ಕುಣಿಗಲ್:
ಇಂದಿನ ವಿದ್ಯಾರ್ಥಿಗಳು ಶಿಕ್ಷಕರು, ಉಪನ್ಯಾಸಕರುಗಳನ್ನ ಕಂಡರೆ ಸಾಕು ತಮ್ಮದೇ ಆದ ವ್ಯಾಖ್ಯಾನ ನೀಡುತ್ತ ಟೀಕಿಸುವ.,., ಕುಚೇಷ್ಟೆ ಮಾಡುವ ಹಾಗೂ ಮೂಗು ಮುರಿಯುವ ವಿದ್ಯಾರ್ಥಿಗಳೇ ಹೆಚ್ಚು.,., ಆದರೆ
ಈ ಉಪನ್ಯಾಸಕರ ಆತ್ಮೀಯತೆ, ನಡೆ-ನುಡಿಗಳನ್ನ ಮೆಚ್ಚುವ ಮೂಲಕ ಅವರ ಒರಟು ಮಾತುಗಳನ್ನೂ ಸಹ ಮೆಚ್ಚಿಕೊಂಡಿರುವ ವಿದ್ಯಾರ್ಥಿಗಳು ಈ ಉಪನ್ಯಾಸಕನಲ್ಲೊಬ್ಬ ಸ್ನೇಹಿತ, ಬಂಧು, ಶಿಕ್ಷಕ ಹಾಗೂ ಪೋಷಕರ ಗುಣವನ್ನು ಕಂಡುಕೊಂಡಿರುವ ವಿದ್ಯಾರ್ಥಿಗಳ ಪ್ರೀತಿಯ ಅಚ್ಚು ಮೆಚ್ಚಿನ ಕುಣಿಗಲ್ ಜ್ಞಾನಭಾರತಿ ಕಾಲೇಜಿಮ ಉಪನ್ಯಾಸಕ ಕಪನಿಪಾಳ್ಯ ರಮೇಶ ಅವರಿಗೆ ಇದೀಗ ಚೆನ್ನೈನ ಪ್ರತಿಷ್ಠಿತ ಸಂಸ್ಥೆಯೊಂದು ಗೌರವ ಡಾಕ್ಟರೇಟ್ ನೀಡುವ ಮೂಲಕ ಹೃದಯ ಪೂರ್ವಕವಾಗಿ ಗೌರವಿಸಿದೆ.
ಮಧ್ಯಮ ವರ್ಗದಲ್ಲಿ ಜನಿಸಿರುವ ಈ ಉಪನ್ಯಾಸಕ ಸೇವಾ ಮನೋಭಾವದಿಂದ ಒಂದು ಒಕ್ಕಲಿಗರ ಸಮುದಾಯದ ಹೆಸರಿನಿಂದ ಪ್ರಾರಂಭವಾದ ವಿದ್ಯಾಸಂಸ್ಥೆಯಲ್ಲಿ ತನ್ನ ವೃತ್ತಿಯನ್ನು ಪ್ರಾರಂಭಿಸಿ ತನಗೆ ಬರುವ ಕಡಿಮೆ ಸಂಬಳ-ಸಾರಿಗೆಯಲ್ಲಿಯೇ ಇಲ್ಲಿ ಬಹುತೇಕ ಸೇರ್ಪಡೆಗೊಂಡಿರುವ ಮಧ್ಯಮವರ್ಗದ ವಿದ್ಯಾರ್ಥಿಗಳ ವಲಯಕ್ಕೆ ಉತ್ತಮ ಕೊಡುಗೆಯನ್ನ ತನ್ನದೇ ಆದ ರೀತಿಯಲ್ಲಿ ನೀಡುತ್ತ ತಾಲ್ಲೂಕಿನಲ್ಲಿಯೇ ವಿದ್ಯಾರ್ಥಿಗಳು ಮೇಲುಗೈ ಸಾಧಿಸುವಂತೆ ಮಾಡುವ ಮೂಲಕ ಬಹುತೇಕ ಪೋಷಕರ, ಪ್ರಜ್ಞಾವಂತರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇಂತಹ ಹತ್ತು ಹಲವು ಸಾಧನೆಗಳನ್ನ ಮೆಚ್ಚಿ ಪ್ರಾಚಾರ್ಯ ಕಪನಿಪಾಳ್ಯ ರಮೇಶ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಅವರ ಸಾಧನೆಯನ್ನು ಗುರುತಿಸಿ, ಭಾರತ ಸರ್ಕಾರದ ನೀತಿ ಆಯೋಗದಡಿಯಲ್ಲಿ ಬರುವ ಇಂಡಿಯನ್ ಕೌನ್ಸಿಲ್ ಫಾರ್ ಪ್ರೊಫೆಷನಲ್ ಎಜುಕೇಷನ್ ಮಿಷನ್‍ನ ಘಟಕ ಸಂಸ್ಥೆಯಾಗಿ ಚೆನ್ನೈನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಂಡಿಯನ್ ವರ್ಚುಯಲ್ ಅಕಾಡೆಮಿ ಫಾರ್ ಪೀಸ್ ಅಂಡ್ ಎಜುಕೇಷನ್ ವತಿಯಿಂದ ಚೆನ್ನೈನ ಭಾರತೀಯ ವಿದ್ಯಾಭವನದಲ್ಲಿ ನಡೆದ ಸಮಾರಂಭದಲ್ಲಿ ಡಾಕ್ಟರೇಟ್ ಗೌರವ ನೀಡಿ ಗೌರವಿಸಿರುವುದು ತಾಲ್ಲೂಕಿನ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದರಿಂದ ಕಾಲೇಜಿನಲ್ಲಿ ಸಂಭ್ರಮ ಮನೆ ಮಾಡಿದೆ. ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಪರಸ್ಪರ ಸಿಹಿ ಹಂಚಿ ಸಂತಸ ಹಂಚಿಕೊಂಡಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ರಮೇಶ್ ಅವರ ಅವಿರತ ಶ್ರಮಕ್ಕೆ ಸಿಕ್ಕಿರುವ ಗೌರವ ಡಾಕ್ಟರೇಟ್ ಸಮ್ಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ.
ತಾಲ್ಲೂಕು ಒಕ್ಕಲಿಗರ ಸಂಘದ ವತಿಯಿಂದ ನಡೆಯುತ್ತಿರುವ ಕಾಲೇಜನ್ನು ‘ಜ್ಞಾನಭಾರತಿ ಕುಟುಂಬ’ ಎಂಬಂತೆ ರಮೇಶ್ ವಾತಾವರಣ ನಿರ್ಮಿಸಿದ್ದಾರೆ. ವಿದ್ಯಾರ್ಥಿಗಳಿಗೆ ರಮೇಶ್ ಅಂದರೆ ಎಲ್ಲಿಲ್ಲದ ಪ್ರೀತಿ,ವಾತ್ಯಲ್ಯ, ಈ ಉಪನ್ಯಾಸಕ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಗುರು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ತಮ್ಮ ಕುಟುಂಬದ ಹಿತವನ್ನೇ ಮರೆತು ಕಾಲೇಜಿನ ಶ್ರಯೋಭಿವೃದ್ಧಿಗಾಗಿ ಹಗಲಿರುಳು ಟೊಂಕ ಕಟ್ಟಿ ಶ್ರಮಿಸುತ್ತಿದ್ದಾರೆ. ರಮೇಶ್ ಕಾಲೇಜಿನಲ್ಲಿ ಯಾವುದೇ ಶುಲ್ಕವಿಲ್ಲದೆ ವಿಶೇಷ ತರಗತಿಗಳು, ರಾತ್ರಿ ಪಾಠ ಮಾಡುವ ಮೂಲಕ ವಿದ್ಯಾರ್ಥಿಗಳ ಮನ ಗೆದ್ದಿದ್ದಾರೆ.
ಬಡ ವಿದ್ಯಾರ್ಥಿಗಳಿಗೆ ತಮ್ಮ ಕೈಯಿಂದ ಹಣ ಕೊಟ್ಟು ಶಿಕ್ಷಣ ಕೊಡಿಸುತ್ತಿದ್ದಾರೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಬಡವ ಶ್ರೀಮಂತ ಎಂಬ ಭೇದಭಾವಕ್ಕೆ ಆಸ್ಪದ ಕೊಡದೆ ಬಡ ಮಕ್ಕಳಿಗೆ ಸಹಾಯ ಹಸ್ತ ಚಾಚುವ ಮೂಲಕ ಪೋಷಕರ ಮನ ಗೆದ್ದಿದ್ದಾರೆ. ಚೆನ್ನಾಗಿ ಓದುವ ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಅವರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇವರ ಸರಳತೆಯನ್ನು ಕಂಡು ವಿದ್ಯಾರ್ಥಿಗಳು ಸೇರಿ ಕಳೆದ 15 ದಿನಗಳ ಹಿಂದೆ ಕೇಕ್ ಕತ್ತರಿಸಿ ಬರ್ತ್‍ಡೇ ಆಚರಿಸಿದ್ದರು. ಅಂಧ ಶಾಲೆಗೆ ತೆರಳಿ ಅಲ್ಲಿನ ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಿದ್ದರು.
ಕಾಲೇಜಿನಲ್ಲಿ ಸಾಂಸ್ಕತಿಕ ಕಾರ್ಯಕ್ರಮಗಳಿಂದ ಹಿಡಿದು ಹೊಸ ವರ್ಷ ಜನವರಿಯಲ್ಲಿ ಸ್ವದೇಶೀ ಉಡುಪುಗಳನ್ನು ಧರಿಸುವ ಮೂಲಕ ಭಾರತೀಯ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಮೂಡುವ ಹೊಸತನಕ್ಕೆ ಹಳೇತನವನ್ನು ಬೆರೆಸಿ ಮೈಗೂಡಿಸುವ ಮೂಲಕ ಉತ್ತಮ ಸಾಮಾಜಿಕ ಪರಿಕಲ್ಪನೆಯನ್ನು ಬೆಳೆಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಬಾಳನ್ನು ರೂಪಿಸಿಕೊಳ್ಳುವಂತಹ ಸಲಹೆ ಸೂಚನೆಗಳನ್ನ ಕೈಗನ್ನಡಿಯ ಮಾದರಿಯಲ್ಲಿ ನೀಡುತ್ತಿರುವ ಈ ಪ್ರಾಚಾರ್ಯ ಕಪನಿಪಾಳ್ಯ ರಮೇಶ ಅವರಿಗೆ ಡಾಕ್ಟರೇಟ್ ಲಭಿಸುವುದರ ಜೊತೆಗೆ ಮತ್ತಷ್ಟು ಜವಾಬ್ದಾರಿಯನ್ನು ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ.