ಸಾಹಿತ್ಯ ಸಂಪದಾಭಿವೃದ್ಧಿಯಿಂದ ನಾಡು ಬಲಿಷ್ಟ : ಕಮಲಾ ಹೆಮ್ಮಿಗೆ

ತುಮಕೂರು 

     ನೆಲ-ಜನ-ಅರಣ್ಯಗಳಂತೆ ಸಾಹಿತ್ಯ ಸಂಪದಾಭಿವೃದ್ಧಿಯಿಂದ ನಾಡು ಬಲಿಷ್ಟ ಎಂದು ಖ್ಯಾತ ಲೇಖಕಿ ಹಾಗೂ ಕೇರಳದ ತಿರುವನಂತಪುರಂ ದೂರದರ್ಶನದಲ್ಲಿ ಸೇವೆ ಸಲ್ಲಿಸುತ್ತಿರುವ ಕಮಲಾ ಹೆಮ್ಮಿಗೆ ಅಭಿಪ್ರಾಯಪಟ್ಟರು.

     ನಗರದ ಕ್ಯಾತಸಂದ್ರದಲ್ಲಿರುವ ಕವಿತಾಕೃಷ್ಣ ಸಾಹಿತ್ಯ ಮಂದಿರಕ್ಕೆ ಸ್ವಯಂ ಭೇಟಿ ಇತ್ತು, ಮಂದಿರದ ಗೌರವ ಸ್ವೀಕರಿಸಿದರಲ್ಲದೆ ಕನ್ನಡ ಸಾರಸ್ವತ ಲೋಕ ಬಹು ವಿಸ್ತಾರವಾದುದು. ಎರಡು ಸಾವಿರ ವರ್ಷಗಳಿಗೂ ಮಿಗಿಲಾಗಿ ಇತಿಹಾಸವಿದೆ. ಕನ್ನಡ ಸಾಹಿತ್ಯ ಮತ್ತು ಕನ್ನಡ ಭಾಷೆ ಬೆಳೆಸುವಲ್ಲಿ ಕನ್ನಡಿಗರಂತೆ ತಮಿಳು, ತೆಲುಗು, ಉರ್ದು, ಮರಾಠಿ ಭಾಷಿಕರೂ ಕೂಡ ಪ್ರಾಂಜಲ ಚಿತ್ತದಿಂದ ಮುಂದಾಗಿದ್ದಾರೆ. ಮಾಸ್ತಿ, ಡಿ.ವಿ.ಜಿ., ಪು.ತಿ.ನ., ಗೊರೂರು ರಾಮಸ್ವಾಮಿ ಅಯ್ಯಂಗಾರ್, ಶಿಶುವಿನಹಾಳ ಶರೀಫರು, ನಿಸಾರ್ ಅಹಮದ್ ಮುಂತಾದವರ ಸೇವೆ ಸ್ಮರಣೀಐ. ಅನ್ಯಭಾಷಾ ಸಂಪತ್ತು ಕನ್ನಡಕ್ಕೆ, ಕನ್ನಡ ಸಾಹಿತ್ಯ ಸಂಪತ್ತು ಅನ್ಯಭಾಷೆಗಳಿಗೆ ಅನುವಾದಗೊಂಡು ಸಾಮರಸ್ಯ ಬೆಳಸಿವೆ.

     ತುಮಕೂರಿನಲ್ಲಿ ಸಾಹಿತ್ಯ ಜೀವಂತವಿದೆ. ಅದರಲ್ಲೂ ಕವಿತಾಕೃಷ್ಣ ಸಾಹಿತ್ಯ ಮಂದಿರದ ಸೇವೆ ಶ್ಲಾಘನೀಯ. ಇದರ ಸೇವೆ ಕೇರಳದಲ್ಲಿರುವ ನನ್ನ ಮನಸ್ಸು ತಟ್ಟಿದೆ. ಇದನ್ನು ನೋಡಲೆಂದೇ ಬಂದೆ. ಕವಿತಾಕೃಷ್ಣರ ಸೇವೆ ಅನನ್ಯ. ಅವರು ಕನ್ನಡ ಸಾಹಿತ್ಯ ಪ್ರಸಾರಕ್ಕೆ ತೋರುವ ಕಾಳಜಿ ಅನುಕರಣೀಯ ಎಂದು ನುಡಿದರು.

     ಕಮಲಾ ಹೆಮ್ಮಿಗೆ ಅವರನ್ನು ಕವಿತಾಕೃಷ್ಣ ಸನ್ಮಾನಿಸಿ, ಕಮಲಾ ಹೆಮ್ಮಿಗೆ ನಾಲ್ಕು ದಶಕಗಳಿಗೂ ಕನ್ನಡ ಹಾಗೂ ಸಾಹಿತ್ಯ ಸೇವೆ ಮಾಡಿದ್ದಾರೆ. ಕವಿ ಪುತಿ.ನ. ಮತ್ತು ಗೊರೂರು ಕುಟುಂಬದ ಕಣ್ಮಣಿ ಎಂದು ಶ್ಲಾಘಿಸಿದರು.

                   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap