ಜಂಟಿ ಸದನ ಸಮಿತಿ ರಚಿಸಿ ತನಿಖೆ ನಡೆಸಬೇಕೆಂದು ಒತ್ತಾಯ

ಬೆಂಗಳೂರು:

     ಕೇಂದ್ರದ ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರದಲ್ಲಿ ರಾಫೆಲ್ ಯುದ್ಧ ವಿಮಾನ ತಯಾರಿಸುವ ಗುತ್ತಿಗೆ ಒಪ್ಪಂದ ಹಗರಣವನ್ನು ಕೂಡಲೇ ಕೇಂದ್ರ ಸರಕಾರ ಜಂಟಿ ಸದನ ಸಮಿತಿ ರಚಿಸಿ ತನಿಖೆ ನಡೆಸಬೇಕೆಂದು ಡಿವೈಎಫ್‍ಐ ರಾಷ್ಟ್ರಾಧ್ಯಕ್ಷ ಮೊಹಮ್ಮದ್‍ರಿಯಾಸ್ ಒತ್ತಾಯಿಸಿದರು.

      ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಡಿವೈಎಫ್‍ಐ ರಾಜ್ಯ ಮತ್ತು ಜಿಲ್ಲಾ ಸಮಿತಿಗಳು ರಾಫೆಲ್ ಹಗರಣ ತನಿಖೆಗೆ ಒತ್ತಾಯಿಸಿ  ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಏಳೂವರೆ ದಶಕಗಳ ಇತಿಹಾಸವಿರುವ ಹಾಗೂ ದೇಶ-ವಿದೇಶಗಳ ವೈಮಾನಿಕಯೋಜನೆ ಸಿದ್ಧಪಡಿಸಿ ಅಭಿವೃದ್ಧಿಪಡಿಸಿದ ಹೆಗ್ಗಳಿಕೆ ಇರುವ ಸರಕಾರಿ ಸ್ವಾಮ್ಯದ ಎಚ್‍ಎಎಲ್‍ಗೆ ರಾಫೆಲ್‍ಯುದ್ಧ ವಿಮಾನ ತಯಾರಿಸುವ ಸಾಮಥ್ರ್ಯವಿಲ್ಲವೆಂಬ ನೆಪವೊಡ್ಡಿ ಖಾಸಗಿ ಕಂಪೆನಿಯಾದ ಅಂಬಾನಿ ಒಡೆತನದ ರಿಲಯನ್ಸ್ ಡಿಪೆನ್ಸ್‍ಗೆ ಒಂದು ಲಕ್ಷ ಕೋಟಿಯ ಬೃಹತ್ ಮೌಲ್ಯದ ಗುತ್ತಿಗೆ ಒಪ್ಪಂದ ಮಾಡಿಕೊಂಡಿರುವುದರ ಹಿಂದೆ ಅತಿದೊಡ್ಡ ಭ್ರಷ್ಟಾಚಾರ ಹಗರಣ ನಡೆದಿದೆ ಎಂದು ಆರೋಪಿಸಿದರು.

      ಡಿವೈಎಫ್‍ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ದೇಶದ ಜನತೆ ಈ ಹಗರಣದ ಕುರಿತು ಪ್ರಶ್ನಿಸಿದರೆ, ಕೇಂದ್ರ ಸರ್ಕಾರ ರಿಲಯನ್ಸ್‍ಡಿಪೆನ್ಸ್ ಕಂಪೆನಿ ಪಾಲುದಾರನ್ನಾಗಿಸಿದ್ದು ನಾವಲ್ಲ, ಫ್ರಾನ್ಸ್‍ನ ಡಸಾಲ್ಟ್ ಏವಿಯೇಶನ್ ಸಂಸ್ಥೆ ಎಂದು ಸಬೂಬು ಹೇಳುತ್ತಾರೆ. ಆದರೆ ಸ್ವತಃ ಪ್ರಾನ್ಸ್‍ನ ಅಂದಿನ ಅಧ್ಯಕ್ಷ ಹೊಲ್ಲಾಂಡ್ ಅವರು ರಿಲಯನ್ಸ್ ಕಂಪೆನಿಯನ್ನು ರಫೆಲ್ ಒಪ್ಪಂದದ ಭಾರತೀಯ ಪಾಲುದಾರನನ್ನಾಗಿ ನಿಯೋಜಿಸುವಂತೆ ಭಾರತ ಸರಕಾರವೇ ಹೇಳಿತ್ತು ಎನ್ನುವ ಅಂಶವನ್ನು ಬಹಿರಂಗಪಡಿಸಿದ್ದರು. ಒಪ್ಪಂದದ ಹೊಣೆಯನ್ನು ಫ್ರಾನ್ಸ್ ಸರಕಾರದ ಮೇಲೆ ಹಾಕಿ ಸ್ವತಃ ಪ್ರಧಾನಮಂತ್ರಿಗಳೇ ದೇಶದ ಜನರನ್ನು ದಿಕ್ಕುತಪ್ಪಿಸುತ್ತಿರುವು ನಾಚಿಕೆಗೇಡು ಎಂದರು.

     ಡಿವೈಎಫ್‍ಐ ಜಿಲ್ಲಾಧ್ಯಕ್ಷ ಎಂ. ನಂಜೇಗೌಡ ಮಾತನಾಡಿ, ಕೇಂದ್ರ ಸರಕಾರ ಮಹಾನ್ ಭ್ರಷ್ಟಾಚಾರದಿಂದ ಕೂಡಿರುವ ವಿವಾದಾತ್ಮಕ ರಾಫೆಲ್ ಯುದ್ಧ ವಿಮಾನ ಒಪ್ಪಂದವನ್ನು ರದ್ದುಪಡಿಸಬೇಕು. ಈ ಒಪ್ಪಂದದಲ್ಲಿ ಖಾಸಗೀ ಕಂಪೆನಿಗಳಿಗೆ ಅವಕಾಶ ನೀಡದೇ, ಸರಕಾರೀ ಸ್ವಾಮ್ಯದಎಚ್‍ಎಎಲ್ ಮೂಲಕವೇ ರಾಫೆಲ್ ಯುದ್ಧ ವಿಮಾನ ತಯಾರಿಕೆಯ ಮರು ಒಪ್ಪಂದಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

                ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link