠ್ ಪರಿಣಾಮಗಳು, ಸಾಮಾಜಿಕ ಕಳಕಳಿಯುಳ್ಳ ಕಾರ್ಯಗಾರಗಳಮುಖಾಂತರ ಹಳ್ಳಿ ಪಟ್ಟಣ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಗಳನ್ನು ಲಕ್ಷಾಂತರ ಜನರಿಗೆ ನಿರಂತರವಾಗಿ ಮಾಡುತ್ತಿದ್ದಾರೆ ಇದಕ್ಕೆ ನಮ್ಮ ತಾಯಿಯವರೇ ನಮ್ಮಗೆ ಪ್ರೇರಣೆ ಎನ್ನುತ್ತಾರೆ.
ಶ್ರೀಮತಿ ಲಕ್ಷೀಬಾಯಿವರು ಸೆಷ್ಟಂಬರ್ 5ರಂದು ನಿಧನರಾಗಿದ್ದು ಇನರಸೇವಾಕಾರ್ಯಗಳ ಗುಣಗಾನ ನಿಮಿತ್ತ ದೂಡ್ಡ ಬಾತಿ ತೆಪೋವನದಲ್ಲಿ ದಿನಾಂಕ 25 ರಂದು ಶ್ರದ್ದಾಂಜಲಿ ಕಾರ್ಯಕ್ರಮಕ್ಕೆ ವೀರಶೈವ ಲಿಂಗಾಯತ ಪಂಚಮಸಾಲಿ ಮಹಾಸ್ವಾಮಿಗಳು (ಶ್ವಾಸಗುರು) ಶ್ರೀವಚನಾನಂದ ಸ್ವಾಮಿಜಿಗಳು, ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು,ತೆಗ್ಗಿನಮಠ ಹರಪನಹಳ್ಳಿ ವರಸದ್ಯೋಜಾತ ಶಿವಾಚಾರ್ಯರು. ವಿರಕ್ತಮಠದ ಬಸವಪ್ರಭು ಮಹಾಸ್ವಾಮಿಗಳು,ಕೊಡಿಯಾಲ ಹೊಸಪೇಟೆ ಪುಣ್ಯಕೋಟಿಮಠದ ಶ್ರೀಜಗದೀಶ್ಚರ ದೇವರು,ಮುಖ್ಯ ಅಥಿಗಳಾಗಿ ದಾವಣಗೆರೆ ಜಿಲ್ಲೆ ಸಂಸದರಾದ ಜಿ.ಎಂ.ಸಿದ್ದೇಶ್ವರ,ಹರಿಹರ ವಿಧಾವಸಭಾ ಸದಸ್ಯರಾದ ಎಸ್.ರಾಮಪ್ಪನವರು.
ಜಿಲ್ಲಾಧೀಕಾರಿಗಳಾದ ಡಿ.ಎಸ್.ರಮೇಶ್,ಎಸ್.ಎಸ್.ಕೆಸಮಾಜ ಮತ್ತು ಮಾಜಿವಿಧಾನ ಪರಿಷತ್ ಸದಸ್ಯರಾದ ನಾರಾಯಣಸಾ ಬಾಂಡಗೆ, ಅಶೋಕ್ ಕಾಟ್ವೆ ಮಾಜಿವಿಧಾನಪರಿಷತ್ ಸದಸ್ಯರು,ಡಾ|| ಮನೋಜ್ ಸಾವಕಾರ ಓಂ ಆಸ್ವತ್ರೆ ರಾಣೀಬೆನ್ನೂರು, ಎಸ್.ಎಸ್.ಕೆ ಸಮಾಜ ಅಧ್ಯಕ್ಷರುಹರಿಹರ ಸವಂತಭೂತೆ,ಎಸ್.ಎಸ್.ಕೆ ಸಮಾಜ ಅಧ್ಯಕ್ಷರು ರಂಗನಾಥ್ ಲದ್ವ ರವರುಗಳು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಮೆಹರ್ವಾಡೆ ಕುಟುಂಬಸ್ಥರು ಪಾಲ್ಗೊಳಲಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
