ಬೆಂಗಳೂರು:
ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಲನಚಿತ್ರನಟ ದುನಿಯಾ ವಿಜಿ ಅವರ ಜಾಮೀನು ಅರ್ಜಿ ವಿಚಾರಣೆಯು ಇಂದು 3 ಗಂಟೆಗೆ ನಡಯಲಿದೆ. ಈ ಜಾಮೀನು ಅರ್ಜಿಗೆ ಸರ್ಕಾರಿ ಹಿರಿಯ ಅಭಿಯೋಜಕ ಆಕ್ಷೇಪ ವ್ಯಕ್ತ ಪಡಿಸುವ ಸಾಧ್ಯತೆ ಇದೆ.
ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿಲ್ಲ:
ಚಿತ್ರ ನಟ ದುನಿಯಾ ವಿಜಿ ಅವರಿಂದ ಹಲ್ಲೆಗೊಳಗಾದ ಜಿಮ್ ಮಾಸ್ಟರ್ ಮಾರುತಿಗೌಡ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿಲ್ಲ. ಎಡಗಡೆ ಕಣ್ಣು ಸರಿಯಾಗಿ ಕಾಣುತ್ತಿಲ್ಲ ಎಂದು ಹೇಳುತ್ತಿದ್ದಾನೆ. ರಾತ್ರಿಯೆಲ್ಲಾ ಕತ್ತು ತುಂಬಾ ನೋವು ಎನ್ನುತ್ತಿದ್ದ. ಏನು ತಿಂದರು ವಾಂತಿ ಮಾಡಿಕೊಳ್ಳುತ್ತಿದ್ದಾನೆ. ಬಾಯಿಗೆ 14 ಹೊಲಿಗೆ ಹಾಕಿದ್ರೂ ಊತ ಕಡಿಮೆಯಾಗಿಲ್ಲ. ಮಾರುತಿ ಬಾಯಿ ಹಾಗೂ ತುಟಿ ಮತ್ತಷ್ಟು ಊದಿಕೊಂಡಂತಿದೆ ಎಂದು ಪಾನಿಪುರಿ ಕಿಟ್ಟಿ ಅವರು ಮಾಹಿತಿ ನೀಡಿದ್ದಾರೆ.
ಎಸ್.ಎಸ್.ಪಿ. ವಕೀಲ ಶ್ಯಾಮಸುಂದರ್ ನೇಮಕಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬಳಿ ಮನವಿ ಮಾಡಿರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ