ಕಾಂಗ್ರೆಸ್ ನಿಂದ ಕೇಂದ್ರ ಸರ್ಕಾರದ ಮೇಲೆ ಸುಳ್ಳು ಆರೋಪ

ಚಳ್ಳಕೆರೆ

    ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ತನ್ನದೇಯಾದ ಜನಪ್ರಿಯ ಕಾರ್ಯಕ್ರಮಗಳ ಮೂಲಕ ರಾಷ್ಟ್ರದಲ್ಲಷ್ಟೇಯಲ್ಲ, ವಿಶ್ವದ ಗಮನವನ್ನು ಸೆಳೆದಿದೆ. ನರೇಂದ್ರ ಮೋದಿಯವರ ದಿಟ್ಟತನ ಹಾಗೂ ಸಮಯೋಚಿತ ನಿರ್ಧಾರಗಳು ರಾಷ್ಟ್ರಕ್ಕೆ ಹೊಸ ಶಕ್ತಿ ಹಾಗೂ ಚೈತನ್ಯವನ್ನು ತಂದಿವೆ.

     ಅದರೆ, ಕಾಂಗ್ರೆಸ್ ಪಕ್ಷದ ದುರೀಣರು ಮಾತ್ರ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಕೇಂದ್ರ ಸರ್ಕಾರ ವರ್ಚರಸನ್ನು ಕುಂದಿಸಲು ಪ್ರಯತ್ನಿಸುತ್ತಿದ್ದು, ಇದು ಫಲನೀಡುವುದಿಲ್ಲವೆಂದು ಕೇಂದ್ರ ಆಹಾರ ಮತ್ತು ಸಂಸ್ಕರಣಾ ಖಾತೆ ಸಚಿವೆ ಪೂಜ್ಯ ಸಾಧ್ವಿ ನಿರಂಜನ್ ಜ್ಯೋತಿ ತಿಳಿಸಿದರು.

     ಅವರು, ಬುಧವಾರ ಬೆಳಗ್ಗೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ, ಇಡೀ ವಿಶ್ವವೇ ಕೇಂದ್ರ ಸರ್ಕಾರದ ಮಹಾನ್ ಸಾಧನೆಗಳ ಬಗ್ಗೆ ಹೆಮ್ಮೆ ಪಡುತ್ತಿರುವ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಮತ್ತು ಬಿಜೆಪಿಯ ಜನಪ್ರಿಯತೆಯನ್ನು ಸಹಿಸಲಾಗದ ಕಾಂಗ್ರೆಸ್ ಪಕ್ಷ ಯಾವುದೇ ನಿಖರವಲ್ಲದ ಸತ್ಯವಲ್ಲದ ಆರೋಪಗಳನ್ನು ಮಾಡುತ್ತಾ ಬಂದಿದೆ. ಇಂತಹ ಆರೋಪಗಳು ಸಾರ್ವಜನಿಕರ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ.

     ದೇಶದ ಜನತೆಗೆ ಇಂದು ನರೇಂದ್ರ ಮೋದಿಯವರ ಆಡಳಿತ ಅವಶ್ಯಕವಾಗಿ ಬೇಕಾಗಿದೆ. ಕೇಂದ್ರ ಸರ್ಕಾರದ ಯಾವುದೇ ಖಾತೆಯ ಸಚಿವರುಗಳ ಮೇಲೆ ಪ್ರಧಾನ ಮಂತ್ರಿಯವರ ಮೇಲೆ ಯಾವುದೇ ರೀತಿಯ ಆರೋಪಗಳಿಲ್ಲ. ಪಾರದರ್ಶಕವಾಗಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ.

     ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷವಾಗಿ ಕೆಲಸ ಮಾಡುವ ಜವಾಬ್ದಾರಿಯನ್ನು ದೇಶದ ಜನತೆ ನೀಡಿದ್ಧಾರೆ. ಆ ಜವಾಬ್ದಾರಿಯನ್ನು ಅವರು , ಇನ್ನೂ ಹೆಚ್ಚು ಕ್ರಿಯಾಶೀಲವಾಗಿ ನಿರ್ವಹಿಸುವ ಸಾಮಥ್ರ್ಯ ತೋರಬೇಕಿದೆ ಎಂದರು.

     ಪ್ರಧಾನ ಮಂತ್ರಿ ನರೇಂದ್ರಮೋದಿಯವರ ದಿಟ್ಟ ನಿರ್ಧಾರದಿಂದ ದೇಶ 5 ಕೋಟಿ ಗೃಹಿಣಿಯರಿಗೆ ಉಜ್ವಲ ಯೋಜನೆಯ ಗ್ಯಾಸ್ ಸಿಲೆಂಡರ್ ನೀಡಲಾಗಿದೆ. ಬೇಟಿ ಪಡಾವೋ, ಬೇಟಿ ಬಚಾವೋ ಯೋಜನೆಯೂ ಸಹ ಜನಪ್ರಿಯವಾಗಿದೆ. ಕಪ್ಪು ಹಣ ಹೊರತೆಗೆಯುವ ಬಗ್ಗೆ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲಾ ಆಹಾರ ಪದಾರ್ಥಗಳ ಬೆಲೆಗಳನ್ನು ನಿಯಂತ್ರಿಸಲಾಗಿದೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಲಾಗಿದೆ.

      ಆದರೆ, ಪೆಟ್ರೋಲ್ ಮತ್ತು ಡಿಸೇಲ್ ದರ ಹೆಚ್ಚಳ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಆಯಾ ರಾಜ್ಯ ಸರ್ಕಾರಗಳು ತೆರಿಗೆಯನ್ನು ಕಡಿತಗೊಳಿಸಿದಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಸರ್ಕಾರಗಳೇ ಚಿಂತನೆ ನಡೆಸಬೇಕಿದೆ. ಕೇಂದ್ರ ಸರ್ಕಾರದತ್ತ ಕೈ ತೋರಿಸುವುದು ಸರಿಯಲ್ಲವೆಂದರು.

      ಬಿಜೆಪಿ ಮಂಡಲಾಧ್ಯಕ್ಷ ಬಿ.ವಿ.ಸಿರಿಯಣ್ಣ ಮಾತನಾಡಿ, ಬಳ್ಳಾರಿಯ ಖಾಸಗಿ ಕಾರ್ಯಕ್ರಮವೊಂದಕ್ಕೆ ತೆರಳು ಕೇಂದ್ರ ಆಹಾರ ಮತ್ತು ಸಂಸ್ಕರಣಾ ಖಾತೆ ಸಚಿವೆ ತೆರಳುವ ಬಗ್ಗೆ ಮಾಹಿತಿ ಪಡೆದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಬೇಟಿ ಮಾಡುವ ಸಲುವಾಗಿ ಇಲ್ಲಿ ಸ್ವಲ್ಪ ಕಾಲ ತಂಗಿದ್ಧಾರೆ. ಬಳ್ಳಾರಿಯ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾಗೂ ಹುಬ್ಬಳಿಗೆ ತೆರಳಿದ್ದು, ಅವರುನ್ನು ಪಕ್ಷದ ಪರವಾಗಿ ಸ್ವಾಗತಿಸಿ, ಪಕ್ಷ ಸಂಘಟನೆಯ ಬಗ್ಗೆ ಕೆಲವು ಮಾಹಿತಿಯನ್ನು ನೀಡಲಾಯಿತು ಎಂದರು.

      ನಗರಸಭೆ ಮಾಜಿ ಸದಸ್ಯ, ದಲಿತ ಸಮುದಾಯದ ಯುವ ಮುಖಂಡ ಎಂ.ಶಿವಮೂರ್ತಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಎಲ್ಲಾ ಸಚಿವರು ಉತ್ತಮ ಕಾರ್ಯವನ್ನು ಮಾಡುವ ಮೂಲಕ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.

     ಕೇಂದ್ರ ಆಹಾರ ಮತ್ತು ಸಂಸ್ಕರಣಾ ಸಚಿವೆಯಾಗಿ ಸಾಧ್ವಿ ನಿರಂಜನ್ ಜ್ಯೋತಿಯವರು ಸಹ ದೇಶದ ಗಮನ ಸೆಳೆದಿದ್ಧಾರೆ. ಅವರ ಉತ್ತಮ ಕಾರ್ಯಗಳು ಸರ್ಕಾರಕ್ಕೆ ಹೆಚ್ಚು ಗೌರವನ್ನು ತಂದುಕೊಟ್ಟವು. ಪಕ್ಷದ ಪರವಾಗಿ ಅವರನ್ನು ಅಭಿನಂದಿಸಲು ಹಲವಾರು ಕಾರ್ಯಕ್ರಮ ಆರಂಬಿಸಿದ್ಧಾರೆಂದರು.

     ಇಲ್ಲಿನ ಬೆಸ್ತರ ಸಮಾಜದ ಯುವ ಮುಖಂಡ ಜಿ.ವಿ.ಮಹೇಶ್ ಮಾತನಾಡಿ, ಬಳ್ಳಾರಿ ನಗರದಲ್ಲಿ ಬೆಸ್ತರ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಸಚಿವರು ತೆರಳಿದ್ದು, ಸಮುದಾಯದ ಪರವಾಗಿ ಅವರನ್ನು ಸನ್ಮಾನಿಸಲಾಯಿತು. ಸಾಧ್ವಿನಿರಂಜನ್ ಜ್ಯೋತಿ ಕಳೆದ ಹಲವಾರು ವರ್ಷಗಳಿಂದ ಕೇಂದ್ರ ಸರ್ಕಾರದ ಸಚಿವರಾಗಿದ್ದು, ಈ ಸಮುದಾಯಕ್ಕೆ ಅನೇಕ ಕೊಡುಗೆ ನೀಡಿದ್ಧಾರೆ.

       ಈ ಹಿನ್ನೆಲೆಯಲ್ಲಿ ಸಮಾಜದ ಮುಖಂಡರಾದ ತಿಪ್ಪೇರುದ್ರಪ್ಪ, ರಾಜು, ತಿಪ್ಪೇಶ್ ಮುಂತಾದವರು ನೇತೃತ್ವದಲ್ಲಿ ಸಚಿವರನ್ನು ಸನ್ಮಾನಿಸಲಾಯಿತು ಎಂದರು. ನಗರದ ಘಟಕದ ಅಧ್ಯಕ್ಷ ಜೆ.ಎಂಸಿ ವೀರೇಶ್, ಪಕ್ಷದ ಮುಖಂಡರಾದ ಡಿ.ಎಂ.ತಿಪ್ಪೇಸ್ವಾಮಿ, ಎ.ವಿಜಯೇಂದ್ರ, ಆದಿಭಾಸ್ಕರ ಶೆಟ್ಟಿ, ಸಿ.ಎಸ್.ಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.

                ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link