ನಕಲಿ ಬಿಲ್‍ಗಳನ್ನು ಸೃಷ್ಟಿಸಿ 2 ಸಾವಿರ ಕೋಟಿ ರೂ. ಗೂ ಅಧಿಕ ಮೊತ್ತದ ಜಿಎಸ್‍ಟಿ ವಂಚನೆ

ಬೆಂಗಳೂರು:

      ನಕಲಿ ಬಿಲ್‍ಗಳನ್ನು ಸೃಷ್ಟಿಸಿ 2 ಸಾವಿರ ಕೋಟಿ ರೂ. ಗೂ ಅಧಿಕ ಮೊತ್ತದ ಸರಕು ಸೇವಾ ತೆರಿಗೆ (ಜಿಎಸ್‍ಟಿ) ವಂಚಿಸಿದ್ದ ವಂಚನೆ ಜಾಲ ಬೇದಿಸಿದೇಶದ ಅತಿದೊಡ್ಡ ಜಿಎಸ್‍ಟಿ ವಂಚನೆ ಜಾಲವನ್ನು ಬಯಲಿಗೆಳೆದಿರುವ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ವಿಕ್ರಮ್ ದುಗಾಲ್ ಸೇರಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

     ವಿಕ್ರಮ್ ದುಗಾಲ್ ಜೊತೆಗೆ ನಿಯಾಜ್ ಅಹಮದ್, ಅಶ್ವಾಕ್ ಅಹಮದ್‍ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಗಳು ನಕಲಿ ಬಿಲ್ಲುಗಳನ್ನ ನೂರಾರು ವರ್ತಕರಿಗೆ ನೀಡಿ ಸರ್ಕಾರಕ್ಕೆ ನೂರಾರು ಕೋಟಿ ಜಿಎಸ್‍ಸ್‍ಟಿ ವಂಚಿಸಿರುವುದು ಪತ್ತೆಯಾಗಿ ಮೂವರು 203 ಕೋಟಿಯಷ್ಟು ವಂಚನೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ.

     ಆರೋಪಿ ವಿಕ್ರಮ್ ದುಗ್ಗಲ್ ಪಂಜಾಬ್ ಮೂಲದವನಾಗಿದ್ದು, ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಬ್ಯುಸಿನೆಸ್ ಮಾಡ್ತಿದ್ದ ಎಂದು ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಅಯುಕ್ತ ನಿತೇಶ್ ಕೆ. ಪಾಟೀಲ್ ಹೇಳಿಕೆ ನೀಡಿದ್ದಾರೆ.ಇನ್ನು ಇದೇ ರೀತಿ ರಾಜ್ಯದ ವಿವಿಧೆಡೆ ಎರಡು ಸಾವಿರ ಕೋಟಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಇತರೆ ಅಂಗಡಿ ಮುಂಟ್ಟುಗಳಿಂದ ಎರಡು ಸಾವಿರ ಕೋಟಿ ತೆರಿಗೆ ವಂಚನೆ ಪತ್ತೆಯಾಗಿದ್ದು, ದಾಳಿಯ ಸೂಚನೆ ಅರಿತು ಅಂಗಡಿಗಳನ್ನ ಮುಚ್ಚಿ ವರ್ತಕರು ಪರಾರಿಯಾಗಿದ್ದಾರೆ.

     ಎರಡು ವರ್ಷಗಳ ಹಿಂದೆ ಸಾವನ್ನಪ್ಪಿರುವ ವ್ಯಕ್ತಿಯ ಹೆಸರಲ್ಲೂ ನಕಲಿ ಬಿಲ್ ಸೃಷ್ಟಿ ಮಾಡಿದ್ದಾರೆ. ನಕಲಿ ಬಿಲ್ ಖರೀದಿ ಮಾಡಿದವರ ಮೇಲೂ ದೂರು ದಾಖಲಿಸಲು ವಾಣಿಜ್ಯ ತೆರಿಗೆ ಇಲಾಖೆ ಚಿಂತನೆ ಮಾಡಿದ್ದು, ಬೆಂಗಳೂರು, ಗದಗ, ಮೈಸೂರು, ಇಳಕಲ್, ಬೆಳಗಾವಿ ಸೇರಿ ರಾಜ್ಯದ ವಿವಿಧೆಡೆ ದೊಡ್ಡ ದೊಡ್ಡ ವರ್ತಕರು, ಕಂಪನಿಗಳಿಂದ ತೆರಿಗೆ ವಂಚನೆ ಮಾಡಿದ್ದಾರೆ.

     ರತನ್ ಎಂಟರ್ ಪ್ರೈಸಸ್, ರಾಜೀವ್ ಎಂಟರ್ ಪ್ರೈಸಸ್, ರಮನ್, ರಾಹುಲ್, ರಾಯಲ್, ಅಕಾಶ್ ಎಂಟರ್ ಪ್ರೈಸಸ್, ಅರತಿ ಟ್ರೇಡರ್ಸ್ ಸೇರಿ ಅನೇಕ ಕಂಪನಿಗಳಲ್ಲಿ ವಂಚನೆ ಬೆಳಕಿಗೆ ಬಂದಿದ್ದು, 50 ರಿಂದ 60 ಕಂಪನಿಗಳು, ವರ್ತಕರ ಮೇಲೆ ದಾಳಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap