ಜೈವಿಕ ನಿಯಂತ್ರಣ ವಿಧಾನಗಳ ಬಳಕೆ ಉತ್ತೇಜಿಸುವ ಅಗತ್ಯವಿದೆ

ಬೆಂಗಳೂರು:

       ಪ್ರಧಾನಮಂತ್ರಿಗಳ ಅಭಿಲಾಶೆಯಂತೆ ರೈತರ ವರಮಾನ ದುಪ್ಪಟ್ಟುಗೊಳಿಸಲು ಜೈವಿಕ ನಿಯಂತ್ರಣ ವಿಧಾನಗಳ ಬಳಕೆ ಉತ್ತೇಜಿಸುವ ಅಗತ್ಯವಿದೆ ಎಂದು ಕೇಂದ್ರೀಯ ಕೃಷಿ ಅನುಸಂಧಾನ ಪರಿಷತ್‍ನ ಪ್ರಧಾನ ನಿರ್ದೇಶಕ ಡಾ.ತ್ರಿಲೋಚನ್ ಮೊಹಪಾತ್ರ ತಿಳಿಸಿದ್ದಾರೆ.

       ನಗರದಲ್ಲಿಂದು ಜೈವಿಕ ನಿಯಂತ್ರಣ ಸಂಶೋಧನೆಯ ಅಂತಾರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಸಮಾವೇಶ ಇದೇ ಮೊದಲ ಬಾರಿಗೆ ದೇಶದಲ್ಲಿ ಆಯೋಜಿತವಾಗಿದೆ, ಕೀಟಗಳು ಮತ್ತು ರೋಗಗಳ ನಿಯಂತ್ರಣಕ್ಕಾಗಿ ರೈತ ಸಮುದಾಯಕ್ಕೆ ಸರಳ ವಿಧಾನಗಳ ಅಗತ್ಯವಿದೆ. ಇದು ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಪಡೆಯಲು ಗೊಬ್ಬರ ಪೂರೈಕೆಯಷ್ಟೆ ಮುಖ್ಯವಾಗುತ್ತದೆ ಎಂದು ಹೇಳಿದರು.

        ಮೂರುದಿನ ನಡೆಯುವ ಈ ಸಮಾವೇಶದಲ್ಲಿ ಹಲವು ಕೃಷಿ ತಜ್ಞರು ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ. 20 ದೇಶಗಳ ಕೃಷಿ ಪಂಡಿತರು ಮತ್ತು ವಿಜ್ಞಾನಿಗಳು ಸಮಾವೇಶದಲ್ಲಿ ಭಾಗವಹಿಸಿದ್ದಾರೆ.

                   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ