ಮನಸೆಳೆದ ಎಸ್‍ ಆರ್ ಎಸ್ ಚಿಣ್ಣರ ಸಂತೆ

ಚಿತ್ರದುರ್ಗ:

    ನಗರದ ಎಸ್ ಆರ್ ಎಸ್ ಹೆರಿಟೇಜ್ ಶಾಲೆಯಲ್ಲಿ ಚಿಣ್ಣರ ತರಕಾರಿ ಮೇಳ ಎಂಬ ಪಠ್ಯೇತರ ಚಟುವಟಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

    ಶಾಲೆಯ 5ನೇ ತರಗತಿಯ ಮಕ್ಕಳು ತಮ್ಮ ಪೋಷಕರೊಂದಿಗೆ ಸ್ವತಃ ಮಾರುಕಟ್ಟೆಗೆ ಹೋಗಿ ಹೊಲ್ ಸೇಲ್‍ನಲ್ಲಿ ತರಕಾರಿ ಮತ್ತು ಸೊಪ್ಪನ್ನು ಕೊಂಡು ತಂದು ಖಾಸಗಿ ಬಸ್ ನಿಲ್ದಾಣದಲ್ಲಿ ಮಾರಾಟ ಮಾಡಿದರು.

     ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಸ್ಥೆಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ಶಾಲೆಯಲ್ಲಿ ಪಠ್ಯಕಷ್ಟೆ ಸೀಮಿತವಾಗಿರದೆ ಈ ರೀತಿಯ ಪಠ್ಯೇತರ ಚಟುವಟಿಕೆಯಲ್ಲಿ ಮಕ್ಕಳು ಭಾಗವಹಿಸಬೇಕು ಎಂದು ಕರೆ ನೀಡಿದರು

     ಹೊರಗಿನ ಪ್ರಪಂಚದಲ್ಲಿ ವ್ಯವಹಾರ ಜ್ಞಾನವೂ ತುಂಬಾ ಮುಖ್ಯವಾಗಿದ್ದು ಅದರ ಜೊತೆಗೆ ಕೊಳ್ಳುವ ಮತ್ತು ಮಾರುವ ನಿಪುಣತೆ ಮಕ್ಕಳಲ್ಲಿ ಕರಗತ ಮಾಡಬೇಕಾಗಿದೆ. ಮತ್ತು ಸ್ವಂತ ವ್ಯಾಪಾರ ಮಾಡಿ ಬದುಕು ರೂಪಿಸಿಕೊಳ್ಳುವಲ್ಲಿ ಆತ್ಮವಿಶ್ವಾಸ ವಿದ್ಯಾರ್ಥಿಗಳಲ್ಲಿ ಮೂಡಿಸುವ ಉದ್ದೇಶದಿಂದ ಒಂದಿಲ್ಲೊಂದು ಈ ರಿತೀಯ ವಿಶೇಷ ಚಟುವಟಿಕಾ ಕಾರ್ಯಕ್ರಮ ನಮ್ಮ ಶಾಲೆಯು ಆಯೋಜಿಸುವುದು ಸಂತಸದ ಸಂಗತಿ ಎಂದು ತಿಳಿಸಿದರು.

    ಸಂಸ್ಥೆಯ ಆಡಳಿತಾಧಿಕಾರಿ ಡಾ|| ಟಿ ಎಸ್ ರವಿ ಮಾತನಾಡಿ ಮಕ್ಕಳು ಈ ಚಟುವಟಿಕೆಯಲಿ ಭಾಗವಹಿಸುವುದರಿಂದ ಮಕ್ಕಳ ಬೌದ್ದಿಕ ಮತ್ತು ಭೌತಿಕ ಜ್ಞಾನಮಟ್ಟ ಬೆಳವಣಿಗೆಯಾಗಲು ಸಹಕಾರಿಯಾಗಿದೆ. ಮಕ್ಕಳು ತುಂಬ ಉತ್ಸಾಹದಿಂದ ಭಾಗವಹಿಸಿ ಲಾಭ ಮತ್ತು ನಷ್ಟದ ಲೆಕ್ಕಾಚಾರವನ್ನು ಸ್ವತಃ ಪ್ರತ್ಯಕ್ಷವಾಗಿ ಅರಿತರು.

    ಪ್ರಾಂಶುಪಾಲ ಎಮ್ ಎಸ್ ಪ್ರಭಾಕರ್ ಮಾತನಾಡಿ ಮಕ್ಕಳ ಈ ರೀತಿಯ ಚಟುವಟಿಕೆಯಿಂದ ವಿದ್ಯಾರ್ಥಿಗಳು ತಮ್ಮ-ತಮ್ಮ ಅರಿವಿನ ಬುತ್ತಿಯೊಳಗೆ, ಸಂಕಲನ-ವ್ಯವಕಲನದೊಳಗೆ, ಭಾಗಕಾರ-ಗುಣಕಾರಗಳೊಳಗೆ, ಮನಸಾರೆ ಮಿಂದೆದ್ದರು ಮಕ್ಕಳು ಗಣಿತದೊಳಗೆ, ಎಸ್ ಆರ್ ಎಸ್ ಸಂತೆಮೇಳ, ಇಂದು ಮುಂದಿನ ಜೀವನದಡಿಗಳ, ಬಾಳಿನ ವಿವಿಧ ಅವಸ್ಥೆಗಳ, ಜೀವನದ ಸಂತೆಮೇಳ ಎಂದು ಕಾರ್ಯಕ್ರಮ ಕುರಿತು ಮಾತನಾಡಿದರು.

     ಕಾರ್ಯಕ್ರಮದಲ್ಲಿ ಶಾಲೆಯ ನಸೀಬಾ, ಶೈಲಾ, ಸೋಲಿ, ನಿಶಾತ್, ಗೀತಾ ಶಾಲಿನಿ, ಪ್ರೀತಿ, ಕಾವ್ಯ, ಲುಬ್ನ ವಿನೋದ್‍ಕುಮಾರ್, ರಾಹುಲ್, ಪ್ರವೀಣ್, ಪ್ರಿಯಾ, ಪದ್ಮಾ ಉಪಸ್ಥಿತರಿದ್ದರು.

                  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap