ಆಧಾರ್ ಭವಿಷ್ಯ..? ಇಂದು ನಿರ್ಧಾರ..!

ದೆಹಲಿ:

      ಆಧಾರ್‌ ಕಾರ್ಡ್‌ ಖಡ್ಡಾಯವಾಗೊಳಿಸಿದ್ದ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ ಇಂದು(ಸೆ.26) ತಮ್ಮ ಅಂತಿಮ ತೀರ್ಪು ಪ್ರಕಟಿಸಲಿದೆ.

      ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ಐದು ಜನರ ಪೀಠವು ಆಧಾರ್‌ಗೆ ಸಾಂವಿಧಾನಿಕ ಸಿಂಧುತ್ವ ನೀಡುವ ಬಗ್ಗೆ ನಾಳೆ ತೀರ್ಪು ಪ್ರಕಟಿಸಲಿದ್ದಾರೆ. ಆಧಾರ್ ಖಡ್ಡಾಯಗೊಳಿಸಿ ಕೇಂದ್ರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು.

      ಕೇಂದ್ರವು ಆಧಾರ್ ಅನ್ನು ಸುಪ್ರೀಂನಲ್ಲಿ ಸಮರ್ಥಿಸಿಕೊಂಡಿದ್ದು, ಆಧಾರ್‌ನಿಂದ ಗೌಪತ್ಯಗೆ ಧಕ್ಕೆ ಆಗುವುದಿಲ್ಲ ಎಂದಿದೆ. ಅಲ್ಲದೆ ಆಧಾರ್‌ನಿಂದ ಮಾಹಿತಿ ಸೋರಿಕೆ ಸಹ ಆಗದು ಎಂದು ಹೇಳಿದೆ.

      ಕೇಂದ್ರ ಸರ್ಕಾರವು ಈಗಾಗಲೇ ಮೊಬೈಲ್ ಸಿಮ್ ಖರೀದಿ, ವಿದೇಶಿ ಹಣಕಾಸು ವ್ಯವಹಾರ, ಪಾಸ್‌ಪೋರ್ಟ್‌, ಬ್ಯಾಂಕ್‌ ಖಾತೆ, ಚಾಲನಾ ಪರವಾನಗಿ ಸೇರಿದಂತೆ ಹಲವು ಸರ್ಕಾರಿ ಸೇವೆಗಳಿಗೆ ಆಧಾರ್‌ ಸಂಖ್ಯೆ ಕಡ್ಡಾಯ ಮಾಡಿದೆ. ಕೇಂದ್ರದ ಈ ಯೋಜನೆಯ ಭವಿಷ್ಯ  ಇಂದಿನ ಸುಪ್ರೀಂ ಕೋರ್ಟ್‌ ತೀರ್ಪಿನ ಮೇಲೆ ನಿಂತಿದೆ.   

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ