ಹೋರಾಟಗಾರರನ್ನು ವಿಧಾನ ಪರಿಷತ್ತಿಗೆ ನಾಮ ನಿರ್ದೇಶನಕ್ಕೆ ಆಗ್ರಹ

ಬೆಂಗಳೂರು

       ವಿಧಾನ ಪರಿಷತ್ತಿಗೆ ಕನ್ನಡ ಚಳವಳಿಗಾರರನ್ನೇ ನಾಮಕರಣ ಮಾಡುವ ಕುರಿತಂತೆ ನಿಯಮವೊಂದನ್ನು ಜಾರಿಗೆ ತರಬೇಕು. ಇಲ್ಲವಾದರೆ ರಾಜ್ಯ ಹೈಕೋರ್ಟ್‍ಗೆ ಮನವಿ ಅರ್ಜಿ ಸಲ್ಲಿಸುವುದಾಗಿ ಕನ್ನಡ ವಾಟಾಳ್ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಾಮಾಣಿಕರು, ಯೋಗ್ಯರು, ಕಲಾವಿದರು, ಸಾಹಿತಿಗಳು, ಹೋರಾಟಗಾರರನ್ನು ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಬೇಕು. ಇದಕ್ಕೆ ಒತ್ತಾಯಿಸಿ 26 ರಂದು ರಾಜಭವನದ ಮುಂದೆ ಮಲಗಿ ಸತ್ಯಾಗ್ರಹ ನಡೆಸಲಾಗುವುದೆಂದು ಹೇಳಿದರು.

                ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ.

Recent Articles

spot_img

Related Stories

Share via
Copy link